2020-21ರಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಮೈನಸ್ 7.3%

masthmagaa.com:

ಕೊರೊನ ಪ್ಯಾಂಡೆಮಿಕ್ ನಡುವೆಯೂ ಭಾರತದ ಜಿಡಿಪಿ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ 1.6 ಪರ್ಸೆಂಟ್ ಬೆಳವಣಿಗೆ ಕಂಡಿದೆ ಅಂತ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಅಂದ್ರೆ ಇದು 2020-21 ಆರ್ಥಿಕ ವರ್ಷದ ಕೊನೇ ಅಥವಾ ನಾಲ್ಕನೇ ತ್ರೈಮಾಸಿಕದ ಲೆಕ್ಕಾಚಾರ. ಇಡೀ ವರ್ಷದ ಲೆಕ್ಕ ತಗೊಂಡ್ರೆ ಒಟ್ಟು ರಾಷ್ಟ್ರೀಯ ಉತ್ಪನ್ನ ಬೆಳವಣಿಗೆ ದರ ಇನ್ನೂ -7.3 ಇದೆ ಅಂತಾನೂ ಸರ್ಕಾರ ಮಾಹಿತಿ ನೀಡಿದೆ. ಇದು ಕಳೆದ ನಾಲ್ಕು ದಶಕಗಳಲ್ಲಿ ದೃಢಪಟ್ಟ ಅತಿ ಕಡಿಮೆ ಜಿಡಿಪಿ ಬೆಳವಣಿಗೆ ದರ ಆಗಿದೆ. 1979-80ರ ಆರ್ಥಿಕ ವರ್ಷದಲ್ಲಿ -5.2ರಷ್ಟು ಜಿಡಿಪಿ ಬೆಳವಣಿಗೆ ಆಗಿತ್ತು.

ಅಂದ್ಹಾಗೆ 2020-21ರ ಮೊದಲ ತ್ರೈಮಾಸಿಕದಲ್ಲಿ ಕೊರೋನ ಕಾರಣ ದೇಶದ ಆರ್ಥಿಕತೆ ರಿಸೆಶನ್​ಗೆ ಹೋಗಿತ್ತು. ಅಂದ್ರೆ ಹಿಂಜರಿತ ಉಂಟಾಗಿತ್ತು. ಅಂದ್ರೆ ಜಿಡಿಪಿ ಬೆಳವಣಿಗೆ ದರ -24.4 ಪರ್ಸೆಂಟ್​ ದಾಖಲಾಗಿತ್ತು. ಎರಡನೇ ತ್ರೈಮಾಸಿಕದಲ್ಲಿ -7.4 ಪರ್ಸೆಂಟ್, ಮೂರನೇ ತ್ರೈಮಾಸಿಕದಲ್ಲಿ 0.5 ಪರ್ಸೆಂಟ್​ ದಾಖಲಾಗಿತ್ತು. ಇದೀಗ 1.6 ಪರ್ಸೆಂಟ್​ ದಾಖಲಾಗಿದೆ. ಅಂದ್ರೆ ಕಳೆದೆರಡು ತ್ರೈಮಾಸಿಕದಲ್ಲಿ ಸತತವಾಗಿ ಸಣ್ಣ ಪ್ರಮಾಣದ ಚೇತರಿಕೆ ಕಂಡುಬರ್ತಿದೆ. ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದ ಹಣಕಾಸು ನೀತಿ ಸಮಿತಿ, 2021-22ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರ 10.5 ಪರ್ಸೆಂಟ್ ಇರುತ್ತೆ ಅಂತ ಅಂದಾಜು ಮಾಡಿದೆ.

-masthmagaa.com

Contact Us for Advertisement

Leave a Reply