ಹಿರಿಯ ನಾಯಕ ಗುಲಾಂ ನಬಿ ಅಜಾದ್‌ ಕಾಂಗ್ರೆಸ್‌ಗೆ ಟಾಟಾ! ರಾಹುಲ್‌ ಗಾಂಧಿ ಚೈಲ್ಡೀಶ್‌ ಅಂತ ಹೇಳಿದ್ದೇಕೆ ಗೊತ್ತಾ?

masthmagaa.com:

ದೇಶದಲ್ಲಿ ಸಾಲು ಸಾಲು ಚುನಾವಣೆಗಳನ್ನ ಎದುರಿಸಲಿರೊ ಭಾರತ ರಾಷ್ಟ್ರೀಯ ಕಾಂಗ್ರೆಸ್‌ಗೆ ಬಹುದೊಡ್ಡ ಪೆಟ್ಟು ಬಿದ್ದಿದೆ. ಹಿರಿಯ ನಾಯಕ ಗುಲಾಂ ನಬಿ ಅಜಾದ್‌ ಕಾಂಗ್ರೆಸ್‌ಗೆ ಅಂತಿಮವಾಗಿ ಗುಡ್‌ ಬೈ‌ ಹೇಳಿದ್ದು ಪಕ್ಷದ ಎಲ್ಲ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಪಕ್ಷದಲ್ಲಿ ಹಿರಿಯ ತಲೆಯೊಂದು ಕಾಂಗ್ರೆಸ್‌ ಪಕ್ಷದಿಂದ ಜೂಟ್‌ ಆಗಿದೆ. ಪಕ್ಷದೊಂದಿಗೆ ಇದ್ದ ಸುಮಾರು ಐದು ದಶಕಗಳ ಸುದೀರ್ಘ ನಂಟಿಗೆ ಅಜಾದ್‌ ಎಳ್ಳು ನೀರು ಬಿಟ್ಟು ಹೊರನಡೆದಿದ್ದಾರೆ. ಇನ್ನು ರಾಜೀನಾಮೆ ಕೊಟ್ಟು ಸುಮ್ನೆ ಅಂತೂ ಹೋಗಿಲ್ಲ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯನ್ನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರೋ ಗುಲಾಂ, ರಾಹುಲ್‌ ಗಾಂಧಿ ಒಬ್ಬ ಚೈಲ್ಡೀಶ್‌ ಮತ್ತು ಅಪ್ರಬುದ್ದ ನಾಯಕ., ತಾವು ಹೋಗೋಕೆ ಅವರೇ ಕಾರಣ ಅಂತ ಜಾಡಿಸಿದ್ದಾರೆ. ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬರೆದಿರುವ ಪತ್ರದಲ್ಲಿ ಕಾಂಗ್ರೆಸ್‌ನಲ್ಲಿ ಈಗ ಇರೋ ಪ್ರಾಬ್ಲಂಗಳು ಹಾಗೂ ತಾವು ಹೊರಗೆ ಬರೋಕೆ ಕಾರಣಗಳನ್ನು ಉಲ್ಲೇಖ ಮಾಡಿದ್ದಾರೆ. 2014ರ ಲೋಕಸಭಾ ಚುನಾವಣೆಯಿಂದ ಶುರುವಾದ ಕಾಂಗ್ರೆಸ್‌ನ ಸೋಲು ಇನ್ನೂ ನಿಂತಿಲ್ಲ. ಪತ್ರ ಬರೆದ 23 ಹಿರಿಯ ನಾಯಕರು ಮಾಡಿದ್ದ ದೊಡ್ಡ ಮತ್ತು ಏಕೈಕ ಅಪರಾಧ ಅಂದ್ರೆ, ಪಕ್ಷದೊಳಗಿನ ದೌರ್ಬಲ್ಯ ಮತ್ತು ಅದಕ್ಕೆ ಪರಿಹಾರಗಳನ್ನ ಸೂಚಿಸಿದ್ದು..ಅಂತ ಚಾಟಿ ಬೀಸಿದ್ದಾರೆ.

ಇನ್ನು ಕಾಂಗ್ರೆಸ್‌ ಇದಕ್ಕೆ ತಿರುಗೇಟು ಕೊಟ್ಟಿದೆ. ಗುಲಾಂ ನಬಿ ಅಜಾದ್‌ ಬಿಜೆಪಿ ಮತ್ತು ಆರೆಸ್ಸೆಸ್‌ ಭಾಷೆಯಲ್ಲಿ ಮಾತನಾಡ್ತಿದ್ದಾರೆ ಅಂತ ಹೇಳಿದೆ. GNA ಯವರ DNA ʻಮೋದಿ ಫೈಡ್‌ʼ ಆಗಿದೆ ಅಂತ ಕಾಲೆಳೆದಿದ್ದಾರೆ.

ಇನ್ನು ಪಕ್ಷ ಬಿಟ್ಟು ಹೋದ ಗುಲಾಂ ಹಿಂದೆಯೇ ದೊಡ್ಡ ಊಹಾಪೋಹಗಳು ಕೂಡ ಹರಿದ್ದಾಡ್ತಿವೆ. ಅವರು ಜಮ್ಮುಕಾಶ್ಮೀರದಲ್ಲಿ ಹೊಸ ಪಕ್ಷ ಕಟ್ಟಬೋದು ಅಂತ ಮೂಲಗಳು ತಿಳಿಸಿವೆ. ಅಲ್ದೇ ಈಗಾಗಲೇ ಜಮ್ಮುಕಾಶ್ಮೀರದಲ್ಲಿದ್ದ ಕೆಲ ಕಾಂಗ್ರೆಸ್‌ ನಾಯಕರು ತಮ್ಮ ಸ್ಥಾನಕ್ಕೆ ರಿಸೈನ್‌ ಮಾಡಿ ಆಜಾದ್‌ರ ಬೆನ್ನಿಗೆ ನಿಂತಿದ್ದಾರೆ ಅಂತ ಹೇಳಲಾಗಿದೆ. ಜಮ್ಮುಕಾಶ್ಮೀರಕ್ಕೆ ಚುನಾವಣೆ ಹತ್ತಿರದಲ್ಲೇ ಇದೆ. ಅಲ್ದೇ ಮೋದಿಗೂ ಕೂಡ ಆಪ್ತರಾಗಿರೋ ಗುಲಾಂರ ದಿಢೀರ್‌ ಬೆಳವಣಿಗಗಳು ಭಾರಿ ಕುತೂಹಲ ಕೆರಳಿಸಿದೆ. ಇನ್ನು ಗುಲಾಂ ಬರೆದ ಪತ್ರದಲ್ಲಿ ಭಾರತ್‌ ಜೋಡೋ ಯಾತ್ರೆ ಮಾಡೋದ್ರ ಮೊದಲು. ಕಾಂಗ್ರೆಸ್‌ ಜೋಡೋ ಯಾತ್ರೆ ಮಾಡ್ಬೇಕು ಅಂತ ಉಲ್ಲೇಖ ಮಾಡಿದ್ರು. ಇದೀಗ ಅದನ್ನೇ ಟ್ವೀಟ್‌ ಮಾಡಿರೋ ಬಿಜೆಪಿ ಮೊದಲು ಕಾಂಗ್ರೆಸ್‌ ಜೋಡೋ ಮಾಡಿ ಅಂತ ಕಾಲೆಳೆದಿದೆ. ಅಸ್ಸಾಂ ಸಿಎಂ ಹಿಮಾಂತ ಬಿಸ್ವಾ ಸರ್ಮಾ ಪ್ರತಿಕ್ರಿಯಿಸಿ ರಾಹುಲ್‌ ಗಾಂಧಿ ಬಿಜೆಪಿಗೆ ಇರೋ ವರಪ್ರಸಾದ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply