ಅಮೆರಿಕದ ವಿರುದ್ಧ ಇರಾನ್‌, ಕ್ಯುಬಾ ಕೆಂಡ! ಯಾಕೆ?

masthmagaa.com:

ಇರಾನ್‌ ಹಾಗೂ ಕ್ಯುಬಾ ದೇಶಗಳ ಮೇಲೆ ಸ್ಯಾಂಕ್ಶನ್‌ ಹೇರಿರುವ ಅಮೆರಿಕದ ಆಕ್ರಮಣಕಾರಿ ನೀತಿಯನ್ನ ಖಂಡಿಸೋದಾಗಿ ಉಭಯ ದೇಶಗಳು ಕಿಡಿಕಾರಿವೆ. ಅಮೆರಿಕ ಹಾಗೂ ಅದರ ಮಿತ್ರ ರಾಷ್ಟ್ರಗಳಿಂದ ನಿರ್ಬಂಧಗಳು, ಒತ್ತಡಗಳು ಹಾಗೂ ಬೆದರಿಕೆಗಳನ್ನ ಉಭಯ ದೇಶಗಳು ಫೇಸ್‌ ಮಾಡ್ತಿವೆ ಅಂತ ಕ್ಯುಬಾದ ಅಧ್ಯಕ್ಷ Miguel Diaz-Canel ಹೇಳಿದ್ದಾರೆ. ಅಂದ್ಹಾಗೆ ಕ್ಯುಬಾದಲ್ಲಿ ಆಯೋಜಿಸಿದ್ದ ಬ್ಯುಸಿನೆಸ್‌ ಫೋರಮ್‌ನ್ನ ಇರಾನ್‌ ಅಧ್ಯಕ್ಷ ಇಬ್ರಾಹಿಮ್‌ ರೈಸಿ ಅಟೆಂಡ್‌ ಮಾಡಿದ್ದಾರೆ. ಈ ವೇಳೆ ಅಮೆರಿಕದ ವಿರುದ್ಧ ಉಭಯ ನಾಯಕರು ಕೆಂಡ ಕಾರಿದ್ದಾರೆ. ಇನ್ನು ಇರಾನ್‌ ಹಾಗೂ ಕ್ಯುಬಾ ಮೇಲೆ ಕೇವಲ ಸ್ಯಾಂಕ್ಶನ್‌ ಹೇರೋದು ಮಾತ್ರವಲ್ದೇ, ಭಯೋತ್ಪಾದಕತೆಗೆ ಹಣ ಒದಗಿಸುವ ರಾಷ್ಟ್ರಗಳ ಲಿಸ್ಟ್‌ನಲ್ಲೂ ಈ ಎರಡು ದೇಶಗಳ ಹೆಸರನ್ನ ಅಮೆರಿಕ ಸೇರಿಸಿದೆ.

-masthmagaa.com

Contact Us for Advertisement

Leave a Reply