ಕಿಮ್‌ ಜಾಂಗ್‌ ಉನ್‌ ಹೊಸ ಭಯಾನಕ ಆಟ!

masthmagaa.com:

ಕಿಮ್ ಜಾಂಗ್​ ಉನ್​​ ಉತ್ತರ ಕೊರಿಯಾ ಹಾಗೂ ಇರಾನ್​ ಸೇರಿಕೊಂಡು ಪರಮಾಣು ಶಸ್ತ್ರಾಸ್ತ್ರಗಳನ್ನ ಅಭಿವೃದ್ಧಿ ಮಾಡ್ತಿದ್ದಾರೆ ಅಂತಾ ವರದಿಯಾಗಿದೆ. ವಿಶೇಷವಾಗಿ ಪರಮಾಣು ಖಂಡಾಂತರ ಕ್ಷಿಪಣಿಗಳನ್ನ ತಯಾರಿಸೋಕೆ ಎರಡೂ ದೇಶಗಳು ಸೀಕ್ರೆಟ್ ಒಪ್ಪಂದ ಮಾಡಿಕೊಂಡಿವೆ ಅಂತಾ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಸಲ್ಲಿಕೆಯಾಗಿರೋ ರಿಪೋರ್ಟ್​​ನಲ್ಲಿ ಹೇಳಲಾಗಿದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸ್ವತಂತ್ರ ಎಕ್ಸ್​​ಪರ್ಟ್​​ಗಳೇ ಈ ವರದಿ ಸಲ್ಲಿಕೆ ಮಾಡಿದ್ದಾರೆ. ಆದ್ರೆ ಇರಾನ್ ಈ ಆರೋಪಗಳನ್ನ ನಿರಾಕರಿಸಿದೆ. ಈ ತಂಡದ ವರದಿ ಸಂಪೂರ್ಣ ಕಾಲ್ಪನಿಕ ಅಂತಾ ಇರಾನ್ ಹೇಳಿದೆ. ಉತ್ತರ ಕೊರಿಯಾ ಹಾಗೂ ಇರಾನ್​ ಎರಡೂ ದೇಶಗಳ ಮೇಲೆ ಪರಮಾಣು ಅಸ್ತ್ರದ ವಿಚಾರದಲ್ಲಿ ಅಮೆರಿಕ ಕಣ್ಣಿಟ್ಟಿದೆ.

ಉತ್ತರ ಕೊರಿಯಾ ಈಗಾಗಲೇ ಚೀನಾ ರಕ್ಷಣೆಯಲ್ಲಿ, ಚೀನಾದ ಗುಪ್ತ ಬೆಂಬಲದಿಂದ ಪರಮಾಣು ಅಸ್ತ್ರ ತಯಾರಿಸಿ ಆಗಿದೆ. ಆದ್ರೆ ಇರಾನ್​​ ಇನ್ನೂ ಕೂಡ ಪೂರ್ಣ ಪ್ರಮಾಣದಲ್ಲಿ ಪರಮಾಣು ಅಸ್ತ್ರದ ಸಾಮರ್ಥ್ಯ ಗಳಸಿಕೊಳ್ಳೋಕೆ ಸೀಕ್ರೆಟ್ಟಾಗಿ ಪ್ರಯತ್ನ ಮಾಡ್ತಾನೆ ಇದೆ. ಅಮೆರಿಕ ಇದನ್ನ ತಡೆಯೋ ಎಲ್ಲಾ ಪ್ರಯತ್ನನೂ ಮಾಡ್ತಾಇದೆ. ಇದೇ ಸಂದರ್ಭದಲ್ಲಿ ಉತ್ತರ ಕೊರಿಯಾದಂತ ಅಪಾಯಕಾರಿ ದೇಶ ಇರಾನ್​ ಜೊತೆ ಕೈಜೋಡಿಸಿದೆ ಅಂತಾ ವಿಶ್ವಸಂಸ್ಥೆ ತಜ್ಞರ ತಂಡ ವರದಿ ಮಾಡಿರೋದು ಚಿಂತೆಯ ವಿಚಾರ.

-masthmagaa.com

Contact Us for Advertisement

Leave a Reply