ಭಾರತೀಯರಿಗೆ ಇಸ್ರೇಲ್‌ನಲ್ಲಿರೋ ಭಾರತದ ರಾಯಭಾರಿಯಿಂದ ಸಲಹೆ!

masthmagaa.com:

ಇರಾನ್‌-ಇಸ್ರೇಲ್‌ ಸಂಘರ್ಷ ವಿಶ್ವದಾದ್ಯಂತ ಆತಂಕ ಮೂಡಿಸಿದೆ. ಇದೀಗ ಇಸ್ರೇಲ್‌ನಲ್ಲಿರೋ ಭಾರತದ ರಾಯಭಾರ ಕಚೇರಿ ಭಾರತೀಯರಿಗೆ ಕೆಲ ಪ್ರಮುಖ ಸಲಹೆಗಳನ್ನ ರವಾನಿಸಿದೆ. ಹೆದರಬೇಡಿ…ಶಾಂತಿಯಿಂದಿರಿ ಹಾಗೂ ಸುರಕ್ಷತೆಗಾಗಿ ಸೂಕ್ತ ನಿಯಮಗಳನ್ನ ಪಾಲಿಸಿ ಅಂತ ಅಡ್ವೈಸ್‌ ಮಾಡಿದೆ. ʻಭಾರತೀಯ ರಾಯಭಾರಿ ಇಸ್ರೇಲ್‌ ಪರಿಸ್ಥಿತಿಯನ್ನ ಬಹಳ ಹತ್ತಿರದಿಂದ ಮಾನಿಟರ್‌ ಮಾಡ್ತಿದೆ. ಭಾರತೀಯರ ರಕ್ಷಣೆಗಾಗಿ, ಇಸ್ರೇಲಿ ಅಧಿಕಾರಿಗಳು ಮತ್ತು ಭಾರತೀಯ ಅಧಿಕಾರಿಗಳು ಕೆಲಸ ಮಾಡ್ತಿದ್ದಾರೆʼʼ ಅಂತೇಳಿದೆ. ಜೊತೆಗೆ ಭಾರತೀಯ ರಾಯಭಾರಿ ನೀಡಿರೋ ಲಿಂಕ್‌ ಒಂದಕ್ಕೆ ವಿಸಿಟ್‌ ನೀಡಿ…ರೆಜಿಸ್ಟರ್‌ ಆಗಿ, ಟಚ್‌ನಲ್ಲಿರಿ ಅಂತ ಇಸ್ರೇಲ್‌ನಲ್ಲಿರೋ ಭಾರತೀಯರಿಗೆ ಒತ್ತಾಯಿಸಿದೆ.

-masthmagaa.com

Contact Us for Advertisement

Leave a Reply