2030ರ ಒಳಗೆ 45% ಮಹಿಳಾ ಉದ್ಯೋಗಿಗಳನ್ನ ಹೊಂದಲು ಇಂಫೋಸಿಸ್‌ ಗುರಿ!

masthmagaa.com:

IT ದಿಗ್ಗಜ ಇಂಫೋಸಿಸ್‌ ಕೂಡ ಮಹಿಳಾ ದಿನಕ್ಕೆ ಹೊಸ ಘೋಷಣೆ ಮಾಡಿದೆ. ಸದ್ಯ ಇಂಫೋಸಿಸ್‌ನಲ್ಲಿ ಮಹಿಳಾ ಉದ್ಯೋಗಿಗಳ ಸಂಖ್ಯೆ 39.3% ಇದೆ. 2030ರ ಒಳಗೆ ಇದನ್ನ 45%ಗೆ ಏರಿಕೆ ಮಾಡೋದಾಗಿ ಹೇಳ್ಕೊಂಡಿದೆ. ಅಂದ್ಹಾಗೆ ಸುಮಾರು 64 ಕೋಟಿ ಅಂದ್ರೆ 48% ಮಹಿಳೆಯರು ಇರೋ ಭಾರತದಲ್ಲಿ ಮಹಿಳಾ ಉದ್ಯೋಗಿಗಳ ಸಂಖ್ಯೆ ತುಂಬಾ ಕಮ್ಮಿ ಇದೆ. ಕಾರ್ಮಿಕ ಇಲಾಖೆಯ PLFS ವರದಿ ಪ್ರಕಾರ 37% ಅಷ್ಟೇ ಮಹಿಳಾ ಕಾರ್ಮಿಕರು ಇದ್ದಾರೆ. ಆದ್ರೆ ಇದು ಹೈ ಇನ್‌ಕಂ, ಲೋ ಇನ್‌ಕಂ ಎಲ್ಲಾ ಉದ್ಯೋಗಗಳು ಎಲ್ಲಾ ಸೇರಿ. ನಗರಗಳಲ್ಲಿ ಹೈ ಇನ್‌ಕಂ ಇರೋ ಜಾಗದಲ್ಲಿ ಮಹಿಳಾ ಉದ್ಯೋಗಿಗಳು ಇರೋದು ಕೇವಲ 26.5% ಅಷ್ಟೇ… ಬಾರ್ಕ್ಲೇ ವರದಿ ಪ್ರಕಾರ ಭಾರತದ GDP ಬೆಳವಣಿಗೆ ದರ 2030ರ ಒಳಗೆ 8% ಆಗ್ಬೇಕು ಅಂದ್ರೆ ವರ್ಕ್‌ಫೋರ್ಸ್‌ನಲ್ಲಿ ಮಹಿಳೆಯರ ಸಂಖ್ಯೆ ಜಾಸ್ತಿಯಾಗ್ಬೇಕು.

-masthmagaa.com

Contact Us for Advertisement

Leave a Reply