ಲೆಬನಾನ್‌ ಮೇಲೆ ಏರ್‌ಸ್ಟ್ರೈಕ್: ಹಮಾಸ್‌ ಉಪ ನಾಯಕ ಡಮಾರ್

masthmagaa.com:

ಮಹತ್ವದ ಬೆಳವಣಿಗೆಯಲ್ಲಿ ಇಸ್ರೇಲ್‌ ಭದ್ರತಾ ಪಡೆಗಳು ಹಮಾಸ್‌ನ ಮುಖ್ಯವಾದ ತಲೆಯೊಂದನ್ನ ಹೊಡೆದುರುಳಿಸಿದ್ದಾರೆ. ಲೆಬನಾನ್‌ ರಾಜಧಾನಿ ಬೆರೂಟ್‌ ಮೇಲೆ ನಡೆದ ಇಸ್ರೇಲ್‌ ಸ್ಟ್ರೈಕ್‌ನಲ್ಲಿ ಹಮಾಸ್‌ ಉಪ ನಾಯಕ ಮೃತಪಟ್ಟಿದ್ದಾನೆ. ಸಹೇಲ್‌ ಅಲ್‌ ಅರೋರಿ ಅನ್ನೋ ಈತನ ಸಾವಿನ ಬೆನ್ನಲ್ಲೇ ಇಸ್ರೇಲ್‌ ಹಮಾಸ್‌ ಯುದ್ಧ ಇನ್ನಷ್ಟು ತೀವ್ರಗೊಳಲಿದೆ ಅಂತೇಳಲಾಗ್ತಿದೆ. ಸಹೇಲ್‌ ಹುತಾತ್ಮರಾದ್ರು ಅಂತ ಹಮಾಸ್‌ ಹೇಳಿಕೆ ಬಿಡುಗಡೆ ಮಾಡಿದೆ. ಆದ್ರೆ ಖುದ್ದು ಇಸ್ರೇಲ್‌ ಈ ಹೇಳಿಕೆಯನ್ನ ಕಣೆಗಣಿಸಿದೆ. ಇತ್ತ ಲೆಬನಾನ್‌ನ ಹೆಜ್ಬೊಲ್ಲಾ ಲೀಡರ್‌ ಸಯ್ಯದ್‌ ಹಸನ್‌ ನಸ್ರಲ್ಲಾ, ನಮ್ಮಲ್ಲಿದ್ದ ಪ್ಯಾಲಸ್ತೀನ್‌ ಅಧಿಕಾರಿಗಳ ಮೇಲೆ ದಾಳಿ ನಡೆಸಿದ ಇಸ್ರೇಲ್‌ ಮೇಲೆ ಸೇಡು ತೀರಿಸ್ಕೋತೀವಿ ಅಂತ ಹೇಳಿಕೆ ನೀಡಿದ್ದಾನೆ. ಲೆಬನಾನ್‌ ಹಂಗಾಮಿ ಪ್ರಧಾನಿ ನಜೀಬ್‌ ಮಿಕಾಟಿ ಇಸ್ರೇಲ್‌ ಈ ಯುದ್ಧವನ್ನ ಇನ್ನೊಂದು ಹಂತಕ್ಕೆ ತಗೊಂಡ್‌ ಹೋಗ್ತಿದೆ ಅಂತ ಆರೋಪಿಸಿದ್ದಾರೆ. ಅಂದ್ಹಾಗೆ ಈ ಹಮಾಸ್‌ ಉಪನಾಯಕ ಅಲ್‌ ಅರೋರಿ ಇರಾನ್‌ ಜೊತೆಗೆ ಒಳ್ಳೇ ಸಂಬಂಧ ಹೊಂದಿದ್ದ ಅಂತ ತಿಳಿದು ಬಂದಿದೆ. ಹಮಾಸ್‌ ನಾಯಕರನ್ನ ಗುರುತಿಸೋಕೆ ಇಸ್ರೇಲ್‌ ಸೈನಿಕರಿಗೆ ಉಗ್ರರ ಚಿತ್ರ ಇರೋ ಇಸ್ಪೀಟ್‌ ಕಾರ್ಡ್‌ಗಳನ್ನ ಕೊಟ್ಟಿದ್ರಂತೆ. ಅದ್ರಲ್ಲಿ ಅಲ್‌ ಅರೋರಿ ಪೋಟೋವನ್ನ ಜೋಕರ್‌ ಕಾರ್ಡ್‌ನಲ್ಲಿ ಹಾಕಿದ್ರು ಅಂತ ವರದಿಯಾಗಿದೆ.

-masthmagaa.com

Contact Us for Advertisement

Leave a Reply