ಆಂಗ್ಲರ ವಿರುದ್ದ ತವರಿನಲ್ಲಿ ಟೆಸ್ಟ್‌ ಸರಣಿ ಗೆದ್ದು ಬೀಗಿದ ಟೀಮ್‌ ಇಂಡಿಯಾ!

masthmagaa.com:

ರಾಂಚಿಯಲ್ಲಿ ನಡೆದ ಇಂಗ್ಲೆಂಡ್‌ ವಿರುದ್ದದ ನಾಲ್ಕನೇ ಟೆಸ್ಟ್‌ನಲ್ಲಿ ಟೀಮ್‌ ಇಂಡಿಯಾ ಭರ್ಜರಿ ಜಯಗಳಿಸಿದೆ. ಈ ಮೂಲಕ ಐದು ಪಂದ್ಯಗಳ ಟೆಸ್ಟ್‌ ಸರಣಿಯನ್ನ 3:1ರ ಲೀಡ್‌ ಮೂಲಕ ಭಾರತ ತನ್ನ ಕೈ ವಶ ಮಾಡ್ಕೊಂಡಿದೆ. ಆಂಗ್ಲ ಪಡೆಯ 192 ರನ್‌ಗಳ ಸುಲಭ ಗುರಿ ಬೆನ್ನತ್ತಿದ್ದ ಟೀಮ್‌ ಇಂಡಿಯಾ 4ನೇ ದಿನವೇ 5 ವಿಕೆಟ್‌ ನಷ್ಟದಲ್ಲಿ ಚೇಸ್‌ ಮಾಡಿದೆ. ಭಾರತದ ಪರ ನಾಯಕ ರೋಹಿತ್‌ ಶರ್ಮಾ 55, ಜೈಸ್ವಾಲ್‌ 37 ರನ್‌ಗಳಿಸಿ ಔಟಾದ್ರು. ಇನ್ನು ಶುಭಮನ್‌ ಗಿಲ್‌ ಅಜೇಯ 52 ರನ್‌ ಹಾಗೂ ಯುವ ಆಟಗಾರ ಧ್ರುವ್ ಜುರೇಲ್ 39 ರನ್ ಗಳಿಸಿ ಭಾರತವನ್ನ ಗೆಲುವಿನ ದಡ ಸೇರಿಸಿದ್ದಾರೆ.

-masthmagaa.com

Contact Us for Advertisement

Leave a Reply