ಏಪ್ರಿಲ್​ 30ರವರೆಗೆ ಅಂತಾರಾಷ್ಟ್ರೀಯ ವಿಮಾನ ಸಂಚಾರ ಬಂದ್!

masthmagaa.com:

ಅಂತಾರಾಷ್ಟ್ರೀಯ ವಿಮಾನ ಸಂಚಾರ ಮೇಲಿನ ನಿರ್ಬಂಧವನ್ನ ಕೇಂದ್ರ ಸರ್ಕಾರ ಏಪ್ರಿಲ್ 30ವರೆಗೂ ವಿಸ್ತರಿಸಿದೆ. ಆದ್ರೆ ಸರಕು ಸಾಗಣೆ ವಿಮಾನ ಮತ್ತು ಕೆಲವೊಂದು ದೇಶಗಳ ಜೊತೆ ಮಾಡಿಕೊಂಡಿರೋ ಏರ್​ ಬಬಲ್ ವ್ಯವಸ್ಥೆ ಅಡಿಯಲ್ಲಿ ಸಂಚರಿಸೋ ವಿಮಾನಗಳಿಗೆ ಈ ನಿರ್ಬಂಧ ಅನ್ವಯವಾಗಲ್ಲ. ಭಾರತ ಒಟ್ಟು 27 ದೇಶಗಳ ಜೊತೆ ಏರ್​ ಬಬಲ್ ಒಪ್ಪಂದ ಮಾಡಿಕೊಂಡಿದೆ. ಇದರಲ್ಲಿ ಅಮೆರಿಕ, ಕೆನಡಾ, ಬ್ರಿಟನ್, ಜರ್ಮನಿ, ಫ್ರಾನ್ಸ್, ಯುಎಇ, ಓಮನ್, ಕುವೈತ್, ಬಹ್ರೇನ್, ನೇಪಾಳ, ಮಾಲ್ಡೀವ್ಸ್, ಭೂತಾನ್, ಬಾಂಗ್ಲಾದೇಶ, ಆಫ್ಘನಿಸ್ತಾನ ಮುಂತಾದ ದೇಶಗಳು ಸೇರಿವೆ.

ಕಳೆದ ವರ್ಷ ಮಾರ್ಚ್​ 31ರಿಂದ ಅಂತಾರಾಷ್ಟ್ರೀಯ ವಿಮಾನ ಸಂಚಾರ ಮೇಲೆ ಹೇರಿದ್ದ ನಿರ್ಬಂಧ ನಾಡಿದ್ದು 31ನೇ ತಾರೀಖು ಅಂತ್ಯವಾಗಬೇಕಿತ್ತು. ಹೀಗಾಗಿ ನಿರ್ಬಂಧವನ್ನ ಮತ್ತೆ ಒಂದು ತಿಂಗಳ ಕಾಲ ವಿಸ್ತರಿಸಿ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಸುತ್ತೋಲೆ ಹೊರಡಿಸಿದೆ. ಕಳೆದ ವರ್ಷ ಇದೇ ದಿನ ಅಂದ್ರೆ, ಮಾರ್ಚ್ 24ನೇ ತಾರೀಖು ಮಧ್ಯರಾತ್ರಿಯಿಂದ ಏಪ್ರಿಲ್ 14ರವರೆಗೆ 21 ದಿನಗಳ ಲಾಕ್​ಡೌನ್ ಜಾರಿಯಾಗಿತ್ತು. ಜೊತೆಗೆ ಮಾರ್ಚ್ 31ರಿಂದ ಅಂತಾರಾಷ್ಟ್ರೀಯ ವಿಮಾನಯಾನದ ಮೇಲೆ ನಿಷೇಧ ಹೇರಲಾಗಿತ್ತು.

-masthmagaa.com

Contact Us for Advertisement

Leave a Reply