ಭಾರತೀಯ ನೌಕಾಪಡೆಗೆ ʻಐಎನ್‌ಎಸ್‌ ವಗೀರ್‌ʼ ಜಲಾಂತರ್ಗಾಮಿ ಬಲ!

masthmagaa.com:

ಸ್ವದೇಶಿ ನಿರ್ಮಿತ ಜಲಾಂತರ್ಗಾಮಿ ನೌಕೆಗಳ ಇತಿಹಾಸದಲ್ಲೇ ಅತ್ಯಂತ ಕಡಿಮೆ ಸಮಯದಲ್ಲಿ ನಿರ್ಮಾಣವಾಗಿರುವ ಐದನೇ ಕಲ್ವರಿ ದರ್ಜೆಯ ಜಲಾಂತರ್ಗಾಮಿ ʻಐಎನ್‌ಎಸ್ ವಗೀರ್ʼ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡಿದೆ. ವಗೀರ್‌ ಅಂದ್ರೆ ಮರಳು ಶಾರ್ಕ್‌ ಅಂತ.. ಈ ಶಾರ್ಕ್‌ ರಹಸ್ಯ ಮತ್ತು ನಿರ್ಭಯತೆಯನ್ನ ಪ್ರತಿನಿಧಿಸುತ್ತೆ. ಈ ಎರಡೂ ಗುಣಗಳು ನಮ್ಮ ಜಲಾಂತರ್ಗಾಮಿ ನೌಕೆಗೆ ಇವೆ ಅಂತ ನೌಕಾಸೇನೆ ಹೇಳಿದೆ. ಈ ಸಬ್‌ಮರಿನ್‌ ಅನ್ನ ಫ್ರಾನ್ಸ್‌ ನೇವಲ್‌ ಗ್ರೂಪ್‌ನ ಸಹಯೋಗದೊಂದಿಗೆ ಮುಂಬೈನ ಮಜಗಾವ್‌ ಡಾಕ್‌ ಶಿಪ್‌ಬಿಲ್ಡರ್ಸ್‌ ಲಿಮಿಟೆಡ್‌ನಲ್ಲಿ ಕೇವಲ 24 ತಿಂಗಳುಗಳಲ್ಲಿ ನಿರ್ಮಿಸಲಾಗಿದೆ. ಇನ್ನು ಈ ಸಬ್‌ಮರಿನ್‌ ಸೇರ್ಪಡೆಯಿಂದ ಭಾರತೀಯ ನೇವಿಯ ಸಾಮರ್ಥ್ಯ ಹೆಚ್ಚುತ್ತೆ ಮತ್ತು ಬಿಕ್ಕಟ್ಟಿನ ಸಮಯದಲ್ಲಿ ಗುಪ್ತಚರ ಕಣ್ಗಾವಲು ಬಳಸಿ ಶತ್ರುಗಳನ್ನ ತಡೆಯೋಕೆ ಸಹಾಯ ಮಾಡುತ್ತೆ ಅಂತ ನೇವಿ ಅಧಿಕಾರಿಗಳು ಹೇಳಿದಾರೆ. ಈ INS ವಗೀರ್ 221 ಅಡಿ ಉದ್ದವಿದ್ದು, 50 ದಿನಗಳವರೆಗೆ ನಿರಂತರವಾಗಿ ನೀರಿನ ಅಡಿಯಲ್ಲಿ ಇರಬಲ್ಲದು, 8 ನೌಕಾ ಅಧಿಕಾರಿಗಳು ಮತ್ತು 35 ಸೈನಿಕರನ್ನ ಕರೆದುಕೊಂಡು ಹೋಗುವ ಸಾಮರ್ಥ್ಯ ಹೊಂದಿದೆ.  ಇನ್ನು ಇದೇ ಕ್ಲಾಸ್‌ನ ಮೊದಲ ಸಬ್‌ಮರೀನ್ INS ಕಲ್ವರಿ‌ 2017ರ ಡಿಸೆಂಬರ್‌ನಲ್ಲಿ, INS ಖಂಡೇರಿ 2019 ಸೆಪ್ಟಂಬರ್‌ನಲ್ಲಿ, INS ಕಾರಂಜ್‌ 2021ರ ಮಾರ್ಚ್‌ನಲ್ಲಿ ಹಾಗೂ INS ವೇಲಾ 2021ರ ನವಂಬರ್‌ನಲ್ಲಿ ಸೇವೆಗೆ ಸೇರ್ಪಡೆಯಾಗಿದ್ವು.

-masthmagaa.com

Contact Us for Advertisement

Leave a Reply