ಚೀನಾ ಮಧ್ಯಸ್ಥಿಕೆಯಲ್ಲಿ ಸೌದಿ ಹಾಗೂ ಇರಾನ್‌ ಸಂಬಂಧದಲ್ಲಿ ಶಾಂತಿ!

masthmagaa.com:

ಕಳೆದ 7 ವರ್ಷಗಳಿಂದ ಹಳಸಿ ಹಳ್ಳ ಹಿಡಿದಿದ್ದ ಸೌದಿ ಅರೆಬಿಯಾ ಹಾಗೂ ಇರಾನ್‌ ಸಂಬಂಧಗಳು ಚೀನಾ ಮಧ್ಯಸ್ಥಿಕೆಯಲ್ಲಿ ಶಾಂತಿಗೆ ಮರಳಿವೆ ಅಂತ ವರದಿಯಾಗಿದೆ. ಉಭಯ ದೇಶಗಳು ಚೀನಾದಲ್ಲಿ ರಾಜತಾಂತ್ರಿಕ ಶಾಂತಿ ಮಾತುಕತೆ ನಡೆಸಿದ್ದು, ಮಾತುಕತೆ ಯಶಸ್ವಿಯಾಗಿದೆ ಅಂತ ಚೀನಾದ ಟಾಪ್‌ ರಾಜಕಾರಣಿ ವಾಂಗ್‌ ಯೀ ಹೇಳಿದ್ದಾರೆ. ಮಾರ್ಚ್‌ 6ರಿಂದ 10ರವರೆಗೆ ಸೌದಿ ಹಾಗೂ ಇರಾನ್‌ನ ಅಧಿಕಾರಿಗಳು ಸಭೆ ನಡೆಸಿದ್ದಾರೆ. ಈ ವೇಳೆ ಉಭಯ ದೇಶಗಳ ಸಂಬಂಧವನ್ನ ಗಟ್ಟಿಗೊಳಿಸೋಕೆ, ಅಂತಾರಾಷ್ಟ್ರೀಯ ಹಾಗೂ ಪ್ರಾದೇಶಿಕ ಶಾಂತಿ ಮತ್ತು ಸುರಕ್ಷತೆಯನ್ನ ಕಾಪಾಡೋಕೆ ಬದ್ದರಾಗಿರೋದಾಗಿ ಎರಡೂ ಕಡೆಯ ನಾಯಕರು ಒಪ್ಪಿಕೊಂಡಿದ್ದಾರೆ. ಹಾಗೂ ತಮ್ಮ ತಮ್ಮ ರಾಯಭಾರ ಕಚೇರಿಗಳನ್ನ ರೀಓಪನ್‌ ಮಾಡೋದಾಗಿಯೂ ಹೇಳಿವೆ ಅಂತ ಚೀನಾದ ವಿದೇಶಾಂಗ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದೆ. ಅಂದ್ಹಾಗೆ 2016ರಲ್ಲಿ ಶಿಯಾ ಮುಸ್ಲಿಂ ನಾಯಕ ನಿಮ್ರ್‌ ಅಲ್‌ ನಿಮ್ರ್‌ ಅವ್ರನ್ನ ಸೌದಿ ಆಡಳಿತ ಗಲ್ಲಿಗೇರಿಸಿತ್ತು. ಅದರ ಬೆನ್ನಲ್ಲೇ ಇರಾನ್‌ನ ಪ್ರತಿಭಟನಾಕಾರರು ಇರಾನ್‌ನಲ್ಲಿರೊ ಸೌದಿ ರಾಯಭಾರ ಕಚೇರಿ ಮೇಲೆ ದಾಳಿ ಮಾಡಿದ್ರು. ಆ ಟೈಮಲ್ಲಿ ಸೌದಿ, ಇರಾನ್‌ ಜೊತೆಗಿನ ತನ್ನ ಸಂಬಂಧಗಳನ್ನ ಕಡಿತಗೊಳಿಸಿತ್ತು.

-masthmagaa.com

Contact Us for Advertisement

Leave a Reply