ಇರಾನ್‌ VS ಅರಬ್ಬರು! ಪವರ್‌ ತೋರಿಸಿದ ಸೌದಿ ಗ್ಯಾಂಗ್‌!

masthmagaa.com:

ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿಗೆ ಮುಸ್ಲಿಂ ರಾಷ್ಟ್ರಗಳು ಒಟ್ಟಾಗಿ ಕೈ ಕೊಟ್ಟಿವೆ. ರಿಯಾದ್‌ನಲ್ಲಿ ನಡೆದ ಸಮಾವೇಶದಲ್ಲಿ ಇಸ್ರೇಲ್‌ ಜೊತೆಗಿನ ಅರಬ್‌ ರಾಷ್ಟ್ರಗಳ ಸಂಬಂಧವನ್ನ ಕೊನೆಗೊಳಿಸಿ, ಪ್ಯಾಲಸ್ತೈನ್‌ಗೆ ಹೆಚ್ಚಿನ ಆಯುಧಗಳನ್ನ ನೀಡೋ ರೈಸಿ ಕರೆಗೆ ಕೆಲವು ಆಫ್ರಿಕನ್‌ ಮತ್ತು ಅರಬ್‌ ದೇಶಗಳು ನೋ ಎಂದಿವೆ. ಜೊತೆಗೆ ಇಸ್ರೇಲ್‌ ವಿಮಾನಗಳಿಗೆ ಅರಬ್ ವಾಯುಪ್ರದೇಶಗಳಲ್ಲಿ ನಿರ್ಬಂಧ ಹೇರಿ, ತೈಲ ಪೂರೈಕೆಯನ್ನ ಸಹ ನಿಲ್ಲಿಸ್ಬೇಕು ಅನ್ನೊ ಕರೆಯನ್ನ ಅರಬ್‌ ರಾಷ್ಟ್ರಗಳು ರಿಜೆಕ್ಟ್‌ ಮಾಡಿವೆ. ಅದರ ಬದ್ಲು Arab League ಮತ್ತು Organization of Islamic Cooperation (OIC)ಗಳನ್ನ ವಿಲೀನ ಮಾಡಿ ಮಿಡ್ಲ್‌ ಈಸ್ಟ್‌ನಲ್ಲಿ ಶಾಂತಿ ಸ್ಥಾಪನೆ ಮಾಡ್ಬೇಕು ಅಂತ ಸೌದಿ ಕರೆ ಕೊಟ್ಟಿದೆ. ಅಲ್ಲದೆ ಈ ಭಾಗದಲ್ಲಿನ ಅಮೆರಿಕ ಸೇನಾನೆಲೆಗಳನ್ನ ತೆರವುಗೊಳಿಸಿ, ಅವನ್ನ ನಿಷೇಧ ಮಾಡ್ಬೇಕು ಅಂತ ಅಲ್ಜೀರಿಯಾ ನೀಡಿದ್ದ ಪ್ರಪೋಸಲ್ಲನ್ನು ಸೌದಿ, UAE, ಮೊರೊಕೊ ಹಾಗೂ ಬಹ್ರೇನ್‌ ದೇಶಗಳು ವಿರೋಧಿಸಿವೆ. ಇರಾನ್‌ಗೆ ಇದ್ರಿಂದ ತೀವ್ರ ಮುಖಭಂಗ ಆಗಿದೆ. ಆದ್ರೂ ತನ್ನ ಹಳೆ ಚಾಳಿಯಂತೆ ಇರಾಕ್‌, ಸಿರಿಯಾ, ಲೆಬನಾನ್‌, ಯೆಮನ್‌ಗಳಲ್ಲಿನ ತನ್ನ ʻಪ್ರತಿರೋಧ ಬಣಗಳʼ ಮೇಲೆ ನಮ್ಮ ಪ್ರಭಾವ ಇದೆ. ಅವ್ರ ಜೊತೆ ಇಸ್ರೇಲ್‌ ವಿರುದ್ಧ ನಾವು ಹೋರಾಡ್ತೀವಿ ಅಂತ ಇರಾನ್‌ ಹೇಳಿದೆ.

ಹಮಾಸ್‌ ಹಠಾತ್‌ ಉಗ್ರ ದಾಳಿಯಿಂದ ಶುರುವಾದ ಇಸ್ರೇಲ್‌-ಹಮಾಸ್‌ ಸಂಘರ್ಷ 39ನೇ ದಿನಕ್ಕೆ ಕಾಲಿಟ್ಟಿದೆ. ಇದೀಗ ಹಮಾಸ್‌ ದಾಳಿ ಕುರಿತಂತೆ ಸ್ಪೋಟಕ ಮಾಹಿತಿಗಳು ಹೊರಬಿದ್ದಿವೆ. ಹಮಾಸ್‌ ಇಸ್ರೇಲ್‌ ಮೇಲೆ ದಾಳಿ ಮಾಡೋಕೆ ಒಂದು ವರ್ಷದಿಂದ ಪ್ಲಾನ್‌ ಮಾಡಿದ್ದಕ್ಕೆ ಸಾಕ್ಷಿ ದೊರಕಿದೆ. ಇಸ್ರೇಲಿ ಗುಪ್ತಚರ ಸಂಸ್ಥೆಯ ಮೂಗಿನ ಕೆಳಗೆ ಹಮಾಸ್‌ ಉಗ್ರರು ಟ್ರೈನಿಂಗ್‌ ಪಡೆದಿದ್ರು ಎನ್ನಲಾಗ್ತಿದೆ. ಇಸ್ರೇಲ್‌ ವಶಪಡಿಸಿಕೊಂಡಿರೋ ಹಮಾಸ್‌ ಸಂಬಂಧಿತ ವಸ್ತುಗಳಲ್ಲಿ, ಪ್ಲಾನಿಂಗ್‌ಗೆ ಬಳಸಲಾದ ಹಲವು ಮ್ಯಾಪ್‌ಗಳು, ವರದಿಗಳು, ಚಿತ್ರಗಳು ದೊರಕಿವೆ. ಇದ್ರಲ್ಲಿ ಈಗಾಗಿರೋ ಪ್ರಮಾಣಕ್ಕಿಂತ ದೊಡ್ಡ ಅಟ್ಯಾಕ್‌ ಮಾಡೋಕೆ ಹಮಾಸ್‌ ಸ್ಕೆಚ್‌ ಹಾಕಿತ್ತು ಅಂತ ತಿಳಿದುಬಂದಿದೆ. ಪೂರ್ವದ ವೆಸ್ಟ್‌ ಬ್ಯಾಂಕ್‌ವರೆಗೂ‌ ನುಗ್ಗಿ ದೊಡ್ಡ ಸ್ಕೇಲ್‌ನಲ್ಲಿ ಇಸ್ರೇಲ್‌ನ ಪ್ರಮುಖ ನಗರಗಳ ಮೇಲೆ ದಾಳಿ ಮಾಡೋ ಯೋಜನೆ ಹೊಂದಿತ್ತು ಎನ್ನಲಾಗ್ತಿದೆ. ಅಲ್ಲಿ ಸಿಕ್ಕಿರೋ ನೋಟ್ಸ್‌ಗಳಲ್ಲಿ ಖುರಾನ್‌ ಪದ್ಯಗಳ ಜೊತೆಗೆ “ಎಷ್ಟಾಗುತ್ತೊ ಅಷ್ಟು ಜನರನ್ನ ಕೊಂದು, ಎಷ್ಟಾಗುತ್ತೊ ಅಷ್ಟು ಜನರನ್ನ ಅಪಹರಿಸಿ ಅನ್ನೊ ಆರ್ಡರ್‌ ದೊರಕಿದೆ. ಅಲ್ಲದೆ ಹಮಾಸ್‌ ಉಗ್ರರು ತಮ್ಮ ಟ್ರೈನಿಂಗ್‌ನಲ್ಲಿ ಇಂಪೋರ್ಟೆಡ್‌ AK-47 ರೈಫಲ್‌ಗಳು, ಗ್ರನೇಡ್‌ ಲಾಂಚರ್‌ಗಳು, ಹ್ಯಾಂಡ್‌ಗನ್‌ಗಳನ್ನ ಬಳಸಿದ್ರು. ಗಾಜಾದ ದಟ್ಟ ಜನವಸತಿ ನೆಲದ ಮೇಲೆ ಹಾಗೂ ಕೆಳಗೆ, ಅಂದ್ರೆ ಟನಲ್‌ಗಳಲ್ಲಿ ಹಮಾಸ್‌ ಯುದ್ಧಾಭ್ಯಾಸ ನಡೆಸಿತ್ತು. ಇಸ್ರೇಲಿ ನಗರಗಳ ನೀಲಿನಕ್ಷೆ ತಯಾರಿಸೋಕೆ ಮತ್ತು ಇಸ್ರೇಲ್‌ನ ಬ್ಯಾರಿಯರ್‌ ವ್ಯವಸ್ಥೆಯ ಲೊಕೇಶನ್‌ಗಳನ್ನ ತಿಳಿಯೋಕೆ ಡ್ರೋನ್‌ಗಳನ್ನು ನಿಯೋಜಿಸಿದ್ದ ಬಗ್ಗೆ ಮಾಹಿತಿ ದೊರಕಿದೆ. ಇಸ್ರೇಲ್‌ಗೆ ಕೆಲಸಕ್ಕೆ ಹೋಗ್ತಿದ್ದ ಕಾರ್ಮಿಕರಿಂದ ಹಮಾಸ್‌ ಮಾಹಿತಿ ಕಲೆಹಾಕಿದೆ. ಇಸ್ರೇಲಿ ವೆಬ್‌ಸೈಟ್‌ಗಳು, ರಿಯಲ್‌ ಎಸ್ಟೇಟ್‌ ಪೋಟೋಗಳು, ಸೋಷಿಯಲ್‌ ಮೀಡಿಯಾ ಪೋಸ್ಟ್‌ಗಳನ್ನ ಸ್ಟಡಿ ಮಾಡಿದೆ. ಇಸ್ರೇಲ್‌ ಮತ್ತು ಅರಬ್‌ ದೇಶಗಳ ನಡುವಿನ ಸಂಬಂಧ ಕುಡಿಯೊಡೆಯೋದನ್ನ ನಿಲ್ಲಿಸೋ ಸಲುವಾಗಿ ಗಾಜಾದ ನಾಗರೀಕರು ಬಲಿಯಾದರೂ ಪರ್ವಾಗಿಲ್ಲ, ಅದು ಪ್ಯಾಲಸ್ತೈನ್‌ ಉನ್ನತಿಗಾಗಿ ಮಾಡೋ ತ್ಯಾಗ ಅಂತ ಹಮಾಸ್‌ ಬಿಂಬಿಸಿದೆ. ಹಮಾಸ್‌ ಲೀಡರ್‌ Yehiya Sinwar ಈ ಎಲ್ಲಾ ಪ್ಲಾನ್‌ಗಳಿಗೆ ಮಾಸ್ಟರ್‌ಮೈಂಡ್‌ ಆಗಿದ್ದ ಅಂತ ಇಸ್ರೇಲ್‌ ಗುಪ್ತಚರ ಅಧಿಕಾರಿ Michael Milshtein ಹೇಳಿದ್ದಾರೆ.

ಇತ್ತ ಯುದ್ಧ ತೀವ್ರವಾಗ್ತಿದ್ದಂತೆ ಗಾಜಾದ ಮೇಜರ್‌ ಆಸ್ಪತ್ರೆಗಳು ಹೊಸದಾಗಿ ಬರೋ ರೋಗಿಗಳಿಗೆ ಬಾಗಿಲು ಮುಚ್ಚಿವೆ. ಔಷಧಿಗಳ ನಂತರ ಈಗ ಇಂಧನದ ಸಪ್ಲೈ ಕೂಡ ನಿಂತಿದೆ. ಗಾಜಾದ ಅತಿ ದೊಡ್ಡ ಆಸ್ಪತ್ರೆಗಳಾದ Al Shifa ಮತ್ತು Al-Quds ಅಸ್ಪತ್ರೆಗಳಲ್ಲಿ ಆಪರೇಷನ್‌ ಅಗತ್ಯ ಇರೋ ರೋಗಿಗಳಿಗೆ ಸಾವೇ ಗತಿ ಅಂತ ಹೇಳಲಾಗ್ತಿದೆ. ಹಮಾಸ್‌ ಉಗ್ರರು ಕಳೆದ ಒಂದು ವಾರದಿಂದ ಈ ಆಸ್ಪತ್ರೆಗಳ ಹೊರಗಿನ ಪ್ರಪಂಚದ ಸಂಪರ್ಕವನ್ನೇ ಕಡಿತಗೊಳಿಸಿದ್ದಾರೆ. ಇಂಧನ ಕೊಡ್ತೀವಿ ಅಂದ್ರು ಅದನ್ನ ನಿರಾಕರಿಸ್ತಿದ್ದಾರೆ. ಆಸ್ಪತ್ರೆಯ ಒಳಗೂ ಹೋಗಲಾಗದೆ, ಅಲ್ಲಿರೋರು ಹೊರಗೂ ಹೋಗಲಾಗದೆ ಹಮಾಸ್‌ ಕೈಯಲ್ಲಿ ಟ್ರ್ಯಾಪ್‌ ಆಗಿದ್ದಾರೆ ಅಂತ ಇಸ್ರೇಲ್‌ ಹೇಳ್ತಿದೆ. ಅಲ್ಲದೆ ಈಗ ಇಸ್ರೇಲ್‌ ಸೇನೆ, ಆಸ್ಪತ್ರೆಗಳ ಬಳಿ ಇರೋ ಹಮಾಸ್‌ ಕಮ್ಯಾಂಡ್‌ ಸೆಂಟರ್‌ಗಳ ಮೇಲೆ ದಾಳಿ ಮಾಡಲು ಶುರು ಮಾಡಿದೆ. ಇದರಿಂದಲೇ ಆಸ್ಪತ್ರೆಯ ವಿದ್ಯುತ್‌ ಸಂಪರ್ಕ ಹಾಳಾಗಿ ರೋಗಿಗಳಿಗೆ ಚಿಕಿತ್ಸೆ ನೀಡೋಕಾಗ್ತಿಲ್ಲ ಅಂತ ವೈದ್ಯಾಧಿಕಾರಿಗಳು ಹೇಳಿದ್ದಾರೆ. ಇನ್ನೊಂದು ಕಡೆ ಉತ್ತರ ಇಸ್ರೇಲ್‌ನಲ್ಲಿ ಹೆಜ್ಬೊಲ್ಲಾ ದಾಳಿಗೆ ಏಳು ಇಸ್ರೇಲಿ ಸೈನಿಕರು, 10 ನಾಗರೀಕರು ಗಾಯಗೊಂಡಿದ್ದಾರೆ. ಒಟ್ಟಾರೆಯಾಗಿ ಪ್ಯಾಲಸ್ತೈನ್‌ ಅಧಿಕಾರಿಗಳು ನೀಡಿರೋ ಮಾಹಿತಿ ಪ್ರಕಾರ, ಇದುವರೆಗೆ ಗಾಜಾದಲ್ಲಿ 11,800 ಮಂದಿ ಸಾವನ್ನಪ್ಪಿದ್ರೆ , 200 ಮಂದಿ ವೆಸ್ಟ್‌ಬ್ಯಾಂಕ್‌ನಲ್ಲಿ ಬಲಿಯಾಗಿದ್ದಾರೆ ಅಂತೇಳಲಾಗ್ತಿದೆ.

-masthmagaa.com

Contact Us for Advertisement

Leave a Reply