ಅಮೆರಿಕ ಇಸ್ರೇಲ್‌ಗೆ ಢವಢವ ಶುರು! ಇರಾನ್‌ ಡೆಡ್ಲಿ ಮಿಸೈಲ್‌!

masthmagaa.com:

ಮಹತ್ವದ ಬೆಳವಣಿಗೆಯೊಂದ್ರಲ್ಲಿ ಇರಾನ್‌ ತನ್ನ ಹೈಪರ್‌ಸಾನಿಕ್‌ ಮಿಸೈಲ್‌ನ್ನ ಲಾಂಚ್‌ ಮಾಡೋಕೆ ತಯಾರಿ ನಡೆಸ್ತಿದೆ ಅನ್ನೊ ವಿಚಾರ ತಿಳಿದು ಬಂದಿದೆ. ಈ ಬಗ್ಗೆ ಇರಾನ್‌ನ Islamic Revolutionary Guard Corps (IRGC)ನ ಹಿರಿಯ ಕಮಾಂಡರ್‌ ಒಬ್ರು ಮಾಹಿತಿ ನೀಡಿದ್ದಾರೆ. ಇಷ್ಟರಲ್ಲೇ ಇರಾನ್‌ ಅತ್ಯಂತ ಶಕ್ತಿಶಾಲಿ ಹೈಪರ್‌ಸಾನಿಕ್‌ ಮಿಸೈಲ್‌ನ್ನ ಲಾಂಚ್‌ ಮಾಡಲಿದೆ, ಹೈಪರ್‌ಸಾನಿಕ್‌ ಮಿಸೈಲ್‌ನ ಪರೀಕ್ಷೆ ಯಶಸ್ವಿಯಾಗಿದ್ದು, ಆದಷ್ಟು ಬೇಗ ಅನಾವರಣಗೊಳ್ಳಲಿದೆ ಅಂತ ತಿಳಿಸಿದ್ದಾರೆ. ಅಲ್ದೆ ಈ ಹೊಸ ಮಿಸೈಲ್‌ ಎಲ್ಲಾ ಏರ್‌ಡಿಫೆನ್ಸ್‌ ಸಿಸ್ಟಂನ್ನ ಕೂಡ ಹಾದು ಹೋಗುವ ಸಾಮರ್ಥ್ಯ ಹೊಂದಿದೆ. ಶತ್ರುಗಳ ಮಿಸೈಲ್‌ ವಿರೋಧಿ ಸಿಸ್ಟಮ್‌ನ್ನ ಕೂಡ ಟಾರ್ಗೆಟ್‌ ಮಾಡಲಿದೆ. ಇದು ಜಾಗತಿಕ ಮಿಸೈಲ್‌ ಕ್ಷೇತ್ರದಲ್ಲೇ ಅತ್ಯಂತ ದೊಡ್ಡ ಸಾಧನೆಯಾಗಲಿದೆ ಅಂತ ಹೇಳಿದ್ದಾರೆ. ಇನ್ನು ಹೈಪರ್‌ಸಾನಿಕ್‌ ಮಿಸೈಲ್‌ ವಿಶೇಷತೆ ಏನು ಅಂದ್ರೆ ಇದು ಸಧ್ಯ ಈಗ ಇರೋ ಮಿಸೈಲ್ ಮಾಡೆಲ್‌ಗಳಲೆಲ್ಲಾ ಹೆಚ್ಚಿನ ವೇಗ ಹೊಂದಿದೆ. ಜೊತೆಗ ಈ ಕ್ಷಿಪಣಿಗಳು ಶಬ್ಧದ ವೇಗಕ್ಕಿಂತ ಕನಿಷ್ಠ ಐದು ಪಟ್ಟು ಹೆಚ್ಚು ವೇಗದಲ್ಲಿ ಹಾರುವ ಶಕ್ತಿ ಹೊಂದಿವೆ. ಬ್ಯಾಲಿಸ್ಟಿಕ್ ಕ್ಷಿಪಣಿಗಳಿಗಿಂತ ಡಿಫರೆಂಟ್‌ ಆಗಿದ್ದು, ವಾತಾವರಣದಲ್ಲಿ ಕಡಿಮೆ ಹೈಟ್‌ನಲ್ಲಿ ಹೋಗುತ್ತವೆ. ಆದ್ರೆ ಗುರಿಗಳನ್ನು ಹೆಚ್ಚು ವೇಗವಾಗಿ ತಲುಪುತ್ತವೆ. ಇನ್ನು ಈ ಹೈಪರ್‌ಸಾನಿಕ್‌ ಮಿಸೈಲ್‌ ಬಗ್ಗೆ ಇರಾನ್‌ ಮೊದಲ ಬಾರಿಗೆ ಕಳೆದ ವರ್ಷ ನವೆಂಬರ್‌ನಲ್ಲಿ ಮಾಹಿತಿ ನೀಡಿತ್ತು. ಇದೀಗ ಪರೀಕ್ಷೆ ಸಕ್ಸಸ್‌ ಆಗಿ ಇನ್ನೇನು ಅನಾವರಣ ಮಾಡೋಕೆ ರೆಡಿ ಇದೀವಿ ಅಂತ ಹೇಳಿದೆ. ಇತ್ತೀಚೆಗಷ್ಟೆ ಇರಾನ್‌ ತನ್ನ ಲಾಂಗ್‌ ರೇಂಜ್‌ ʻ ಖೈಬರ್ʼ ಮಿಸೈಲ್‌ ಅನ್ನ ಅನ್‌ವೀಲ್‌ ಮಾಡಿತ್ತು. ಈಗ ಈ ಹೈಪರ್‌ ಸಾನಿಕ್‌ ಮಿಸೈಲ್‌ ಲಾಂಚ್‌ ಮಾಡೊಕೆ ಹೊರಟಿದೆ. ಇರಾನ್‌ನಿಂದ ಈ ಹೇಳಿಕೆ ಹೊರಬಿದ್ದ ಬೆನ್ನಲ್ಲೇ ಅಮೆರಿಕ ಕಳವಳ ವ್ಯಕ್ತಪಡಿಸಿದೆ. ಇರಾನ್‌ನ ಈ ಹೈಪರ್‌ಸಾನಿಕ್‌ ಡೆವಲಪ್‌ಮೆಂಟ್‌ನಿಂದ ಹಾಗೂ ಬ್ಯಾಲಿಸ್ಟಿಕ್ ಕ್ಷಿಪಣಿಗಳಿಂದ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಭದ್ರತೆಗೆ ಗಂಭೀರ ಬೆದರಿಕೆ ಉಂಟಾಗಲಿದೆ. ಇದೊಂದು ದೊಡ್ಡ ಸವಾಲಾಗಿದೆ ಅಂತ ಅಮೆರಿಕ ಸ್ಟೇಟ್ ಡಿಪಾರ್ಟ್‌ಮೆಂಟ್ ವಕ್ತಾರ ಮ್ಯಾಥ್ಯೂ ಮಿಲ್ಲರ್ ಕಳವಳ ವ್ಯಕ್ತಪಡಿಸಿದ್ದಾರೆ. ಅಂದ್ಹಾಗೆ ಶಬ್ದಕ್ಕಿಂತಲೂ ವೇಗವಾಗಿ ಚಲಿಸಬಲ್ಲ ಈ ಮಿಸೈಲ್‌ಗಳನ್ನ ಭಾರತ, ಜಪಾನ್‌, ಜರ್ಮನಿ, ದಕ್ಷಿಣ ಕೊರಿಯಾ ಮತ್ತು ಉತ್ತರ ಕೊರಿಯಾ ಸೇರಿದಂತೆ ಕೆಲವು ದೇಶಗಳು ನಾವಿನ್ನು ಅಭಿವೃದ್ಧಿ ಮಾಡ್ಕೊಳ್ತಾ ಇದೀವಿ ಅಂತ ಹೇಳಿಕೊಳ್ತಿವೆ. ಆದ್ರೆ ರಷ್ಯಾ ಮತ್ತು ಚೀನಾ ಮಾತ್ರ ನಮ್ಮ ಬಳಿ ಈಗಾಗಲೇ ಹೈಪರ್‌ಸಾನಿಕ್‌ ಮಿಸೈಲ್‌ಗಳು ಇದಾವೆ ಅಂತ ಹೇಳಿಕೊಂಡಿವೆ. ಆದ್ರೆ ಸೂಪರ್‌ ಪವರ್‌ ಅಂತ ಕರೆಸಿಕೊಳ್ಳುವ ಅಮೆರಿಕ ಈ ಬಗ್ಗೆ ಅಷ್ಟೇನೂ ಆಸಕ್ತಿ ತೋರಿದಂತೆ ಇಲ್ಲ. ಕೆಲವು ವರದಿಗಳು ಅಮೆರಿಕ ಕೂಡ ಹೈಪರ್‌ ಸಾನಿಕ್‌ ತಯಾರಿಯಲ್ಲಿದೆ ಅಂತ ಹೇಳ್ತಿವೆಯಾದ್ರೂ ಅಮೆರಿಕದ ಹತ್ರ ಈ ರೀತಿ ಮಿಸೈಲ್‌ ಇನ್ನೂ ಕೂಡ ಇಲ್ಲ. ಈ ಹೈಪರ್‌ಸಾನಿಕ್‌ ಮಿಸೈಲ್‌ಗಳ ಮೇಲೆ ಇನ್ವೆಸ್ಟ್‌ ಮಾಡೋದು ಹಾಗೂ ಡೆವಲಪ್‌ ಮಾಡುವ ಕೆಲಸಗಳನ್ನ ಅಮೆರಿಕ ಇತ್ತೀಚಿಗೆ ಕಡಿಮೆ ಮಾಡಿದೆ ಅಂತ ಹೇಳಲಾಗ್ತಿದೆ. ಈ ಟೈಮ್‌ನಲ್ಲಿ ಇರಾನ್‌ ನಾವು ಹೈಪರ್‌ಸಾನಿಕ್‌ ಮಿಸೈಲ್‌ನ್ನ ಇನ್ನೇನು ಅನಾವರಣ ಮಾಡೋಕೆ ರೆಡಿ ಇದೀವಿ ಅಂತ ಹೇಳಿರೋದು ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಜೊತೆಗೆ ಇದು ಸಹಜವಾಗಿ ಇಸ್ರೇಲ್‌ ಹಾಗೂ ಇನ್ನಿತರ ವಿರೋಧಿಗಳ ನಿದ್ದೆಗೆಡಿಸಿದೆ. ಅಷ್ಟೇ ಅಲ್ಲ ಇರಾನ್‌ ಅಣ್ವಸ್ತ್ರ ತಯಾರಿ ಮಾಡ್ತಿದೆ ಅದನ್ನ ಅಮೆರಿಕ ಕೂಡ ತಡಿಯೋಕೆ ಅಗಲ್ಲ. ಅಷ್ಟು ಸೇಫ್‌ ಅಗಿ ಅವರು ಎಲ್ಲಾ ಕೆಲಸ ಮಾಡ್ತಿದ್ದಾರೆ ಅಂತ ತಜ್ಞರು ಎಚ್ಚರಿಕೆ ಕೊಟ್ಟಿದ್ರು. ಒಂದು ವೇಳೆ ಆ ಅಣ್ವಸ್ತ್ರವೂ ತಯಾರಾಗಿ, ಹೈಪರ್‌ ಸಾನಿಕ್‌ ಮಿಸೈಲ್ ಕೂಡ ರೆಡಿಯಾದ್ರೆ ಆಗ ಸೈನಿಕವಾಗಿ ಇರಾನ್‌ ಜಾಗತಿಕ ಬಲಿಷ್ಠ ದೇಶಗಳ ಗುಂಪಿನಲ್ಲಿ ಮುಂಚೂಣಿಗೆ ಬರುತ್ತೆ ಅಂತ‌ ರಕ್ಷಣಾ ತಜ್ಞರು ವಿಶ್ಲೇಷಣೆ ಮಾಡ್ತಿದ್ದಾರೆ.

-masthmagaa.com

Contact Us for Advertisement

Leave a Reply