ಕೆನಡಾಗೆ ತಿರುಗೇಟು ಕೊಟ್ಟ ಭಾರತ ಮಾಡಿದ್ದೇನು?

masthmagaa.com:

ಖಲಿಸ್ತಾನಿ ವಿಚಾರವಾಗಿ ಭಾರತ-ಕೆನಡಾ ನಡುವಿನ ರಾಜತಾಂತ್ರಿಕ ಸಂಘರ್ಷ ದಿನೇ ದಿನೇ ಹೆಚ್ಚಾಗ್ತಿದೆ. ಕೆನಡಾ ತನ್ನ ಪ್ರಜೆಗಳಿಗೆ ಕಾಶ್ಮೀರಕ್ಕೆ ಹೋಗಬೇಡಿ ಅಂತ ಸೂಚನೆ ನೀಡಿದ ಬೆನ್ನಲ್ಲೇ ಈಗ ಭಾರತ ಕೂಡ ತನ್ನ ಪ್ರಜೆಗಳಿಗೆ ಅಡ್ವೈಸರಿಯೊಂದನ್ನ ರಿಲೀಸ್‌ ಮಾಡಿದೆ. ಕೆನಡಾದಲ್ಲಿ ಹೆಚ್ಚುತ್ತಿರುವ ಭಾರತ ವಿರೋಧಿ ಚಟುವಟಿಕೆಗಳು ಮತ್ತು ರಾಜಕೀಯ ಮನ್ನಣೆ ಪಡೆದ ಹೇಟ್‌ ಕ್ರೈಂಗಳು ಹಾಗೆ ಹಿಂಸಾಚಾರದ ದೃಷ್ಟಿಯಿಂದ, ಅಲ್ಲಿನ ಎಲ್ಲಾ ಭಾರತೀಯರು ಜಾಗರೂಕರಾಗಬೇಕು. ಜೊತೆಗೆ ಕೆನಡಾಗೆ ಪ್ರಯಾಣಿಸಲು ಪ್ಲಾನ್‌ ಮಾಡ್ತಿರೋರು ಅತ್ಯಂತ ಕೇರ್‌ಫುಲ್‌ ಆಗಿರ್ಬೇಕು ಅಂತ ಒತ್ತಾಯಿಸಲಾಗಿದೆ. ಇತ್ತೀಚೆಗೆ ಭಾರತ ವಿರೋಧಿ ಅಜೆಂಡಾಗಳನ್ನ ಆಪೋಸ್‌ ಮಾಡುವ ಭಾರತೀಯ ರಾಜತಾಂತ್ರಿಕರು ಮತ್ತು ಭಾರತೀಯ ಸಮುದಾಯವನ್ನ ಗುರಿಯಾಗಿಸಿಕೊಂಡು ಬೆದರಿಕೆ ಹಾಕಲಾಗ್ತಿದೆ. ಈ ಹಿನ್ನಲೆಯಲ್ಲಿ ಆ ರೀತಿಯ ಘಟನೆಗಳು ನಡೆದ ಪ್ರದೇಶಗಳಿಗೆ ಟ್ರಾವೆಲ್‌ ಮಾಡೋದನ್ನ ಅವೈಡ್‌ ಮಾಡಿ ಅಂತ ಸೂಚನೆಯಲ್ಲಿ ತಿಳಿಸಲಾಗಿದೆ. ಜೊತೆಗೆ ಕೆನಡಾದಲ್ಲಿ ಭದ್ರತಾ ಸಮಸ್ಯೆ ಉಂಟಾಗಿದ್ದು, ಅಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಎಚ್ಚರಿಕೆವಹಿಸಿ, ಭಾರತೀಯ ಹೈ ಕಮಿಷನ್‌ನನ ವೆಬ್‌ಸೈಟ್‌ ಅಥ್ವಾ madad.gov.in ಪೋರ್ಟಲ್‌ನಲ್ಲಿ ರಿಜಿಸ್ಟರ್‌ ಮಾಡಿಕೊಳ್ಳಿ ಅಂತ ತಿಳಿಸಲಾಗಿದೆ. ಈ ಬಗ್ಗೆ ರಿಯಾಕ್ಟ್‌ ಮಾಡಿರುವ ಕಾಂಗ್ರೆಸ್‌ ನಾಯಕ ಶಶಿ ತರೂರ್‌, ನಾವು ಎರಡೂ ಕಡೆಯಿಂದ ಟಿಟ್‌ ಫಾರ್‌ ಟ್ಯಾಟ್‌ ಅಥ್ವಾ ಏಟಿಗೆ ಎದುರೇಟನ್ನ ನೋಡ್ತಿದಿವಿ. ಮೊದಲು ರಾಜತಾಂತ್ರಿಕ ಅಧಿಕಾರಿಯನ್ನ ಉಚ್ಛಾಟಿಸಿದ್ದು, ಈಗ ಅಡ್ವೈಸರಿ.. ದುರಾದೃಷ್ಟವಶಾತ್‌ ಕೆನಡಾ ರಾಜತಾಂತ್ರಿಕ ಮಾರ್ಗದ ಬದಲು ಪಬ್ಲಿಕ್‌ ರೂಟ್‌ನ ಆಯ್ಕೆ ಮಾಡ್ಕೊಂಡಿದೆ. ಏನೇ ಸಮಸ್ಯೆಯಿದ್ರೂ ಭಾರತದಂತಹ ಸ್ನೇಹಪರ ಸರ್ಕಾರದೊಂದಿಗೆ ಪ್ರೈವೇಟ್‌ ಆಗಿ ಮಾತಾಡಬಹುದಿತ್ತು. ಈ ರೀತಿ ಮಾಡುವ ಮೂಲಕ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡು ಅವರು ಒಂದು ಒಳ್ಳೆಯ ಸಂಬಂಧವನ್ನ ಅಪಾಯಕ್ಕೆ ಸಿಲುಕಿಸಿದ್ದಾರೆ ಅಂತ ಅಭಿಪ್ರಾಯಪಟ್ಟಿದ್ದಾರೆ.

ಇನ್ನೊಂದ್‌ ಕಡೆ ತಂದೆಯ ಸಾವಿನ ವಿಚಾರವಾಗಿ ಮೊದಲಿನಿಂದಲೂ ಭಾರತದ ಮೇಲೆ ಅನುಮಾನವಿತ್ತು. ಈಗ ನಿಜವಾಯಿತು. ಕೆನಡಾ ಪ್ರಧಾನಿಗಳ ಹೇಳಿಕೆ ತಮ್ಮ ತಂದೆಯ ಸಾವಿಗೆ ನ್ಯಾಯ ದೊರೆಯುವ ವಿಶ್ವಾಸ ಮೂಡಿಸಿದೆ. ಇದು ಕೇವಲ ಆರಂಭವಷ್ಟೇ.. ಮುಂದಿನ ದಿನಗಳಲ್ಲಿ ಇನ್ನೂ ಸಾಕಷ್ಟು ವಿಚಾರಗಳು ಹೊರಬರಲಿವೆ ಅಂತ ಹರ್ದೀಪ್‌ ಸಿಂಗ್‌ ನಿಜ್ಜರ್‌ ಪುತ್ರ ಬಲರಾಜ್ ಸಿಂಗ್ ನಿಜ್ಜರ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply