ಭಾರತ-ಇಂಗ್ಲೆಂಡ್‌ 4ನೇ ಟೆಸ್ಟ್: ಗೆಲುವಿನ ಸನಿಹದತ್ತ ಟೀಮ್‌ ಇಂಡಿಯಾ!

masthmagaa.com:

‌ಭಾರತ-ಇಂಗ್ಲೆಂಡ್‌ ನಡುವಿನ 4ನೇ ಟೆಸ್ಟ್‌ನಲ್ಲಿ ಭಾರತ ಗೆಲುವಿನತ್ತ ದಾಪುಗಾಲಿಟ್ತಿದೆ. 3ನೇ ದಿನದಾಟದ ಆರಂಭದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಯುವ ಆಟಗಾರ ಧ್ರುವ್‌ ಜುರೆಲ್‌ರ 90 ರನ್‌ಗಳ ನೆರವಿನಿಂದ 307 ರನ್‌ ಗಳಿಸಿದೆ. ಇನ್ನು 2ನೇ ಇನ್ನಿಂಗ್ಸ್‌ ಆರಂಭಿಸಿದ್ದ ಆಂಗ್ಲರಿಗೆ ಭಾರತದ ಬೌಲರ್‌ಗಳು ಕಂಟಕವಾಗಿ ಕಾಡಿ ಕೇವಲ 145 ರನ್‌ಗಳಿಗೆ ಇಂಗ್ಲೆಂಡ್‌ ತಂಡವನ್ನ ಕಟ್ಟಿಹಾಕಿದ್ರು. ಈ ವೇಳೆ ಭಾರತದ ಪರ ಐದು ವಿಕೆಟ್‌ ಪಡೆದ ರವಿ ಚಂದ್ರನ್‌ ಅಶ್ವಿನ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ ಮತ್ತೊಂದು ದಾಖಲೆ ಬರೆದ್ರು. ಭಾರತದ ಪರ ತವರಿನಲ್ಲಿ 350ನೇ ಟೆಸ್ಟ್‌ ವಿಕೆಟ್‌ ಪಡೆದು ಅನಿಲ್‌ ಕುಂಬ್ಳೆ ಬಳಿಕ ಈ ಸಾಧನೆ ಮಾಡಿದ ದ್ವಿತೀಯ ಬೌಲರ್‌ ಅನ್ನೊ ಖ್ಯಾತಿಗೆ ಅಶ್ವಿನ್ ಪಾತ್ರರಾದ್ರು. ಇನ್ನು 192 ರನ್‌ಗಳ ಸುಲಭ ಗುರಿ ಬೆನ್ನತ್ತಿರೊ ಟೀಮ್‌ ಇಂಡಿಯಾ ಉತ್ತಮ ಆರಂಭದತ್ತ ಸಾಗಿದೆ. 3ನೇ ದಿನದಾಟದ ಅಂತ್ಯಕ್ಕೆ ಯಾವುದೇ ವಿಕೆಟ್‌ ನಷ್ಟವಿಲ್ಲದೇ 40 ರನ್‌ ಗಳಿಸಿದೆ. ಇನ್ನು ಗೆಲುವಿಗಾಗಿ ಭಾರತಕ್ಕೆ ಕೇವಲ 152 ರನ್‌ ಬೇಕಿದೆ.

-masthmagaa.com

Contact Us for Advertisement

Leave a Reply