ಭಾರತ-ಪಾಕ್‌ ಪಂದ್ಯಕ್ಕೂ ಮುನ್ನ ಮ್ಯೂಸಿಕಲ್‌ ಈವೆಂಟ್‌!

masthmagaa.com:

ಅತ್ಯಂತ ಉತ್ಸುಕತೆಯಿಂದ ಕ್ರಿಕೆಟ್‌ ಪ್ರೇಮಿಗಳು ಕಾಯುತ್ತಿರುವ ಭಾರತ vs ಪಾಕ್‌ ವಿಶ್ವಕಪ್‌ 2023 ಮ್ಯಾಚ್‌ಗೆ ದಿನಗಣನೆ ಶುರುವಾಗಿದೆ. ಅಕ್ಟೋಬರ್‌ 14 ರಂದು ನಡೆಯಲಿರುವ ಈ ಏಕದಿನ ಪಂದ್ಯಾಟ ಬಾಲಿವುಡ್‌ ತಾರೆಯರ ಮ್ಯೂಸಿಕಲ್‌ ಈವೆಂಟ್‌ನಿಂದ ಆರಂಭವಾಗಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಿಲಿರುವ ಭಾರತ vs ಪಾಕ್‌ ವಿಶ್ವ ಕಪ್‌ 2023 ರಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿ ಸಿನಿಮಾ ತಾರೆಯರ ಬಳಗ ಸೇರಲಿದೆ. ಗೋಲ್ಡನ್‌ ಟಿಕೆಟ್‌ ಹೊಂದಿರುವ ಸಚಿನ್‌ ತೆಂಡುಲ್ಕರ್‌, ರಜನಿಕಾಂತ್‌ ಮತ್ತು ಅಮಿತಾಬ್‌ ಬಚ್ಚನ್‌ರಂತಹ ಸೆಲೆಬ್ರಿಟಿಗಳ ಜೊತೆಗೆ ಅನೇಕ ಪ್ರಮುಖರು (VIPs) ಕೂಡ ಭಾಗಿಯಾಗಲಿದ್ದಾರೆ. ಸುಮಾರು 20-25 ಪಾಕಿಸ್ತಾನಿ ಮಾಧ್ಯಮ ಔಟ್‌ಲೆಟ್‌ಗಳು ಈ ಮ್ಯಾಚ್‌ನಲ್ಲಿ ಹಾಜರಿರಲಿದೆ. ಈ ಹೈ ವೋಲ್ಟೇಜ್‌ ಮ್ಯಾಚ್‌ಗೆ BCCI ಕೂಡ ಸಜ್ಜುಗೊಳ್ಳುತ್ತಿದೆ ಅಂತ ಗುಜರಾತ್‌ ಕ್ರಿಕೆಟ್‌ ಸಂಘದ ಕಾರ್ಯದರ್ಶಿಯಾದ ಅನಿಲ್‌ ಪಟೇಲ್‌ರವರು ತಿಳಿಸಿದ್ದಾರೆ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply