ಮಾರ್ಚ್‌ 22ರಿಂದ IPL ಫೀವರ್‌ ಶುರು: ಈ ಬಾರಿ ಭಾರತದಲ್ಲೇ ಟೂರ್ನಿ!

masthmagaa.com:

2024ರ 17ನೇ ಸೀಸನ್‌ನ IPL ಟೂರ್ನಿ ಮಾರ್ಚ್‌ 22ರಿಂದ ಶುರುವಾಗತ್ತೆ ಅಂತ IPL ಚೇರ್‌ಮನ್‌ ಅರುಣ್‌ ಧುಮಾಲ್‌ ಹೇಳಿದ್ದಾರೆ. ಈ ಬಾರಿ ಟೂರ್ನಿ ಪೂರ್ತಿ ಇಂಡಿಯಾದಲ್ಲೇ ನಡೆಯಲಿದೆ. ಚುನಾವಣೆ ಹತ್ರ ಇರೋದ್ರಿಂದ ಕಂಪ್ಲೀಟ್‌ ಶೆಡ್ಯೂಲನ್ನ ಸದ್ಯಕ್ಕೆ ಅನೌನ್ಸ್‌ ಮಾಡಲ್ಲ. ಮೊದಲಿಗೆ 15 ದಿನಗಳ ಶೆಡ್ಯೂಲನ್ನ ಅನೌನ್ಸ್‌ ಮಾಡ್ತೀವಿ. ನಂತರ ಉಳಿದ ಪಂದ್ಯಗಳ ದಿನಾಂಕ ನಿಗದಿಯಾಗತ್ತೆ ಅಂತ ಧುಮಾಲ್‌ ಹೇಳಿದ್ದಾರೆ. ಅಲ್ಲದೆ ಮೇ 26ಕ್ಕೆ ಅಂದ್ರೆ ಟಿ-20 ವಿಶ್ವಕಪ್‌ ಶುರುವಾಗೋ ಕೆಲವು ದಿನಗಳ ಮುಂಚೆ IPL ಫೈನಲ್‌ ಪಂದ್ಯ ಇರಲಿದೆ ಅಂದಿದ್ದಾರೆ.

-masthmagaa.com

Contact Us for Advertisement

Leave a Reply