1 ಹಡಗಿಗಾಗಿ ಇರಾನ್-ದಕ್ಷಿಣ ಕೊರಿಯಾ ನಡುವೆ ನಡೀತಿದ್ದ ಫೈಟ್ ಅಂತ್ಯ

masthmagaa.com:

ಇರಾನ್ ಮೇಲೆ ಅಮೆರಿಕ ಹೇರಿದ್ದ ಸ್ಯಾಂಕ್ಷನ್ಸ್ ಅಥವಾ ನಿರ್ಬಂಧಗಳನ್ನ ಜೋ ಬೈಡೆನ್ ಸರ್ಕಾರ ತೆಗೆದುಹಾಕಲು ಮುಂದಾಗಿರೋ ಬೆನ್ನಲ್ಲೇ ಇರಾನ್ ಮತ್ತು ದಕ್ಷಿಣ ಕೊರಿಯಾ ನಡುವೆ ಒಂದು ಹಡಗಿಗಾಗಿ ನಡೀತಿದ್ದ ಸಂಘರ್ಷ ಕೂಡ ಅಂತ್ಯವಾಗಿದೆ. ಅಂದ್ಹಾಗೆ ಹೊರ್ಮುಝ್ ಜಲಸಂಧಿಯಲ್ಲಿ ದಕ್ಷಿಣ ಕೊರಿಯಾದ ಹಡಗೊಂದು ನೀರನ್ನ ಕಲುಷಿತ ಮಾಡ್ತಿದೆ ಅಂತ ಹೇಳಿ ಜನವರಿ ತಿಂಗಳಲ್ಲಿ ಆ ಹಡಗು, ಅದರ ಕ್ಯಾಪ್ಟನ್ ಮತ್ತು ಸಿಬ್ಬಂದಿಯನ್ನ ಇರಾನ್ ವಶಪಡಿಸಿ ಇಟ್ಟುಕೊಂಡಿತ್ತು. ಆದ್ರೆ ಇದೆಲ್ಲಾ ಸುಳ್ಳು ಅಂತ ದಕ್ಷಿಣ ಕೊರಿಯಾ ಹೇಳಿತ್ತು. ಇರಾನ್ ಮಾತ್ರ, ಹಡಗು ಮತ್ತು ಅದರ ಸಿಬ್ಬಂದಿಯನ್ನ ವಾಪಸ್ ಕಳಿಸಬೇಕು ಅಂದ್ರೆ ದಕ್ಷಿಣ ಕೊರಿಯಾದಲ್ಲಿ ಸ್ಟ್ರಕ್ ಆಗಿರೋ ನಮ್ಮ ಹಣವನ್ನ ರಿಲೀಸ್​ ಮಾಡ್ಬೇಕು ಅಂತ ಬೇಡಿಕೆ ಇಡ್ತಾ ಬಂದಿತ್ತು. ಅಂದ್ಹಾಗೆ ದಕ್ಷಿಣ ಕೊರಿಯಾ ಮೂಲಕ ಇರಾನ್​ಗೆ ಸಂಬಂಧಿಸಿದ ಫಂಡ್ ಅನ್ನ ಫ್ರೀಜ್ ಮಾಡಿದ್ದು ಅಮೆರಿಕ. ಆ ಹಣವನ್ನ ಬಿಡುಗಡೆ ಮಾಡಲು ಏನು ಸಾಧ್ಯವೋ ಅದನ್ನ ಮಾಡ್ತೀವಿ ಅಂತ ಈಗ ದಕ್ಷಿಣ ಕೊರಿಯಾ ಆಶ್ವಾಸನೆ ಕೊಟ್ಟಿದೆ. ಇದರ ಬೆನ್ನಲ್ಲೇ 4 ತಿಂಗಳಿಂದ ತನ್ನ ವಶದಲ್ಲಿದ್ದ ಹಡಗು ಮತ್ತು ಸಿಬ್ಬಂದಿಯನ್ನ ಬಿಟ್ಟುಕಳಿಸಿದೆ ಇರಾನ್.

-masthmagaa.com

Contact Us for Advertisement

Leave a Reply