ಜುಲೈ ಬದಲು ಸೆಪ್ಟೆಂಬರ್​ನಲ್ಲಿ ರಿಲೀಸ್ ಆಗುತ್ತಾ KGF-2?

masthmagaa.com:

ಕೆಜಿಎಫ್ ಚಾಪ್ಟರ್ 2 ಬಿಡುಗಡೆ ದಿನಾಂಕಕ್ಕೆ ಸಂಬಂಧಪಟ್ಟ ಹಾಗೆ ಕೆಲ ಮಾಧ್ಯಮಗಳು ಸೆಪ್ಟೆಂಬರ್ 9ನೇ ತಾರೀಖಿಗೆ ಸಿನಿಮಾದ ಬಿಡುಗಡೆ ನಿಗದಿ ಮಾಡಲಾಗಿದೆ ಎಂಬ ಸುದ್ದಿಯನ್ನ ಪ್ರಸಾರ ಮಾಡುತ್ತಿವೆ. ಇದರ ಸತ್ಯಾಸತ್ಯತೆ ತಿಳಿಯುವ ಸಲುವಾಗಿ ನಾವು ಚಿತ್ರದ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಸಂಪರ್ಕ ಮಾಡಿದಾಗ ಈ ಸುದ್ದಿ ಸುಳ್ಳು ಎಂಬ ಮಾಹಿತಿ ಸಿಕ್ಕಿದೆ. ಸದ್ಯ ಜುಲೈ 16ಕ್ಕೆ ನಿಗದಿಯಾಗಿರುವ ಕೆಜಿಎಫ್ ಚಾಪ್ಟರ್ 2 ಬಿಡುಗಡೆ ದಿನಾಂಕದಲ್ಲಿ ಬದಲಾವಣೆ ಆಗುವ ಸಾಧ್ಯತೆ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಇನ್ನಷ್ಟೇ ನಿರ್ಧಾರ ಮಾಡಬೇಕಾಗಿದೆ. ಕೋರೋನ ಪರಿಸ್ಥಿತಿ ಮತ್ತು ಚಿತ್ರಮಂದಿರಗಳನ್ನ ತೆರೆಯುವ ಸರ್ಕಾರದ ನಿರ್ಧಾರದ ಮೇಲೆ ಚಿತ್ರ ಬಿಡುಗಡೆ ದಿನಾಂಕದಲ್ಲಿ ಬದಲಾವಣೆ ಆದ್ರೂ ಆಗಬಹುದು ಎಂಬ ಮಾಹಿತಿ ಸಿಕ್ಕಿದೆ.

-masthmagaa.com

Contact Us for Advertisement

Leave a Reply