ಇಂದಿರಾ ಗಾಂಧಿ ಆಡಳಿತದಲ್ಲಿ ನನ್ನ ತಂದೆಯನ್ನು ಕೆಲಸದಿಂದ ತೆಗೆದು ಹಾಕಿದ್ರು ಎಂದ ವಿದೇಶಾಂಗ ಸಚಿವ ಎಸ್‌ ಜೈಶಂಕರ್‌!

masthmagaa.com:

ಇಂದಿರಾ ಗಾಂಧಿ ಅವ್ರು 1980ರಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ಡಿಫೆನ್ಸ್‌ ಪ್ರೊಡಕ್ಷನ್‌ ಕಾರ್ಯದರ್ಶಿಯಾಗಿದ್ದ ನಮ್ಮ ತಂದೆಯನ್ನ ಆ ಸ್ಥಾನದಿಂದ ಕೆಳಗಿಳಿಸಿದ್ರು ಅಂತ ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ ಹೇಳಿದ್ದಾರೆ. ಅಲ್ದೆ ರಾಜೀವ್‌ ಗಾಂಧಿ ಪ್ರಧಾನಿಯಾದಾಗ ನನ್ನ ತಂದೆಗಿಂತಲೂ ಜೂನಿಯರ್‌ ಆಗಿದ್ದವ್ರನ್ನ ಸಂಪುಟ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ರು ಅಂತ ಹೇಳಿದ್ದಾರೆ. ಅಂದ್ಹಾಗೆ ಜೈಶಂಕರ್‌ ಅವ್ರ ತಂದೆ, ಕೆ ಸುಬ್ರಹ್ಮಣ್ಯಮ್‌ ಅವ್ರು ದೇಶದ ಪ್ರಮುಖ ರಾಷ್ಟ್ರೀಯ ಭದ್ರತಾ ನಿಪುಣರಲ್ಲಿ ಒಬ್ರು ಅಂತ ಖ್ಯಾತಿ ಪಡೆದಿದ್ರು. ವಿದೇಶಾಂಗ ಸೇವೆ ಉದ್ಯೋಗದಿಂದ ರಾಜಕಾರಣದವರೆಗಿನ ತಮ್ಮ ಹಾದಿಯ ಬಗ್ಗೆ ಮಾತಾಡುವಾಗ ಈ ಮಾಹಿತಿಯನ್ನ ಜೈಶಂಕರ್ ಹಂಚಿಕೊಂಡಿದ್ದಾರೆ. ಇನ್ನೊಂದ್‌ ಕಡೆ ಚೀನಾ ವಿಷಯವಾಗಿ ಜೈಶಂಕರ್‌ ನೀಡಿರೋ ಹೇಳಿಕೆಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿವೆ. ವಿದೇಶಾಂಗ ಸಚಿವರಾಗಿ ಜೈಶಂಕರ್‌ ಅವ್ರು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಅಂತ ಕಾಂಗ್ರೆಸ್‌ ಆರೋಪಿಸಿದೆ. ಸಚಿವರ ಹೇಳಿಕೆಗಳು ಭಾರತದ ಸಶಸ್ತ್ರ ಪಡೆಗಳ ಶೌರ್ಯವನ್ನ ಕೀಳಾಗಿಸುತ್ತೆ ಹಾಗೂ ಅವರ ನೈತಿಕತೆಯನ್ನ ಕಡಿಮೆ ಮಾಡುತ್ತೆ ಅಂತ ಆಕ್ರೋಶ ಹೊರಹಾಕಿದ್ದಾರೆ. ಅಂದ್ಹಾಗೆ ನಮ್ಮದು ಸಣ್ಣ ಆರ್ಥಿಕತೆ ಹಾಗೂ ಚೀನಾ ದೊಡ್ಡ ಆರ್ಥಿಕತೆ. ನಾವು ಅವರೊಂದಿಗೆ ಜಗಳವಾಡೋಕೆ ಹೋಗಲ್ಲ ಅಂತ ಹೇಳಿಕೆ ನೀಡಿದ್ರು. ಜೈಶಂಕರ್‌ ಈ ರೀತಿಯ ಹೇಳಿಕೆಯ ಮೂಲಕ ನಮ್ಮ ಪ್ರಾದೇಶಿಕ ಸಾರ್ವಭೌಮತ್ವವನ್ನ ರಕ್ಷಿಸೋಕೆ ನಾವು ಸಮರ್ಥರಲ್ಲ ಅಂತ ಅಂತಿದಾರಾ? ಅವರೊಬ್ಬ ವಿಫಲ ವಿದೇಶಾಂಗ ಸಚಿವ ಅಂತ ಕಾಂಗ್ರೆಸ್‌ ಆರೋಪಿಸಿದೆ. ಅಲ್ದೇ ಗಡಿಗೆ ಸೈನಿಕರನ್ನ ರಾಹುಲ್‌ ಕಳಿಸಿದ್ದಾರಾ? ಇಲ್ಲ. ಪ್ರಧಾನಿ ಮೋದಿ ಕಳಿಸಿದ್ದಾರೆ ಅನ್ನೊ ಜೈಶಂಕರ್‌ ಹೇಳಿಕೆ ಆರೋಗಂಟ್‌ನಿಂದ ಕೂಡಿದೆ ಅಂತ ಕಿಡಿಕಾರಿದೆ.

-masthmagaa.com

Contact Us for Advertisement

Leave a Reply