1.3 ಲಕ್ಷ ಕೋಟಿ ರೂಪಾಯಿಗೆ IPL ಎಂಟರ್‌ಪ್ರೈಸ್‌ ಮೌಲ್ಯ ಏರಿಕೆ!

masthmagaa.com:

ಹೊಸ IPL ಬ್ರ್ಯಾಂಡ್‌ ವ್ಯಾಲುಯೇಶನ್‌ ನಡೆಸಲಾಗಿದ್ದು, ಲೀಗ್‌ನ ಬ್ರ್ಯಾಂಡ್ ಮೌಲ್ಯ ಕಳೆದ ವರ್ಷಕ್ಕಿಂತ ಶೇ.80ರಷ್ಟು ಏರಿಕೆಯಾಗಿದೆ. ಜಾಗತಿಕ ಹೂಡಿಕೆ ಬ್ಯಾಂಕ್‌ ಆದ Houlihan Lokey ಪ್ರಕಾರ, IPL Enterprise value ಅಂದ್ರೆ ಸಂಸ್ಥೆಯ ಒಟ್ಟು ಮಾರ್ಕೆಟ್‌ ಕ್ಯಾಪಿಟಲೈಸೇಶನ್‌, 1.3 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಹಾಗೂ IPL ಬ್ರ್ಯಾಂಡ್‌ ವ್ಯಾಲ್ಯೂ ಅಂದ್ರೆ ಬ್ರ್ಯಾಂಡ್‌ ನೇಮ್‌, ಲೋಗೋ, ಐಡೆಂಟಿಟಿ 26,600 ಕೋಟಿಗೆ ಏರಿಕೆಯಾಗಿದೆ. ಇನ್ನು ಟೀಂಗಳ ವಿಚಾರಕ್ಕೆ ಬಂದ್ರೆ ಚೆನ್ನೈ ಸೂಪರ್‌ ಕಿಂಗ್ಸ್‌ನ ಬ್ರ್ಯಾಂಡ್‌ ವ್ಯಾಲ್ಯು 1,760 ಕೋಟಿ ಇದ್ದು ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಸುಮಾರು 1600 ಕೋಟಿ ರೂಪಾಯಿ ಬ್ರ್ಯಾಂಡ್‌ ವ್ಯಾಲ್ಯೂನೊಂದಿಗೆ RCB ಇದೆ.

-masthmagaa.com

Contact Us for Advertisement

Leave a Reply