ವೈಜಾಖ್‌ ಟೆಸ್ಟ್: ಆಂಗ್ಲರಿಗೆ 399 ರನ್‌ಗಳ ಬೃಹತ್‌ ಟಾರ್ಗೆಟ್‌ ನೀಡಿದ ಭಾರತ!

masthmagaa.com:

ಭಾರತ-ಇಂಗ್ಲೆಂಡ್‌ ನಡುವಿನ ದ್ವಿತೀಯ ಟೆಸ್ಟ್‌ನ 2ನೇ ಇನ್ನಿಂಗ್ಸ್‌ನಲ್ಲಿ ಶುಭಮನ್‌ಗೆ ಅದ್ಭುತ ಶತಕದ ನೆರವಿನಿಂದ ಭಾರತ 253 ರನ್‌ ಕಲೆಹಾಕಿದೆ. ಈ ಮೂಲಕ ಆಂಗ್ಲರಿಗೆ 399ರನ್‌ಗಳ ಟಾರ್ಗೆಟ್‌ ನೀಡಿದೆ. ಇಂಗ್ಲೆಂಡ್‌ನ ಟಾಮ್‌ ಹಾರ್ಟ್ಲಿ ಹಾಗೂ ರೆಹಾನ್‌ ಅಹ್ಮದ್‌, ಗಿಲ್‌ ಬಿಟ್ಟು ಬೇರಾವ ಬ್ಯಾಟರ್‌ಗಳನ್ನೂ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ಇರೋಕೆ ಬಿಟ್ಟಿಲ್ಲ. ಇನ್ನು ಟಾರ್ಗೆಟ್‌ ಚೇಸ್‌ ಮಾಡೋಕೆ ಮುಂದಾಗಿರೋ ಇಂಗ್ಲೆಂಡ್ 3ನೇ ದಿನದಾಟ ಮುಗಿಯೋ ಟೈಮಲ್ಲಿ 1 ವಿಕೆಟ್‌ ನಷ್ಟಕ್ಕೆ 67 ರನ್‌ ಪೇರಿಸಿದೆ. ‌ಇನ್ನೊಂದ್ಕಡೆ ಸೌತ್‌ ಆಫ್ರಿಕಾ ವಿರುದ್ದದ ಟೆಸ್ಟ್‌ನಲ್ಲಿ ಶತಕ ಬಾರಿಸಿದ ನ್ಯೂಜಿಲೆಂಡ್‌ ಸ್ಟಾರ್ ಆಟಗಾರ ಕೇನ್‌ ವಿಲಿಯ‌ಮ್‌ಸನ್ ನೂತನ ದಾಖಲೆ ನಿರ್ಮಿಸಿದ್ದಾರೆ. 30ನೇ‌ ಟೆಸ್ಟ್ ಶತಕ ಗಳಿಸಿದ ವಿಲಿಯಮ್‌ಸನ್, 29 ಶತಕ ಬಾರಿಸಿರೋ ವಿರಾಟ್‌ ಕೊಹ್ಲಿ ಹಾಗೂ ಆಸ್ಟ್ರೇಲಿಯಾದ ಡಾನ್‌ ಬ್ರಾಡ್ಮನ್‌ರ ರೆಕಾರ್ಡ್‌ನ್ನ ಬ್ರೇಕ್‌ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply