ಇಂದೋರ್‌ TCS, Infosys ಕ್ಯಾಂಪಸ್‌ನಲ್ಲಿ ಚಿರತೆಗಳ ರಾಜ್ಯಭಾರ!

masthmagaa.com:

ಮಧ್ಯಪ್ರದೇಶದಲ್ಲಿ ಕಾಡು, ಹುಲಿ, ಚಿರತೆಗಳ ಸಂಖ್ಯೆ ದೇಶದಲ್ಲೇ ಹೆಚ್ಚು ಅನ್ನೋದೇನೋ ಸರಿ. ಈಗ ಇಂದೋರ್‌ನಲ್ಲಿ ಏನಾಗಿದೆ ಅಂದ್ರೆ, ಸಿಟಿಯಲ್ಲಿರೋ ಟೆಕ್‌ ಕಂಪನಿಗಳ ಕ್ಯಾಂಪಸ್‌ನಲ್ಲಿ ಚಿರತೆಗಳು ಬೇಕಾಬಿಟ್ಟಿ ಓಡಾಡ್ಕೊಂಡಿವೆ. ಇಂಡೋರ್‌ನಲ್ಲಿ ಊರಾಚೆ TCS ಹಾಗೂ Infosys ಕಂಪನಿ ಕ್ಯಾಂಪಸ್‌ಗಳು ಅಕ್ಕ ಪಕ್ಕ ಇವೆ. ಇಲ್ಲಿ, ಒಂದಲ್ಲಾ ಎರಡಲ್ಲ, ಮೂರ್ಮೂರು ಚಿರತೆಗಳು ಒಡಾಡ್ಕೊಂಡ್‌ ಇವೆ. ಒಂದಿನ ಇಲ್‌ ಕಾಣಿಸ್ಕೊಂಡ್ರೆ ಇನ್ನೊಂದಿನ ಅಲ್ಲಿ. ಈಗ ಎರಡೂ ಕಂಪನಿ ಕ್ಯಾಂಪಸ್‌ನಲ್ಲಿರೋ ಮನೆಗಳಲ್ಲಿ ಜನ್ರನ್ನ ಒಳಗೇ ಇರಿ… ಇಂದೋರ್‌ ಜನ್ರು ಇಂಡೋರ್ನಲ್ಲೇ ಇರಿ ಅಂತ ಅಧಿಕಾರಿಗಳು ಹೇಳಿದ್ದಾರೆ, ಅಲ್ದೇ ಚಿರತೆಗಳ್ನ ಹಿಡಿಯೋಕೆ ಮುಂದಾಗಿದ್ದಾರೆ.

-masthmagaa.com

Contact Us for Advertisement

Leave a Reply