ಜಗತ್ತಿನ ಯಾವುದೇ ಇಸ್ರೇಲ್‌ ಎಂಬಸಿಗಳು ಇನ್ಮುಂದೆ ಸೇಫ್‌ ಅಲ್ಲ: ಇರಾನ್

masthmagaa.com:

ಇಸ್ರೇಲ್‌, ಇರಾನ್‌ ಮಧ್ಯ ಯುದ್ಧ ಶುರುವಾಗೋ ಸಾಧ್ಯತೆ ಇದೆ ಎನ್ನಲಾಗ್ತಿರೋ ಟೈಮಲ್ಲೇ ಇರಾನ್‌ ಒಂದು ಶಾಕಿಂಗ್‌ ಹೇಳಿಕೆ ನೀಡಿದೆ. ಇಸ್ರೇಲ್‌ಗೆ ವಾರ್ನಿಂಗ್‌ ಕೊಟ್ಟಿರೋ ಇರಾನ್‌ನ ಟಾಪ್‌ ಮಿಲಿಟರಿ ಅಡ್ವೈಸರ್‌ ಒಬ್ರು, ʻಜಗತ್ತಿನಲ್ಲಿರೋ ಯಾವ ಇಸ್ರೇಲಿ ರಾಯಭಾರ ಕಛೇರಿಗಳು ಇನ್ಮೇಲೆ ಸೇಫ್‌ ಅಲ್ಲ ಅಂದಿದ್ದಾರೆ. ಇರಾನ್‌ ಸುಪ್ರೀಂ ಲೀಡರ್‌ ಆಯತೊಲ್ಲಾ ಕಮೇನಿಯ ಮಿಲಿಟರಿ ಅಡ್ವೈಸರ್ ಜನರಲ್‌ ರಹೀಂ ಸಫಾವಿ ಈ ಮಾತನ್ನ ಹೇಳಿದ್ದಾರೆ. ಆ ಮೂಲಕ ಯಾವುದೇ ದೇಶದ ಇಸ್ರೇಲ್‌ ರಾಯಭಾರಿ ಕಛೇರಿ ಮೇಲೆ ಇರಾನ್‌ ದಾಳಿ ಮಾಡಿ, ಸಿರಿಯಾದ ಇರಾನ್‌ ರಾಯಭಾರ ಕಛೇರಿ ದಾಳಿಗೆ ಸೇಡು ತೀರಿಸಿಕೊಳ್ಳುತ್ತೆ ಅನ್ನೋ ಅರ್ಥದಲ್ಲಿ ಹೇಳಿದ್ದಾರೆ. ಈ ರೀತಿ ಇರಾನ್‌ ಇಸ್ರೇಲ್‌ ನಡುವೆ ಕಾವು ಹೆಚ್ಚಾಗ್ತಿದ್ರೆ, ಅತ್ತ ಗಾಜಾ ಯುದ್ಧ ಒಂಚೂರು ತಣ್ಣಗಾದಂತೆ ಕಾಣ್ತಿದೆ. ಯಾಕಂದ್ರೆ ಆಶ್ಚರ್ಯಕರ ಬೆಳವಣಿಗೆಯಲ್ಲಿ ದಕ್ಷಿಣ ಗಾಜಾದ ಖಾನ್‌ ಯೂನಿಸ್‌ ನಗರದಿಂದ ಇಸ್ರೇಲ್‌ ತನ್ನ ಪಡೆಗಳನ್ನ ವಾಪಸ್‌ ತಗೊಂಡಿದೆ. ಆ ಮೂಲಕದ ತನ್ನ ಹಮಾಸ್‌ ವಿರುದ್ಧದ ಗ್ರೌಂಡ್‌ ಇನ್ವೇಶನ್‌ನ ಪ್ರಮುಖ ಹಂತವೊಂದಕ್ಕೆ ಮಂಗಳ ಹಾಡಿದೆ. ಇನ್ನು ಯುದ್ಧ ಶುರುವಾದಾಗ್ಲಿಂದ ಇದೇ ಮೊದಲ ಬಾರಿಗೆ ಈ ನಗರದಲ್ಲಿ ಇಸ್ರೇಲಿ ಪಡೆಗಳು ಅತೀ ಕಡಿಮೆ ಸಂಖ್ಯೆಗೆ ಇಳಿದಿವೆ. ಹಮಾಸ್‌ ಲೀಡರ್‌ ಯಾಹ್ಯಾ ಸಿನ್‌ವರ್‌ನ ತವರು ಖಾನ್‌ ಯೂನಿಸ್‌ನಲ್ಲಿ ಹಮಾಸ್‌ ಪಡೆಗಳನ್ನ ಛೀದ್ರಮಾಡಲಾಗಿದೆ ಅಂತ ಈ ಹಿಂದೆ ಇಸ್ರೇಲ್‌ ಹೇಳಿತ್ತು. ಇದೀಗ ಖಾನ್‌ ಯೂನಿಸ್‌ಗೆ ಸ್ವಲ್ಪ ನಿರಾಳ ಕೊಟ್ಟು, ಹಮಾಸ್‌ಗಳ ಕೊನೆಯ ಶಕ್ತಿಕೇಂದ್ರವಾಗಿರೋ ರಫಾ ನಗರದ ಮೇಲೆ ಇಸ್ರೇಲ್‌ ಗಮನ ಹರಿಸಲಿದೆ. ಈಗ ಇಸ್ರೇಲ್‌ ಸೇನೆಯ ಒಂದು ಬ್ರಿಗೇಡ್‌ ಮಾತ್ರ ಇಲ್ಲಿ ಆಕ್ಟಿವ್‌ ಇದ್ದು, ಇದೇ ಟೈಮಲ್ಲಿ ಉಭಯ ಪಡೆಗಳ ತಂಡಗಳು ಮತ್ತೊಂದು ಸುತ್ತಿನ ಸೀಜ್‌ ಫೈರ್‌ ಮಾತುಕಥೆಗೆ ಈಜಿಪ್ಟ್‌ಗೆ ತೆರಳಿವೆ.

-masthmagaa.com

 

Contact Us for Advertisement

Leave a Reply