24ಗಂಟೆಗಳಲ್ಲಿ ಇರಾನ್‌ ದಾಳಿ: ಇಸ್ರೇಲ್‌ಗೆ ಅಮೆರಿಕ ಸಪೋರ್ಟ್!

masthmagaa.com:

ಮಿಡಲ್‌ ಈಸ್ಟ್‌ನಲ್ಲಿನ ಪರಿಸ್ಥಿತಿ ಕ್ಷಣ ಕ್ಷಣಕ್ಕೂ ಬಿಗಡಾಯಿಸ್ತಿದೆ. ಇರಾನ್‌ ಹಾಗೂ ಇಸ್ರೇಲ್‌ ನಡುವೆ ಶೀಘ್ರದಲ್ಲೇ ಯುದ್ದ ಆಗಬೋದು, ಕೇವಲ 24 ಗಂಟೆಗಳ ಒಳಗೆ ಇರಾನ್‌ ಇಸ್ರೇಲ್‌ ಮೇಲೆ ಯುದ್ದ ಸಾರಬೋದು ಅಂತ ಅಮೆರಿಕದ ವಾಲ್‌ ಸ್ಟ್ರೀಟ್‌ ಜರ್ನಲ್‌ ರಿಪೋರ್ಟ್‌ ಮಾಡಿದೆ. ನಿನ್ನೆಯಷ್ಟೇ ಈ ಪತ್ರಿಕೆ 48ಗಂಟೆಗಳಲ್ಲಿ ಇರಾನ್‌, ಇಸ್ರೇಲ್‌ ಮೇಲೆ ದಾಳಿ ಮಾಡ್ಬಹುದು ಅಂತೇಳಿತ್ತು. ಆದ್ರೆ ಈಗ ಕೇವಲ 24ಗಂಟೆಗಳ ಒಳಗೆ ಇರಾನ್‌ ದಾಳಿ ಮಾಡೊ ಸಾಧ್ಯತೆ ಹೆಚ್ಚಿದೆ ಅಂತ ಮತ್ತೆ ಹೇಳಿದೆ..ಇತ್ತ ಅಮೆರಿಕದ ಇಂಟಲಿಜೆನ್ಸ್‌ ಕೂಡ ಇಸ್ರೇಲ್‌ ಮೇಲೆ ಇರಾನ್ ಬೃಹತ್‌ ಸಾಮರ್ಥ್ಯದ ಮಿಸೈಲ್‌ ಮತ್ತು ಡ್ರೋನ್‌ಗಳ ಮೂಲಕ ದಾಳಿ ನಡೆಸೊ ಸಾಧ್ಯತೆ ಇದೆ ಅಂತ ಮಾಹಿತಿ ಕೊಟ್ಟಿದೆ. ಇದರ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಜೊ ಬೈಡನ್‌ ಬಿಗ್‌ ಸ್ಟೇಟ್‌ಮೆಂಟ್‌ ಕೊಟ್ಟಿದ್ದಾರೆ. ಯುದ್ದ ಆದ್ರೆ ಯಾವುದೇ ಕಾರಣಕ್ಕೂ ಇಸ್ರೇಲ್‌ನ್ನ ಕೈ ಬಿಡಲ್ಲ, ಇಸ್ರೇಲ್‌ನ್ನ ರಕ್ಷಣೆ ಮಾಡಲು ಬದ್ದರಾಗಿದ್ದೇವೆ ಅಂತ ಬೈಡನ್‌ ಹೇಳಿದ್ದಾರೆ. ಹಾಗೆಯೇ ಇಸ್ರೇಲ್‌ ಮೇಲೆ ಇರಾನ್‌ ದಾಳಿ ಯಶಸ್ವಿ ಆಗೊದಿಲ್ಲ ಅಂತ ಬೈಡನ್‌ ಭವಿಷ್ಯ ನುಡಿದಿದ್ದಾರೆ. ಈ ಮೂಲಕ ಇಸ್ರೇಲ್‌ ಹಾಗೂ ನಮ್ಮ ಕಾದಾಟದ ವಿಚಾರದಲ್ಲಿ ನೀವು ಬರ್ಬೆಡಿ ಅಂದಿದ್ದ ಇರಾನ್‌ನ ಮಾತನ್ನ ಬೈಡನ್‌ ತಿರಸ್ಕರಿಸಿದ್ದಾರೆ. ಇನ್ನೊಂದೆಡೆ ಅಮೆರಿಕದ ಸೆಕ್ರೆಟ್ರಿ ಆಫ್‌ ಸ್ಟೇಟ್‌ ಆಂಟನಿ ಬ್ಲಿಂಕನ್‌ ಕೂಡ ಮಿಡಲ್‌ ಈಸ್ಟ್‌ನಲ್ಲಿ ಉದ್ವಿಗ್ನತೆ ಹೆಚ್ಚಿರೊ ವಿಚಾರವಾಗಿ ಕೆಲ ದೇಶಗಳ ಅಧಿಕಾರಿಗಳ ಜೊತೆ ಮಾತಾಡಿದ್ದಾರೆ. ಚೀನಾ, ಟರ್ಕಿ, ಸೌದಿ ಅರೆಬಿಯಾದ ಅಧಿಕಾರಿಗಳಿಗೆ ಕರೆ ಮಾಡಿ ಮಾತಾಡಿದ್ದಾರೆ. ʻಮಿಡಲ್‌ ಈಸ್ಟ್‌ನಲ್ಲಿ ಸಂಘರ್ಷ ಹೆಚ್ಚುತ್ತಿರೋದು ಯಾರಿಗೂ ಒಳ್ಳೆದಲ್ಲ ಅಂತೇಳಿದ್ದಾರೆ. ಈ ಮೂಲಕ ಇರಾನ್‌ನ ಸಂಭಾವ್ಯ ದಾಳಿಯನ್ನ ಹೇಗಾದ್ರೂ ಮಾಡಿ ತಪ್ಪಿಸೊಕೆ ಅಮೆರಿಕ ಪ್ರಯತ್ನ ಮಾಡೋದನ್ನೂ ಕಂಟಿನ್ಯೂ ಮಾಡಿದೆ. ಇನ್ನು ಇಸ್ರೇಲ್‌ ಇರಾನ್‌ ನಡುವೆ ಯುದ್ದ ಭೀತಿ ಶುರುವಾಗಿರೋ ನಡುವೆ ಭಾರತ, ಇಸ್ರೇಲ್ ಹಾಗೂ ಇರಾನ್‌ಗೆ ಹೋಗೊ ತನ್ನ ಪ್ರಜೆಗಳಿಗೆ ವಾರ್ನಿಂಗ್‌ ಕೊಟ್ಟಿದೆ.
ಎರಡೂ ದೇಶಗಳಿಗೆ ಯಾವುದೇ ಕಾರಣಕ್ಕೂ ಈ ಕ್ಷಣದಲ್ಲಿ ಪ್ರಯಾಣ ಬೆಳಿಸಬೇಡಿ. ಈ ಪ್ರದೇಶದ ಪರಿಸ್ಥಿತಿ ಉದ್ವಿಗ್ನವಾಗ್ತಿದೆ. ಮುಂದಿನ ಆದೇಶದ ತನಕ ಯಾರೂ ಪ್ರಯಾಣ ಮಾಡಬಾರದು. ಹಾಗೇ ಆ ಎರಡೂ ದೇಶಗಳಲ್ಲಿರೋ ಭಾರತೀಯರು ಕೂಡ ತುಂಬಾ ಸೇಫಾಗಿ ಇರಬೇಕು. ಭಾರತದ ರಾಯಭಾರ ಅಧಿಕಾರಿಗಳ ಜೊತೆಗೆ ಟಚ್‌ನಲ್ಲಿ ಇರಿ.. ಅಂತ ಭಾರತವೂ ಬಿಗ್‌ ವಾರ್ನಿಂಗ್‌ ಕೊಟ್ಟಿದೆ. ಅಂದ್ಹಾಗೆ ಸಧ್ಯದ ಲೆಕ್ಕಚಾರದ ಪ್ರಕಾರ ಇಸ್ರೇಲ್‌ನಲ್ಲಿ 18 ಸಾವಿರ, ಇರಾನ್‌ನಲ್ಲಿ 4000 ಸಾವಿರ ಭಾರತೀಯರಿದ್ದಾರೆ.
ಇನ್ನು ಆ ಕಡೆ ರಷ್ಯಾ, ಪೋಲೆಂಡ್, ಫ್ರಾನ್ಸ್‌ ಮತ್ತು ಬ್ರಿಟನ್‌ ರಾಷ್ಟ್ರಗಳು ತಮ್ಮ ಪ್ರಜೆಗಳಿಗೆ ಇಸ್ರೇಲ್‌ ಹಾಗೂ ಪ್ಯಾಲಸ್ತೀನ್‌ ಪ್ರದೇಶಗಳಿಗೆ ಹೋಗ್ಲೆ ಬೇಡಿ ಅಲ್ಲಿ ಉದ್ವಿಗ್ನ ವಾತಾವರಣ ಹೆಚ್ಚಿದೆ ಅಂತ ಸಜೆಸ್ಟ್‌ ಮಾಡ್ತಿವೆ.

-masthmagaa.com

Contact Us for Advertisement

Leave a Reply