ಇಸ್ರೇಲ್‌ಗೆ ಮತ್ತೊಂದು ಎಚ್ಚರಿಕೆ ನೀಡಿದ ಇರಾನ್‌ ಅಧ್ಯಕ್ಷ!

masthmagaa.com:

ಇರಾನ್‌ ವಿರುದ್ಧ ಪ್ರತೀಕಾರ ತೀರಿಸ್ಕೊಳ್ತೀವಿ ಅಂದ ಇಸ್ರೇಲ್‌ಗೆ ಇದೀಗ ಇರಾನ್‌ ಮತ್ತೊಮ್ಮೆ ಫ್ರೆಶ್‌ ಆಗಿ ಎಚ್ಚರಿಕೆ ನೀಡಿದೆ. ʻಇಸ್ರೇಲ್‌ ಎಲ್ಲಿಯಾದ್ರೂ ಸಣ್ಣ ಮಟ್ಟದಲ್ಲಿ ಆಕ್ರಮಣಕ್ಕೆ ಮುಂದಾದ್ರೂ ನಾವು ದೊಡ್ಡ ಮಟ್ಟದಲ್ಲಿ ದಾಳಿ ನಡೆಸ್ತೀವಿ…ಅದು ಬಹಳ ಕೆಟ್ಟದಾಗಿರುತ್ತೆʼ ಅಂತ ಖುದ್ದು ಇರಾನ್‌ನ ಅಧ್ಯಕ್ಷ ಇಬ್ರಾಹಿಂ ರೈಸಿ ವಾರ್ನ್‌ ಮಾಡಿದ್ದಾರೆ. ಅಂದ್ಹಾಗೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು, ʻಇರಾನ್‌ ಮೇಲೆ ಹೇಗೆ ದಾಳಿ ಮಾಡ್ಬೇಕು ಅಂತ ಇಸ್ರೇಲ್‌ ಡಿಸೈಡ್‌ ಮಾಡುತ್ತೆʼ ಅಂತ ಹೇಳಿದ್ರು. ಈ ಬೆನ್ನಲ್ಲೇ ಇರಾನ್‌ ಅಧ್ಯಕ್ಷರಿಂದಲೇ ಈ ರೀತಿ ಎಚ್ಚರಿಕೆ ಬಂದಿದೆ. ಇನ್ನು ಇಸ್ರೇಲ್‌ನ ಉತ್ತರ ಭಾಗದಲ್ಲಿ ಹೆಜ್ಬೊಲ್ಲಾ ಸಂಘಟನೆ ಡ್ರೋನ್‌ ದಾಳಿ ನಡೆಸಿದ ಪರಿಣಾಮ 14 ಇಸ್ರೇಲ್‌ ಸೈನಿಕರು ಗಾಯಗೊಂಡಿದ್ದಾರೆ. ಸದ್ಯ ಗಾಯಗೊಂಡ ಸೈನಿಕರಿಗೆ ಚಿಕಿತ್ಸೆ ನೀಡಲಾಗ್ತಿದೆ ಅಂತ ಇಸ್ರೇಲ್‌ ರಕ್ಷಣಾ ಪಡೆ ಮಾಹಿತಿ ನೀಡಿದೆ. ಇನ್ನು ಗಾಜಾದಲ್ಲಿ ತೀವ್ರಗೊಂಡಿರೋ ಇಸ್ರೇಲ್‌ ದಾಳಿಯಿಂದಾಗಿ ಕಳೆದ ಡಿಸೆಂಬರ್‌ನಲ್ಲಿ ಅಲ್ಲಿನ ದೊಡ್ಡ ಫರ್ಟಿಲಿಟಿ ಕ್ಲಿನಿಕ್‌ ಒಂದರಲ್ಲಿ ಹಾನಿಯಾಗಿತ್ತು. ಈ ವೇಳೆ IVF ಸೆಂಟರ್‌ನಲ್ಲಿ ಇಡಲಾದ 4,000ಕ್ಕೂ ಅಧಿಕ ಟೆಸ್ಟ್‌ ಟ್ಯೂಬ್‌ ಭ್ರೂಣಗಳು ನಾಶವಾಗಿವೆ ಅಂತ ವರಿದಯಾಗಿದೆ. ಅಲ್ಲದೇ 1,000ಕ್ಕೂ ಅಧಿಕ ಸ್ಪರ್ಮ್‌ ಮಾದರಿಗಳು, ಅನ್‌ಫರ್ಟಿಲೈಸ್ಡ್‌ ಎಗ್‌ಗಳು ಕೂಡ ನಾಶವಾಗಿವೆ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply