ರೋಹಿತ್‌, ಗಿಲ್‌ ಶತಕ: ಪಾದಾರ್ಪಣೆ ಪಂದ್ಯದಲ್ಲಿ ಪಡಿಕ್ಕಲ್‌ ಅರ್ಧ ಶತಕ!

masthmagaa.com:

ಭಾರತ ಮತ್ತು ಇಂಗ್ಲೆಂಡ್‌ ನಡುವೆ ನಡೀತಿರೋ ಕೊನೆಯ ಟೆಸ್ಟ್‌ ಪಂದ್ಯದ 2ನೇ ದಿನ ಟೀಮ್‌ ಇಂಡಿಯಾ ಉತ್ತಮ ಪ್ರದರ್ಶನ ತೋರಿದೆ. ಎರಡನೇ ದಿನ ಫೀಲ್ಡಿಗಿಳಿದ ನಾಯಕ ರೋಹಿತ್‌ ಶರ್ಮಾ (103) ಹಾಗೂ ಶುಭ್‌ಮನ್‌ ಗಿಲ್‌ (110) ತಮ್ಮ ಶತಕಗಳ ಮೂಲಕ ಭರ್ಜರಿ ಅಡಿಪಾಯ ಹಾಕಿಕೊಟ್ರು. ನಂತರ ಈ ಪಂದ್ಯದ ಮೂಲಕ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡ್ತಿರೋ ಕನ್ನಡಿಗ ದೇವ್‌ದತ್ ಪಡಿಕ್ಕಲ್‌ 65 ರನ್‌ಗಳಿಸಿ ಔಟ್‌ ಆದ್ರು. ಇನ್ನು ಉತ್ತಮ ಲಯದಲ್ಲಿರೋ ಯುವ ಆಟಗಾರ ಸರ್ಫರಾಜ್‌ ಖಾನ್‌ 56 ರನ್‌ ಗಳಿಸಿ ಔಟ್ ಆದ್ರು. ಒಟ್ಟಾರೆ ಎರಡನೇ ದಿನದಾಟದ ಅಂತ್ಯಕ್ಕೆ ಭಾರತ 8 ವಿಕೆಟ್‌ ನಷ್ಟಕ್ಕೆ 473 ರನ್‌ ಕಲೆ ಹಾಕಿ ಬೃಹತ್‌ ಮೊತ್ತದತ್ತ ಸಾಗಿದೆ. ಕುಲ್ದೀಪ್‌ ಯಾದವ್‌ 27 ಹಾಗೂ ಜಸ್ಪ್ರಿತ್ ಬುಮ್ರಾ‌ 19 ರನ್‌ ಗಳಿಸಿ ಕೊನೆಯ ಓವರ್‌ಗಳಲ್ಲಿ ಇಂಗ್ಲೆಂಡ್‌ ಬೌಲರ್‌ಗಳಿಗೆ ಕಾಟ ಕೊಟ್ಟಿದ್ದಾರೆ. ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಸದ್ಯ 255 ರನ್‌ಗಳ ಮುನ್ನಡೆ ಸಾಧಿಸಿದೆ.

-masthmagaa.com

Contact Us for Advertisement

Leave a Reply