ಇರಾನ್‌ಗೆ ಕಾಲ್‌ ಮಾಡಿದ ಸೌದಿ! ಜಾಗತಿಕ ರಾಜಕೀಯದಲ್ಲಿ ಅಲ್ಲೋಲ!

masthmagaa.com:

ಇಸ್ರೇಲ್‌-ಹಮಾಸ್‌ ಯುದ್ಧ 6ನೇ ದಿನಕ್ಕೆ ಕಾಲಿಟ್ಟಿದ್ದು, ಸದ್ಯಕ್ಕೆ ನಿಲ್ಲುವ ಯಾವ ಲಕ್ಷಣನೂ ಕಾಣ್ತಿಲ್ಲ. ಇದೀಗ ಇಸ್ರೇಲ್‌‌ ಯುದ್ದಕ್ಕಂತಾನೇ ಹೊಸ ತುರ್ತು ಕ್ಯಾಬಿನೆಟ್‌, ಅಥವಾ ವಾರ್‌ ಕ್ಯಾಬಿನೆಟ್‌ನ್ನ ರಚಿಸಿದೆ. ಇದನ್ನ ಬೇಕಾದ್ರೆ ಎಮರ್ಜೆನ್ಸಿ ಗವರ್ನ್‌ಮೆಂಟ್‌ ಅಂತ ಕೂಡ ಕರೀಬಹುದು. ವಿಶೇಷ ಅಂದ್ರೆ ಇದ್ರಲ್ಲಿ ವಿರೋಧ ಪಕ್ಷದ ಸದಸ್ಯರು ಕೂಡ ಭಾಗಿಯಾಗಿದ್ದಾರೆ. ಇಸ್ರೇಲ್‌ನ ಮಾಜಿ ರಕ್ಷಣಾ ಮುಖ್ಯಸ್ಥ ಹಾಗು ನ್ಯಾಷನಲ್‌ ಯುನಿಟಿ ಪಕ್ಷದ ಬೆನ್ನಿ ಗ್ಯಾಂಟ್‌ ಇದರ ಭಾಗವಾಗಿದ್ದಾರೆ. ಈ ಕ್ಯಾಬಿನೆಟ್‌ ಯುದ್ಧದ ಸಂಪೂರ್ಣ ಹಿಡಿತವನ್ನ ಕೈಗೆ ತೆಗೆದುಕೊ‍ಳ್ಳಲಿದೆ. ಈ ಸಂಬಂಧ ಜಂಟಿ ಹೇಳಿಕೆ ಪ್ರಕಟಿಸಿದ್ದು, ಯುದ್ಧದ ಸಮಯದಲ್ಲಿ ಯುದ್ಧಕ್ಕೆ ಸಂಬಂಧವಿರದ ಪಾಲಿಸಿಗಳನ್ನ, ಕಾನೂನಗಳನ್ನ ಹೊರಡಿಸಲ್ಲ ಅಂತ ಹೇಳಲಾಗಿದೆ.
ಇನ್ನು ಗಾಜಾವನ್ನ ಮಿಲಿಟರಿ ವಲಯ ಅಂತ ಘೋಷಿಸಲಾಗಿದೆ. ಇನ್ನು ಅತ್ತ ವಿಡಿಯೋ ಮೆಸೇಜ್‌ ಒಂದನ್ನ ರಿಲೀಸ್‌ ಮಾಡಿರೋ ಹಮಾಸ್‌ ಭಯೋತ್ಪಾದಕರ ಸೀನಿಯರ್‌ ಲೀಡರ್‌ ಮಹಮೂದ್‌ ಅಲ್‌ ಜಹಾರ್‌, ಸದ್ಯ ಇಸ್ರೇಲ್‌ ನಮ್ಮ ಫಸ್ಟ್‌ ಟಾರ್ಗೆಟ್‌ ಆಗಿದ್ದು ಮುಂದೆ ಇಡೀ ಭೂಮಿ ನಮ್ಮ ಕಾನೂನಿಗೆ ಒಳಪಡುತ್ತೆ ಅಂತ ಹುಸಿ ವಾರ್ನ್‌ ಮಾಡಿದ್ದಾನೆ. ಜೊತೆಗೆ ನಮ್ಮ ಕಾನೂನಿನಲ್ಲಿ ಯಾವುದೇ ಅನ್ಯಾಯ ಹಾಗೂ ದಬ್ಬಾಳಿಕೆಗೆ ಜಾಗ ಇರೋದಿಲ್ಲ. ಜೊತೆಗೆ ಈ ಹಿಂದೆ ಪ್ಯಾಲಸ್ತೈನ್‌, ಲೆಬನಾನ್‌ ಮತ್ತು ಸಿರಿಯಾ ಸೇರಿದಂತೆ ಎಲ್ಲಾ ಅರಬ್‌ ರಾಷ್ಟ್ರಗಳಲ್ಲಿ ಅರಬ್ಬರ ವಿರುದ್ಧ ನಡೆದ ಹಿಂಸಾಚಾರಗಳು ಮತ್ತೆ ನಡೆಯೋದಿಲ್ಲ ಅಂತ ಹೇಳಿದ್ದಾರೆ. ಇನ್ನು ಈ ವಿಡಿಯೋ ರಿಲೀಸ್‌ ಆದ ಕೆಲವೇ ಹೊತ್ತಲ್ಲಿ ಮಾತಾಡಿರುವ ನೆತನ್ಯಾಹು, ನಮ್ಮ ದಾಳಿಯನ್ನ ತೀವ್ರಗೊಳಿಸಿದ್ದು, ಪ್ರತಿಯೊಬ್ಬ ಹಮಾಸ್‌ ಉಗ್ರರನ್ನ ಹತ್ಯೆ ಮಾಡಲಾಗುತ್ತೆ. ಜೊತೆಗೆ ಜಗತ್ತು ದಾಯೇಶ್‌ ಅಂದ್ರೆ ಐಸಿಸ್‌ ಉಗ್ರರನ್ನ ನಾಶಪಡಿಸಿದ ರೀತಿಯಲ್ಲೇ ನಾವು ಹಮಾಸ್‌ ಉಗ್ರರನ್ನ ಸಂಪೂರ್ಣ ನಾಶ ಮಾಡ್ತೀವಿ ಅಂತ ಗುಡುಗಿದ್ದಾರೆ. ಇತ್ತ ಹಮಾಸ್‌ ಅನ್ನೋ ಉಗ್ರ ಸಂಘಟನೆ ಭೂಮಿ ಮೇಲೆ ಇರದಂತಯೇ ಅದನ್ನ ಅಳಿಸಿ ಹಾಕಿ ಬಿಡ್ತೀವಿ ಅಂತ ಇಸ್ರೇಲ್‌ ರಕ್ಷಣಾ ಸಚಿವ ಯೋವ್‌ ಗ್ಯಾಲಂಟ್‌ ಕೂಡ ಶಪಥ ಮಾಡಿದ್ದಾರೆ. ಇನ್ನು ಗಾಜಾ ಪಟ್ಟಿ ಮೇಲೆ ದಾಳಿ ತೀವ್ರಗೊಳಿಸಿರುವ ಇಸ್ರೇಲ್‌, ಹಮಾಸ್‌ನ ಸೀನಿಯರ್‌ ಕಮಾಂಡರ್‌ ಮುಹಮ್ಮದ್‌ ಅಬು ಶಮ್ಲಾನನ್ನ ಹೊಡೆದುರುಳಿಸಲಾಗಿದೆ ಅಂತ ಹೇಳಿದೆ. ಅತ್ತ ಹಮಾಸ್‌ ಉಗ್ರರು ಇಸ್ರೇಲ್‌ನ ಮಕ್ಕಳ ಶಿರಚ್ಛೇದ ಮಾಡ್ತಿದೆ ಅನ್ನೋದಕ್ಕೆ ನಮ್ಮ ಬಳಿ ಎವಿಡೆನ್ಸ್‌ ಇದೆ ಅಂತ ಇಸ್ರೇಲ್‌ ಹೇಳಿದೆ. ಇನ್ನೊಂದ್‌ ಕಡೆ ಇಸ್ರೇಲ್‌ ಮೇಲಿನ ಹಮಾಸ್‌ ದಾಳಿ ಅತ್ಯಂತ ದುಷ್ಟ ಕೃತ್ಯ ಅಂತ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಹೇಳಿದ್ದಾರೆ. ಭಯೋತ್ಪಾದಕರು ಮಕ್ಕಳ ಶಿರಚ್ಛೇದ ಮಾಡುವ ಫೋಟೋಗಳನ್ನ ನಾನು ನೋಡ್ತೀನಿ ಅಂತ ಯಾವತ್ತು ಅಂದುಕೊಂಡಿರಲಿಲ್ಲ ಅಂತ ಬೈಡನ್‌ ಹೇಳಿದ್ದಾರೆ. ಜೊತೆಗೆ ಯುದ್ಧಪೀಡಿತ ಇಸ್ರೇಲ್‌ನಲ್ಲಿ ಕನಿಷ್ಠ 22 ಜನ ಅಮೆರಿಕನ್ನರು ಪ್ರಾಣ ಕಳೆದುಕೊಂಡಿದ್ದಾರೆ. ಹಮಾಸ್‌ ಉಗ್ರರಿಂದ ಅಪಹರಣಕ್ಕೊಳಗಾದ ಇಸ್ರೇಲ್‌ ಜನರಲ್ಲಿ ಕೆಲವು ಅಮೆರಿಕದವರು ಇದ್ದಾರೆ ಅಂತ ಬೈಡನ್‌ ಕನ್ಫರ್ಮ್‌ ಮಾಡಿದ್ದಾರೆ. ಜೊತೆಗೆ ಇಸ್ರೇಲ್‌ನ ಈ ಪರಿಸ್ಥಿತಿಯ ಲಾಭ ಪಡೆಯಲು ಯಾವುದೇ ರಾಷ್ಟ್ರ ಅಥ್ವಾ ಸಂಸ್ಥೆಗಳು ಯೋಚಿಸುತ್ತಿದ್ದರೆ ಆ ರೀತಿ ಮಾಡಬೇಡಿ ಎಂದು ನಾನು ನಿಮಗೆ ಹೇಳಲು ಬಯಸುತ್ತೇನೆ ಅಂತ ಬೈಡನ್‌ ವಾರ್ನ್‌ ಮಾಡಿದ್ದಾರೆ. ಇನ್ನು ಮಕ್ಕಳ ಶಿರಚ್ಚೇದದ ಸುದ್ಧಿ ಬಗ್ಗೆ ಸಾಕಷ್ಟು ಗೊಂದಲ ಉಂಟಾಗಿದ್ದು, ಕೆಲವು ಕಡೆ ಇದು ಫೇಕ್‌ ಎನ್ನಲಾಗ್ತಿದೆ. ಇದರ ಬೆನ್ನಲ್ಲೇ ವೈಟ್‌ಹೌಸ್‌ ಪ್ರತಿಕ್ರಿಯೆ ನೀಡಿದ್ದು, ಬೈಡನ್‌ ಆ ರೀತಿಯ ಯಾವುದೇ ಫೋಟೋಗಳನ್ನ ನೋಡಿಲ್ಲ ಅವರು ಕೇವಲ ಇರಾನ್‌ ವರದಿಗಳನ್ನ ಉಲ್ಲೇಖಿಸಿ ಮಾತಾಡಿದ್ದಾರೆ ಅಂತ ಸ್ಪಷ್ಟನೆ ನೀಡಿದೆ.

ಮತ್ತೊಂದ್‌ ಕಡೆ ಇತ್ತೀಚಿಗೆ ತಮ್ಮ ಹಳೆ ದ್ವೇಷ ಬಿಟ್ಟು ಚೀನಾ ಮಧ್ಯಸ್ಥಿಕೆಯಿಂದೆ ಒಂದಾಗಿರುವ ಸೌದಿ ಅರೇಬಿಯಾ ಮತ್ತು ಇರಾನ್‌ ಮೊದಲ ಬಾರಿಗೆ ಇಸ್ರೇಲ್‌- ಪ್ಯಾಲಸ್ತೈನ್‌ ಬಿಕ್ಕಟ್ಟಿನ ಕುರಿತು ಚರ್ಚೆ ನಡೆಸಿವೆ. ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಮತ್ತು ಸೌದಿ ಕ್ರೌನ್‌ ಪ್ರಿನ್ಸ್‌ ಮೊಹಮದ್‌ ಬಿನ್‌ ಸಲ್ಮಾನ್‌ ಫೋನ್‌ ಕಾಲ್‌ ಮೂಲಕ ಮಾತುಕತೆ ನಡೆಸಿದ್ದಾರೆ. ಈ ವೇಳೆ ಪ್ಯಾಲಸ್ತೈನ್‌ ವಿರುದ್ಧ ನಡೆಯುತ್ತಿರುವ ಯುದ್ಧಪರಾಧಗಳನ್ನ ಕೊನೆಗೊಳಿಸುವ ಕುರಿತು ಮಾತುಕತೆ ನಡೆಸಲಾಗಿದೆ ಅಂತ ಇರಾನ್‌ನ ಸರ್ಕಾರಿ ಮಾಧ್ಯಮ ವರದಿ ಮಾಡಿದೆ. ಜೊತೆಗೆ ಸದ್ಯ ನಡೆಯುತ್ತಿರುವ ಯುದ್ಧ ತೀವ್ರಗೊಳ್ತಿರೋದನ್ನ ತಡೆಯಲು ಎಲ್ಲಾ ಅಂತಾರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ಜೊತೆ ಚರ್ಚೆ ನಡೆಸಲಾಗುತ್ತೆ. ಈ ಯುದ್ಧ ನಿಲ್ಲಿಸಲು ಸಾಧ್ಯವಿರೋ ಎಲ್ಲಾ ಪ್ರಯತ್ನ ಮಾಡಲಾಗ್ತಿದೆ ಎಂದು ಸಲ್ಮಾನ್‌ ತಿಳಿಸಿದ್ದಾರೆ ಅಂತ ಸೌದಿ ಮಾಧ್ಯಮ ವರದಿ ಮಾಡಿದೆ. ಅತ್ತ ಯುಕ್ರೇನ್‌ ಮೇಲೆ ನಿರಂತರವಾಗಿ ದಾಳಿ ಮಾಡ್ತಿರೋ ರಷ್ಯಾ, ಇಸ್ರೇಲ್‌- ಹಮಾಸ್‌ ಯುದ್ಧ ನಿಲ್ಲಿಸೋ ಕುರಿತು ಮತ್ತೊಮೆ ಹೇಳಿಕೆ ಕೊಟ್ಟಿದೆ. ಈ ಬಗ್ಗೆ ಮಾತಾಡಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌, ಯಾವುದೇ ಕಾರಣಕ್ಕೆ ಇಸ್ರೇಲ್‌ -ಗಾಜಾ ಯುದ್ಧ ಹರಡದಂತೆ ತಡೆಯಬೇಕು. ಒಂದು ವೇಳೆ ಸಂಘರ್ಷ ಹರಿಡದ್ದೇ ಆದ್ರೆ ಅದು ಜಾಗತಿಕವಾಗಿ ಪರಿಣಾಮ ಬೀಳಿದೆ. ಹೀಗಾಗಿ ಎರಡೂ ಕಡೆಯವರು ಮಾತುಕತೆ ನಡೆಸಿ ಪ್ರಾಬ್ಲಂ ಸಾಲ್ವ್‌ ಮಾಡ್ಕೋಬೇಕು ಹಾಗೂ ಅದನ್ನ ಇಸ್ರೇಲ್‌ ಮತ್ತು ಪ್ಯಾಲಸ್ತೈನ್‌ ಒಪ್ಪಿಕೊಳ್ಳಬೇಕು ಅಂತ ಪುಟಿನ್‌ ಒತ್ತಾಯಿಸಿದ್ದಾರೆ.

-masthmagaa.com

Contact Us for Advertisement

Leave a Reply