32000 ಹಿಂದೂ ಹೆಣ್ಣುಮಕ್ಕಳು ಟೆರರಿಸ್ಟ್ ಆಗಿರೋದು ನಿಜಾನಾ? !

masthmagaa.com:

“ದ ಕೇರಳ ಸ್ಟೋರಿ” ಚಿತ್ರದ ಟೀಸರ್‌ ಸದ್ಯ ಸೆನ್ಷೇಷನ್‌ ಕ್ರೀಯೆಟ್‌ ಮಾಡ್ತಾ ಇದೆ. ನಿರ್ಮಾಪಕ ಮತ್ತು ನಿರ್ದೇಶಕ ವಿಪುಲ್ ಅಮೃತಲಾಲ್ ಶಾ ಅವರ ದಿ ಕೇರಳ ಸ್ಟೋರಿ ಚಿತ್ರದ ಟ್ರೈಲರ್ ಎಲ್ಲಡೆ ಸುದ್ದಿಯಾಗಿದೆ. ಇದರಲ್ಲಿ ಐಸಿಸ್ ಭಯೋತ್ಪಾದಕ ಸಂಘಟನೆ ಕೇರಳದ 32000 ಹಿಂದೂ ಯುವತಿಯರನ್ನು ಅಪಹರಿಸಿ ಲವ್ ಜಿಹಾದ್ ಗೆ ಬಲಿಪಶು ಮಾಡಿದ್ದು ಮಾತ್ರವಲ್ಲದೆ ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗ್ತಾ ಇದೆ ಅಂತ ಟ್ರೇಲರ್‌ನಲ್ಲಿ ತೋರಿಸಿದ್ದಾರೆ. ಇದರ ಬಗ್ಗೆ ಒಂದಿಷ್ಟು ಪರ ವಿರೋಧ ಚರ್ಚೆ ಈಗಾಗಲೇ ಶುರು ಆಗಿದೆ. ‘ದಿ ಕೇರಳ ಸ್ಟೋರಿ’ ನೈಜ ಘಟನೆ ಆಧಾರಿತವಾಗಿದ್ದು ಎಂದು ನಿರ್ದೇಶಕ ಸುದೀಪ್‌ತೋ ಸೇನ್‌ ಹೇಳಿದ್ದಾರೆ. 2022ರಲ್ಲಿ ರಿಲೀಸ್ ಆದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಹಿಟ್ ಆಯಿತು. ಕಾಶ್ಮೀರಿ ಪಂಡಿತರ ವಲಸೆ ಮತ್ತು ಅವರ ಹತ್ಯೆಯನ್ನು ಆಧರಿಸಿ ಈ ಸಿನಿಮಾ ಸಿದ್ಧಗೊಂಡಿತ್ತು. ಹಾಗೆಯೇ ಹುಡುಗೀರನ್ನ ಪ್ರೀತಿ ಎಂಬ ಬಲೆಗೆ ಬೀಳಿಸಿ ಅವರನ್ನ ಭಯೋತ್ಪಾದಕರನ್ನಾಗಿ ಮಾಡುವ ಕತೆಯೇ “ದ ಕೇರಳ ಸ್ಟೋರಿ”. ಈಗಾಗಲೇ ಈ ಟ್ರೇಲರ್‌ 1ಕೋಟಿ 12 ಲಕ್ಷ ವ್ಯೂವ್ಸ್‌ ಪಡೆದಿದೆ. 66 ಸಾವಿರ ಕಾಮೆಂಟ್‌ಗಳು ಬಂದಿದೆ. ಈ ಚಿತ್ರದ ಬಗ್ಗೆ ಇರುವ ಒಂದಿಷ್ಟು ಪರ ಮತ್ತು ವಿರೋಧ ಚರ್ಚೆಯನ್ನ ನೋಡೋಣ.

ಪರ :
< ಲವ್‌ ಎಂಬ ಹೆಸರನ್ನ ಬಳಸಿ ಹುಡುಗೀರನ್ನ ಮದುವೆಯಾಗಿ ಐಸಿಸ್‌ ಸಂಘಟನೆಗೆ ಯ್ಯೂಸ್‌ ಮಾಡ್ತಾ ಇದಾರೆ.
< ಈ ಕತೆ ನಿಜವಾಗಿಯೂ ನಮ್ಮ ಭಾರತದಲ್ಲಿ ನಡೆದಿದ್ದು. ನಾವು ಸಹ ಇಂತಹ ಹಲವಾರು ಕೇಸ್‌ಗಳನ್ನ ನಮ್ಮ ಸುತ್ತಮುತ್ತಲೇ ನೋಡಿದ್ದೇವೆ ಅಂತ ಕೆಲವರು ಕಾಮೆಂಟ್‌ ಮಾಡಿದ್ದಾರೆ.
< ಮಹಿಳೆಯರಿಗೆ ಕೆಲವೊಂದು ಆಮಿಷ ಒಡ್ಡಿ ವಿದೇಶಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಅವರಿಗೆ ಟ್ರೇನಿಂಗ್‌ ಕೊಟ್ಟು ಅವರನ್ನ ಭಯೋತ್ಪಾದನೆಗೆ ಬಳಸಲಾಗ್ತಾ ಇದೆ ಅನ್ನುವಂತ ವಿಚಾರಗಳೂ ಕೂಡ ಇದೆ.
< ಇನ್ನು ನಾವೂ ಕೂಡ ಹಲವಾರು ಲವ್‌ ಜಿಹಾದ್‌ ಕೇಸ್‌ಗಳನ್ನ ನೋಡಿದ್ದೇವೆ . ಹಿಂದೂ ಹುಡುಗಿಯನ್ನ ಮದುವೆಯಾಗಿ ಮುಸ್ಲಿಂ ಆಗಿ ಕನ್ವರ್ಟ್‌ ಮಾಡಿಸಿ ಅವರನ್ನ ಕೊಲೆ ಮಾಡೋದು ಕೂಡ ನಡೀತಾ ಇದೆ. ಅಂತ ಹಲವಾರು ಮಂದಿ ಈ ಸಿನಿಮಾದ ಪರವಾಗಿ ಮಾತಡ್ತಾ ಇದಾರೆ.
< ಇನ್ನೂ ಈ ಲವ್‌ ಜಿಹಾದ್‌ ಬಗ್ಗೆ ಸಾಕಷ್ಟು ಕೇಸ್‌ಗಳು ಕೂಡ ದಾಖಲಾಗಿತ್ತು. ಈ ಸಿನಿಮಾ ನಮ್ಮ ಸಮಾಜಕ್ಕೆ ಕತ್ತಲೆಯ ಲೋಕವನ್ನ ಪರಿಚಯ ಮಾಡತ್ತೆ ಅಂತ ಕೆಲವರು ಮಾತಾಡ್ತಾ ಇದಾರೆ.

ವಿರೋಧ :
< 32000 ಹುಡುಗೀರು ಕಾಣೆ ಆಗಿದ್ದಾರೆ ಅನ್ನೋದಕ್ಕೆ ಸಾಕ್ಷಿ ಕೊಡಿ ಅಂತ ಒಂದಿಷ್ಟು ಜನ ಕೇಳ್ತಾ ಇದಾರೆ.
< ಇದರ ಟೀಸರ್‌ ರಿಲೀಸ್‌ ಆದಾಗಲೂ ಸಹ ಕೆಲವು ರಾಜಕಾರಣಿಗಳು ಕೇರಳಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನವನ್ನು ಸಿನಿಮಾದಲ್ಲಿ ಮಾಡಲಾಗಿದೆ. ಇಂತಹ ಚಿತ್ರಗಳು ಬಿಡುಗಡೆಯಾದರೆ, ದೇಶಕ್ಕೆ ಮತ್ತು ರಾಜ್ಯಕ್ಕೆ ಕೆಟ್ಟ ಹೆಸರು, ಹಾಗಾಗಿ ಈ ಸಿನಿಮಾ ರಿಲೀಸ್‌ ಆಗಬಾರದು ಅಂತ ಸಿಎಂ ಗೆ ಪತ್ರ ಬರೆದಿದ್ದರು.
< ಅಲ್ಲದೇ ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಮೂಲಕ ಲಾಭ ಮಾಡ್ಕೊಂಡಿದ್ದ ಬಿಜೆಪಿ ಇದೀಗ ಮತ್ತೊಂದು ಸಿನಿಮಾವನ್ನು ಅಸ್ತ್ರವಾಗಿ ಬಳಸುತ್ತಿದೆ ಎನ್ನುವ ಮಾತು ಕೇಳಿ ಬರ್ತಿದೆ. ವಿಧಾನಸಭೆ ಚುನಾವಣೆ ಶುರುವಾಗುವ ಟೈಮ್‌ನಲ್ಲೇ ‘ದಿ ಕೇರಳ ಸ್ಟೋರಿ’ ಸಿನಿಮಾ ರಿಲೀಸ್ ಆಗುತ್ತಿದ್ದು, ಇದರ ಲಾಭವನ್ನು ಬಿಜೆಪಿ ಪಡೆದುಕೊಳ್ಳಲಿದೆ ಎನ್ನೋ ಮಾತುಗಳು ಕೇಳಿಬರ್ತಾ ಇದೆ.

-masthmagaa.com32000 ಹಿಂದೂ ಹೆಣ್ಣುಮಕ್ಕಳು ಟೆರರಿಸ್ಟ್ ಆಗಿರೋದು ನಿಜಾನಾ?

Contact Us for Advertisement

Leave a Reply