ಇಂಡೋನೇಷ್ಯಾ ಜೈಲಿನಲ್ಲಿ ಭಾರೀ ಅಗ್ನಿ ಅನಾಹುತ | 41 ಕೈದಿಗಳು ಸಾವು

masthmagaa.com:

ಇಂಡೋನೇಷ್ಯಾ ರಾಜಧಾನಿ ಜಕಾರ್ತಾ ಹೊರ ವಲಯದಲ್ಲಿರೋ ಜೈಲಿನಲ್ಲಿ ನಸುಕಿನ ಜಾವ ಭೀಕರ ಅಗ್ನಿ ದುರಂತ ಸಂಭವಿಸಿದೆ. ಮಲಗಿದ್ದ ಕೈದಿಗಳು ಸೇರಿದಂತೆ 41 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 70ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಬೆಳಗ್ಗೆ ಮೂರು ಗಂಟೆ ಸುಮಾರಿಗೆ, ಹೆಚ್ಚಾಗಿ ಮಾದಕವಸ್ತು ಅಪರಾಧ ಸಂಬಂಧಿಸಿದ ಕೈದಿಗಳೇ ಹೆಚ್ಚಿದ್ದ ಬ್ಲಾಕ್ ನಲ್ಲಿ ಬೆಂಕಿ ಕಾಣಿಸಿಕೊಂಡು ಈ ಅನಾಹುತ ಉಂಟಾಗಿದೆ. ಘಟನೆಗೆ ಏನು ಕಾರಣ ಅಂತ ತನಿಖೆ ಮಾಡ್ತಿದ್ದೀವಿ. ಮೇಲ್ನೋಟಕ್ಕೆ ಇದು ಎಲೆಕ್ಟ್ರಿಕ್ ಪ್ರಾಬ್ಲಮ್ ನಿಂದ ಆಗಿರಬೋದು ಅನಿಸ್ತಿದೆ ಅಂತ ಅಧಿಕಾರಿಗಳು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply