ಲಂಡನ್‌ನಲ್ಲಿ ಹಾರಿದ ಕನ್ನಡ ಧ್ವಜ! ಪದವಿ ಸಮಾರಂಭದಲ್ಲಿ ಕನ್ನಡಿಗನ ಕನ್ನಡ ಪ್ರೇಮ!

masthmagaa.com:

ಲಂಡನ್‌ನ ಸಿಟಿ ವಿಶ್ವವಿದ್ಯಾಲಯದ ಪದವಿ ಸಮಾರಂಭದಲ್ಲಿ ಕನ್ನಡಿಗ ಅಧಿಶ್‌ ಆರ್‌ ವಾಲಿ ಅವರು ಕನ್ನಡ ಧ್ವಜ ಹಾರಿಸಿ ಸಂಭ್ರಮಿಸಿದ್ದಾರೆ. ವಾಲಿ ಈ ಬಗ್ಗೆ ಟ್ವೀಟ್‌ ಮಾಡಿದ್ದು, ಲಂಡನ್‌ನ ಸಿಟಿ ವಿವಿಯಲ್ಲಿ ಬೆಯೆಸ್‌ ಬ್ಯುಸಿನೆಸ್‌ ಸ್ಕೂಲ್‌ನಲ್ಲಿ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದೇನೆ. ಪದವಿ ಪ್ರದಾನ ಸಮಾರಂಭದಲ್ಲಿ ನಮ್ಮ ಕರ್ನಾಟಕ ರಾಜ್ಯ ಧ್ವಜವನ್ನ ಹಾರಿಸಿದ್ದು ಹೆಮ್ಮೆಯ ಕ್ಷಣ ಅಂತ ವಿಡಿಯೋ ಶೇರ್‌ ಮಾಡಿದ್ದಾರೆ. ಈ ವಿಡಿಯೋವನ್ನ ಕರ್ನಾಟಕ ಕಾಂಗ್ರೆಸ್‌ ಹಂಚಿಕೊಂಡಿದ್ದು, ʻಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು ಅನ್ನೊ ಕುವೆಂಪು ಅವರ ಮಾತಿನಂತೆ, ಲಂಡನ್‌ನಲ್ಲಿ ಕನ್ನಡ ಬಾವುಟವನ್ನ ಹೆಮ್ಮೆಯಿಂದ ಹಾರಿಸಿದ ಅಧಿಶ್‌ ಅವ್ರಿಗೆ ಅಭಿನಂದನೆ ಅಂತ ಹಾರೈಸಿದೆ.

-masthmagaa.com

Contact Us for Advertisement

Leave a Reply