ಹೆಜ್ಬೊಲ್ಲಾ ಉಗ್ರ ಸಂಘಟನೆ ಜೊತೆ ಇಸ್ರೇಲ್‌ ಒಪ್ಪಂದಕ್ಕೆ ಸಜ್ಜು!

masthmagaa.com:

ಇಸ್ರೇಲ್‌-ಹಮಾಸ್‌ ಯುದ್ಧ ನಡೀತಿರೋ ಮಧ್ಯದಲ್ಲಿ ಇದೀಗ ಲೆಬನಾನ್‌ನ ಹೆಜ್ಬೊಲ್ಲಾ ಉಗ್ರ ಸಂಘಟನೆ ಜೊತೆ ಒಪ್ಪಂದ ಮಾಡ್ಕೊಳ್ಳೊ ಸಾಧ್ಯತೆ ಇದೆ. ಹೀಗಂತ ಇಸ್ರೇಲಿ ರಕ್ಷಣಾ ಸಚಿವ ಯೋವ್‌ ಗ್ಯಾಲಂಟ್‌ ಅವ್ರು ಜನವರಿ 3 ರಂದು ನಡೆದ ಮೀಟಿಂಗ್‌ ಒಂದ್ರಲ್ಲಿ ಹೇಳಿದ್ದಾರೆ. ʻನಾವೀಗ ಇಕ್ಕಟ್ಟಿನ ಪರಿಸ್ಥಿಯಲ್ಲಿದ್ದೀವಿ. ರಾಜತಾಂತ್ರಿಕ ಒಪ್ಪಂದಕ್ಕೆ ನಮ್ಮ ಬಳಿ ಹೆಚ್ಚು ಟೈಮ್‌ ಇಲ್ಲ. ಆದ್ರೂ ಕೂಡ ಇದನ್ನ ನಾವು ಪ್ರಿಫರ್‌ ಮಾಡ್ತೀವಿʼ ಅಂತ ಒಪ್ಪಂದಕ್ಕೆ ಕೈ ಹಾಕೋ ಬಗ್ಗೆ ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply