ಭಾರತೀಯ ಸೇನೆಗೆ ಮೆಗಾ ಪವರ್‌! FRCV ಟ್ಯಾಂಕ್ಸ್‌ ಪ್ರಸ್ತಾವನೆ!

masthmagaa.com:

ಹಿಂದಿನಿಂದಲೂ ಯುದ್ಧಭೂಮಿಯಲ್ಲಿ ರಾಜನಂತೆ ಮೆರೀತಿದ್ದ ಯುದ್ಧ ಟ್ಯಾಂಕ್‌ಗಳ ಸಾಮರ್ಥ್ಯದ ಬಗ್ಗೆ ಈಗೀಗ ಪ್ರಶ್ನೆಗಳು ಏಳ್ತಿವೆ. ಅದ್ರಲ್ಲೂ ರಷ್ಯಾ-ಯುಕ್ರೇನ್‌ ಯುದ್ಧ ಸ್ಟಾರ್ಟ್‌ ಆದ್ಮೇಲೆ ಯುದ್ಧ ಟ್ಯಾಂಕ್‌ಗಳ ಶಕ್ತಿಯ ಕುರಿತು ಡೌಟ್ಸ್‌ ಜಾಸ್ತೀನೆ ಆಗಿದೆ. ಈ ಡ್ರೋನ್‌ ವಾರ್‌ಫೇರ್‌ ಯುಗದಲ್ಲಿ ಟ್ಯಾಂಕ್‌ಗಳು ಎಫೆಕ್ಟಿವ್‌ ಆಗಿ ಬಳಕೆಯಾಗ್ತಾವಾ ಅಂತ. ಈ ಬಗ್ಗೆ ಚರ್ಚೆ ಆಗ್ತಿರೋ ಮಧ್ಯದಲ್ಲೇ ಇದೀಗ ಭಾರತ ತನ್ನ ಯುದ್ಧ ಟ್ಯಾಂಕ್‌ಗಳನ್ನ ಅಪ್‌ಗ್ರೇಡ್‌ ಮಾಡೋ ಬಗ್ಗೆ ಪ್ಲಾನ್‌ ಹಾಕೊಂಡಿದೆ. ಹೌದು, ಇದೀಗ ಭಾರತೀಯ ಸೇನೆ ನೂತನ ಯುದ್ಧ ಟ್ಯಾಂಕ್‌ಗಳ ಉತ್ಪಾದನೆಗೆ ಕೈ ಹಾಕಿದೆ. ಸುಮಾರು 57,000 ಕೋಟಿ ರೂಪಾಯಿ ವೆಚ್ಚದಲ್ಲಿ 1,770 ಫ್ಯೂಚರ್‌ ರೆಡಿ ಕಾಂಬ್ಯಾಟ್‌ ವೆಹಿಕಲ್‌ಗಳ (FRCV) ಉತ್ಪಾದಿಸೋ ಮೆಗಾ ಪ್ರಾಜೆಕ್ಟ್‌ಗೆ ಪ್ರಸ್ತಾವನೆ ನೀಡಿದೆ. ಈ ಮೂಲಕ 2030ರಿಂದ ಹಳೆಯದಾದ ರಷ್ಯಾ ಮೂಲದ T-72 ಟ್ಯಾಂಕ್‌ಗಳನ್ನ ರಿಪ್ಲೇಸ್‌ ಮಾಡೋ ಐಡಿಯಾ ಹೊಂದಿದೆ. ಹೀಗಂತ ಭಾರತೀಯ ಸೇನೆಯ ಹಿರಿಯ ಅಧಿಕಾರಿಯೊಬ್ರು ಮಾಹಿತಿ ನೀಡಿದ್ದಾರೆ. ಇನ್ನು ಈ ಹೊಸ FRCV ಟ್ಯಾಂಕ್‌ಗಳಲ್ಲಿ ಸ್ಪೆಷಲ್‌ ಟೆಕ್ನಾಲಜಿಗಳನ್ನ ಕೂಡ ಅಳವಡಿಸಲಾಗುತ್ತೆ. ಇದ್ರಲ್ಲಿ AI ಟೆಕ್ನಾಲಜಿ, ಡ್ರೋನ್‌ ಇಂಟಿಗ್ರೇಷನ್‌, ಆ್ಯಕ್ಟಿವ್‌ ಪ್ರೊಟೆಕ್ಷನ್‌ ಸಿಸ್ಟಮ್‌, ಏನಾದ್ರು ಅಪಾಯ ಎದುರಾಗೋ ಮೊದಲೇ ಅದನ್ನ ಡಿಟೆಕ್ಟ್‌ ಮಾಡುವಂತಹ ಅತ್ಯಾಧುನಿಕ ಸಿಸ್ಟಮ್‌ಗಳನ್ನ ಕೂಡ ಒಳಗೊಂಡಿರುತ್ತೆ. ಅಷ್ಟೇ ಅಲ್ದೇ ಅದ್ಯಾವ್ದೇ ರೀತಿಯ ಯುದ್ಧ ಸಾಮಗ್ರಿಗಳಿರಲಿ, ಅದ್ರ ಜೊತೆ ಒಂದುಗೂಡಿ ಕೆಲಸ ಮಾಡುತ್ತೆ. ಅಂದ್ಹಾಗೆ ಈ FRCV ಯುದ್ಧ ಟ್ಯಾಂಕ್‌ಗಳು 3 ಹಂತಗಳಲ್ಲಿ ಭಾರತೀಯ ಸೇನೆಗೆ ಸೇರ್ಪಡೆಯಾಗಲಿವೆ. ಮೊದಲಿಗೆ 590 ಟ್ಯಾಂಕ್‌ಗಳು ಸೇನೆಯನ್ನ ಜಾಯಿನ್‌ ಆಗ್ತವೆ. ಪ್ರತಿಯೊಂದೂ ಹಂತದಲ್ಲೂ ಹೊಸ ಹೊಸ ಟೆಕ್ನಾಲಜಿಗಳನ್ನ ಇಂಟ್ರಡ್ಯೂಸ್‌ ಮಾಡಲಾಗುತ್ತೆ ಅಂತ ಮಾಹಿತಿ ನೀಡಿದ್ದಾರೆ. ಅಲ್ಲದೆ ಯುದ್ಧ ಟ್ಯಾಂಕ್‌ನ ಸಾಮರ್ಥ್ಯದ ಮೇಲಿನ ಅನುಮಾನಗಳನ್ನ ಕೂಡ ತಳ್ಳಿಹಾಕಿದ್ದಾರೆ. ಅಂದ್ರೆ ಅಪ್‌ಗ್ರೇಡ್‌ ಆಗಿರೋ… ಸ್ಟ್ರಾಂಗ್‌ ಟೆಕ್ನಾಲಜಿಯುಳ್ಳ ಪವರ್‌ಫುಲ್‌ ಯುದ್ಧ ಸಾಮಗ್ರಿಗಳಾದ ಡ್ರೋನ್‌, ಆ್ಯಂಟಿ ಟ್ಯಾಂಕ್‌ ಮಿಸೈಲ್‌ಗಳನ್ನ ಈ ಹಳೆ ಯುದ್ಧ ಸಿಸ್ಟಮ್‌ ಟ್ಯಾಂಕ್‌ಗಳು ಎದುರಿಸ್ಬೋದಾ! ಟ್ಯಾಂಕ್‌ಗಳು ಸಿಕ್ಕಾಪಟ್ಟೆ ಹೆವಿ ಇದ್ದು… ಈಗಿನ ಯುದ್ಧ ಸಾಮಗ್ರಿಗಳಿಗೆ ಕಂಪೇರ್‌ ಮಾಡಿದ್ರೆ ಬಹಳ ಸ್ಲೋ ಇದೆ. ಇವುಗಳನ್ನ ಆ್ಯಂಟಿ ಟ್ಯಾಂಕ್‌ ಮಿಸೈಲ್‌ಗಳು ತುಂಬಾ ಈಸಿಯಾಗಿ ಹೊಡೆದುರುಳಿಸ್ಬಿಡುತ್ತೆ. ಮಾರ್ಡನ್‌ ಜಗತ್ತಿನ ಯುದ್ಧದಲ್ಲಿ ಯುದ್ಧ ಟ್ಯಾಂಕ್‌ ವೇಸ್ಟ್‌ ಅಂತೆಲ್ಲಾ ಇತ್ತೀಚಿನ ದಿನಗಳಲ್ಲಿ ವಿಶ್ಲೇಷಣೆ ನಡೆಸಿ ರಿಪೋರ್ಟ್‌ ಮಾಡಲಾಗ್ತಿದೆ. ಅದ್ರಲ್ಲೂ ರಷ್ಯಾ-ಯುಕ್ರೇನ್‌ ಯುದ್ಧದ ಸಂದರ್ಭದಲ್ಲಿ ರಷ್ಯಾ ಟ್ಯಾಂಕ್‌ಗಳು ಯುಕ್ರೇನ್‌ನ ಡ್ರೋನ್‌, ಮಿಸೈಲ್‌ಗಳ ದಾಳಿಗೆ ಧೂಳಿಪಟವಾದ್ಮೇಲಂತೂ ಈ ವಿಷಯ ಇನ್ನಷ್ಟು ಚರ್ಚೆಯಾಗ್ತಿದೆ. ಆದ್ರೆ ಭಾರತ ಮಾತ್ರ ಈ ಎಲ್ಲಾ ರಿಪೋರ್ಟ್‌, ರಿಸರ್ಚ್‌ಗಳನ್ನ ರಿಜೆಕ್ಟ್‌ ಮಾಡಿದೆ. ರಷ್ಯಾ ಟ್ಯಾಂಕ್‌ಗಳು ನಾಶವಾಗ್ತಿರೋದು, ರಷ್ಯಾ ಸೇನೆಯ ಸ್ಟ್ರಾಟಜಿ ವೀಕ್‌ ಇರೋದ್ರಿಂದಲೇ ಹೊರತು ಬೇರೆ ಯಾವ್ದೇ ಕಾರಣದಿಂದ ಅಲ್ಲʼ ಅಂತ ಹೇಳಿದೆ. ಆ ಮೂಲಕ ಹೆಚ್ಚಿನ ದೇಶಗಳು ತಮ್ಮ ಸೇನೆಯಲ್ಲಿ ಟ್ಯಾಂಕ್‌ ಫ್ಲೀಟ್‌ ಕಡಿಮೆ ಮಾಡೋ ಬಗ್ಗೆ ಯೋಚಿಸ್ತಿದ್ರೆ, ಭಾರತ ಮಾತ್ರ ಇನ್ನಷ್ಟು ಟ್ಯಾಂಕ್‌ಗಳನ್ನ ಉತ್ಪಾದಿಸೋ ಬಗ್ಗೆ ಚಿಂತಿಸ್ತಿದೆ.

-masthmagaa.com

Contact Us for Advertisement

Leave a Reply