ಇಸ್ರೇಲ್‌ನ ಸರ್ವನಾಶ ಮಾಡ್ತೀವಿ ಅಂತ ಅಬ್ಬರಿಸಿದ ಇರಾನ್‌ ಅಧ್ಯಕ್ಷ!

masthmagaa.com:

ಮಧ್ಯಪ್ರಾಚ್ಯದಲ್ಲಿ ಇಸ್ರೇಲ್‌ ಹಾಗೂ ಇರಾನ್‌ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರೋ ಹೊತ್ತಲ್ಲೇ ಇರಾನ್‌ ಇಸ್ರೇಲ್‌ನ್ನ ಮತ್ತೆ ಕೆಣಕಿದೆ.ʻʻ ಇಸ್ರೇಲ್‌ ಸಣ್ಣ ತಪ್ಪು ಮಾಡಿದ್ರೂ ಅವರನ್ನ ಸರ್ವನಾಶ ಮಾಡ್ತೀವಿ, ಈ ಭೂಮಿ ಮೇಲೆ ಯಹೂದಿಗಳ ಆಡಳಿತವೇ ಇರಲ್ಲ ಅಂತ ಇರಾನ್‌ ಅಬ್ಬರಿಸಿದೆ. ಪಾಕ್‌ ಪ್ರವಾಸದಲ್ಲಿರೋ ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಅಲ್ಲಿ ಪಾಲೇಸ್ತೇನ್‌ ಸಮಸ್ಯೆ ಕುರಿತು ಮಾತಾಡಿದ್ರು. ಈ ವೇಳೆ ʻಇಸ್ರೇಲ್‌ ಇರಾನ್‌ ಮೇಲೆ ದಾಳಿ ಮಾಡಿದ್ರೆ, ಈಗಿರೋ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿ…ಎಲ್ಲಾ ಬುಡಮೇಲಾಗುತ್ತೆ. ಇಸ್ರೇಲ್‌ ಸರ್ವನಾಶ ಆಗುತ್ತೆ. ಝಯನಿಸ್ಟ್‌ ಅಂದ್ರೆ ಯಹೂದಿ ಆಡಳಿತವೇ ಇಲ್ಲವಾಗುತ್ತೆʼ ಅಂತ ಹೇಳಿದ್ದಾರೆ. ಈ ಮೂಲಕ ಅಣುಬಾಂಬ್‌ ಅಥವಾ ಅದಕ್ಕೆ ಸಮನಾದ ಸಮೂಹ ನಾಶಕ ಅಸ್ತ್ರವನ್ನ ಪ್ರಯೋಗಿಸೋ ಬೆದರಿಕೆ ಹಾಕಿದೆ. ಈ ಮೂಲಕ ಇಸ್ರೇಲ್‌ನ್ನ ಹೇಳಹೆಸರಿಲ್ಲದಂತೆ ಮಾಡ್ತೀವಿ ಅಂತ ರಣಕೇಕೆ ಹಾಕಿದೆ. ಇನ್ನೊಂದ್ಕಡೆ ಈ ಸಂಘರ್ಷದ ನಡುವೆ ಇರಾನ್‌ ತನ್ನ ರಕ್ಷಣಾ ಪಡೆಗೆ ಹೊಸ ವೆಪನ್‌ ಸಿಸ್ಟಮ್‌ನ್ನ ಪರಿಚಯಿಸಿದೆ. ಬಾವರ್‌-373 ಅನ್ನೋ ಅಡ್ವಾನ್ಸ್ಡ್‌ ವರ್ಷನ್‌ ಏರ್‌ ಡಿಫೆನ್ಸ್‌ ಸಿಸ್ಟಮ್‌ನ್ನ ಇರಾನ್‌ ಗಡಿಯಲ್ಲಿ ನಿಯೋಜಿಸಿದೆ. ಈ ಡಿಫೆನ್ಸ್‌ ಸಿಸ್ಟಮ್‌ ಅಮೆರಿಕದ ಪವರ್‌ಫುಲ್‌ ಸ್ಟೆಲ್ತ್‌ ಯುದ್ಧ ವಿಮಾನಗಳನ್ನೂ ಹೊಡೆದಾಕುತ್ತೆ…ಅದನ್ನ ತಡೆಗಟ್ಟಿ ನಿಲ್ಲುವ ಸಾಮರ್ಥ್ಯಯಿದೆ ಅಂತ ಇರಾನ್‌ ಅಧಿಕಾರಿಗಳು ಹೇಳಿದ್ದಾರೆ. ಜೊತೆಗೆ ಒಂದೇ ಬಾರಿಗೆ ಸುಮಾರು 100 ಏರಿಯಲ್‌ ಟಾರ್ಗೆಟ್‌ಗಳನ್ನ ಪತ್ತೆಹಚ್ಚೋ ಕೆಪೆಸಿಟಿ ಕೂಡ ಇದಕ್ಕಿದೆ ಅಂತ ಇರಾನ್‌ ಅಧಿಕಾರಿಗಳು ಹೇಳಿಕೊಂಡಿದ್ದಾರೆ. ಅಂದ್ಹಾಗೆ ಈ ಬಾವರ್‌-373 ಮಿಸೈಲ್‌ ಸಿಸ್ಟಮ್‌ ಇರಾನ್‌ ಸೇನೆಗೆ 2019ರಲ್ಲೇ ನಿಯೋಜನೆಗೊಂಡಿತ್ತು. ಇದನ್ನ ಸದಾ ರಷ್ಯಾದ S-300 ಮತ್ತು ಅಮೆರಿಕ ನಿರ್ಮಿತ ಪೇಟ್ರಿಯಾಟ್‌ ಮಿಸೈಲ್‌ ಸಿಸ್ಟಮ್‌ಗೆ ಹೋಲಿಸಲಾಗ್ತಿತ್ತು. ಆದ್ರೆ ಈ ಮಿಸೈಲ್‌ ಸಿಸ್ಟಮ್‌ನ ಹೊಸ ವರ್ಷನ್‌ ಈಗ ಇರಾನ್‌ ಸೇನೆಗೆ ನಿಯೋಜನೆಗೊಂಡಿದೆ. ಇಸ್ರೇಲ್‌ ಹಾಗೂ ಇರಾನ್‌ ನಡುವೆ ಕಳೆದ ವಾರ ವಾಯು ಸಮರ ನಡೆದಿತ್ತು. ಮತ್ತೆ ಇರಾನ್ ಹಾಗೂ ಇಸ್ರೇಲ್‌ಗಳು ಮತ್ತೆ ಕದನಕ್ಕೆ ನಿಲ್ಲಬೋದು ಅನ್ನೋ ಭೀತಿ ಕೂಡ ಮಿಡಲ್‌ಈಸ್ಟ್‌ನಲ್ಲಿ ಮನೆ ಮಾಡ್ತಿದೆ ಹೀಗಾಗಿ ಇಸ್ರೇಲ್‌ನ ಸಂಭಾವ್ಯ ದಾಳಿ ಎದುರಿಸೋಕೆ ಇರಾನ್‌ ಇದನ್ನ ನಿಯೋಜನೆ ಮಾಡಿದೆ ಅಂತೇಳಲಾಗ್ತಿದೆ.

-masthmagaa.com

Contact Us for Advertisement

Leave a Reply