ದೇಶದ ನಿರೋದ್ಯೋಗಿಗಳಲ್ಲಿ 83% ಯುವಕರು: ILO ರಿಪೋರ್ಟ್

masthmaga.com:

ಚುನಾವಣೆ ಟೈಮಲ್ಲೇ ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆ ILO ಭಾರತದ ಎಪ್ಲಾಯ್‌ಮೆಂಟ್‌ ರೇಟ್‌ ಬಗ್ಗೆ ರಿಪೋರ್ಟ್‌ ರಿಲೀಸ್‌ ಮಾಡಿದೆ. ಈ ರಿಪೋರ್ಟ್‌ನಲ್ಲಿ ಭಾರತದಲ್ಲಿ ನೌಕರಿ ಇಲ್ಲದಿರೋರ ಪೈಕಿ 83% ಜನ ಯುವಕರಿದ್ದಾರೆ ಅನ್ನೋ ವಿಚಾರ ಬಯಲಾಗಿದೆ. ಅದೂ ಅಲ್ಲದೆ ಕನಿಷ್ಟ ಹೈ ಸ್ಕೂಲ್‌ ಮುಗಿಸಿ ನಿರುದ್ಯೋಗಿಗಳಾಗಿರೋ ಜನರ ದರ 2000ನೇ ಇಸವಿಯ 35.2%ನಿಂದ ಡಬಲ್‌ ಆಗಿ 2022ರಲ್ಲಿ 65.7%ಗೆ ರೀಚ್‌ ಆಗಿದೆ ಅಂತ ILO ಹೇಳಿದೆ. ಹೈ ಸ್ಕೂಲ್‌ ಮುಗಿಸಿ ಶಿಕ್ಷಣ ಬಿಡೋರ ಸಂಖ್ಯೆ ಜಾಸ್ತಿಯಾಗಿದೆ. ಇನ್ನು ಭಾರತದ ಹೆಚ್ಚಿನ ಸಂಖ್ಯೆಯ ಯುವಕರಿಂದ ದೇಶ ಪಡೀಬೋದಾಗಿದ್ದ ಡೆಮೊಗ್ರಫಿಕ್‌ ಡಿವಿಡೆಂಡ್‌ ಅಥ್ವಾ ಜನಸಂಖ್ಯಾ ಲಾಭಾಂಶ ಕೂಡ ಕಡಿಮೆಯಾಗೋ ಸಾಧ್ಯತೆ ಇದೆ. 2021ರಲ್ಲಿ 27% ಇದ್ದ ದೇಶದ ಯುವಕರ ಪಾಪುಲೇಶನ್‌, 2036ಕ್ಕೆ 23%ಗೆ ಇಳಿಯಲಿದೆ ಅಂತ ILO ಹೇಳಿದೆ.

-masthmagaa.com

Contact Us for Advertisement

Leave a Reply