ನೂತನ ಡ್ರೋನ್‌ ಲಾಂಚ್‌ ಮಾಡಿದ ಇರಾನ್‌! ವಿಶೇಷತೆಯೇನು?

masthmagaa.com:

ಇರಾನ್‌ ಇತ್ತೀಚೆಗೆ ಅಭಿವೃದ್ಧಿಪಡಿಸಿರುವ ತನ್ನ ಹೊಸ ಡ್ರೋನ್‌ ಒಂದನ್ನ ಲಾಂಚ್‌ ಮಾಡಿದೆ. ಇರಾನ್‌ನ ಟೆಹ್ರಾನ್‌ನಲ್ಲಿ ನಡೆದ ಸಮಾರಂಭವೊಂದ್ರಲ್ಲಿ ಅಲ್ಲಿನ ಅಧ್ಯಕ್ಷ ಇಬ್ರಾಹಿಂ ರೈಸಿ ಅವ್ರು ಈ ʻಮೊಹಜರ್‌-10ʼ ಡ್ರೋನ್‌ನ್ನ ಅನಾವರಣಗೊಳಿಸಿದ್ದಾರೆ. ಈ ಹೊಸ ಡ್ರೋನ್‌ 24 ಗಂಟೆಗಳ ಕಾಲ 7 ಸಾವಿರ ಮೀಟರ್‌ ಎತ್ತರದಲ್ಲಿ ಸುಮಾರು 2 ಸಾವಿರ ಕಿಲೋಮೀಟರ್‌ವರೆಗೆ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿದೆ. ಅಂದ್ಹಾಗೆ ಯುಕ್ರೇನ್‌ ಯುದ್ಧದಲ್ಲಿ ಇರಾನ್‌ ನಿರ್ಮಿತ ಡ್ರೋನ್‌ಗಳು ರಷ್ಯಾಗೆ ಪೂರೈಕೆಯಾಗ್ತಿವೆ ಅಂತ ಅಮೆರಿಕ ಆರೋಪಿಸಿತ್ತು. ಆದ್ರೆ ಈ ಆರೋಪವನ್ನ ಇರಾನ್‌ ತಳ್ಳಿಹಾಕಿದ್ದು, ಈಗ ಮತ್ತೊಂದು ಡ್ರೋನ್‌ ಮಾದರಿಯನ್ನ ಬಿಡುಗಡೆ ಮಾಡಿದೆ.

-masthmagaa.com

Contact Us for Advertisement

Leave a Reply