ಗಾಜಾ ಇಸ್ರೇಲ್‌ಗೆ ಸೇರ್ಪಡೆ? ಇಸ್ರೇಲ್‌ ಹೇಳಿಕೆಗೆ ಜಗತ್ತೇ ಶಾಕ್!

masthmagaa.com:

ಅತ್ತ ಭೀಕರ ಸಂಘರ್ಷ ಮುಂದುವರೀತಾ ಇದ್ರೆ, ಇತ್ತ ಇಸ್ರೇಲ್‌ ಯುದ್ಧದ ನಂತರದ ಗಾಜಾ ಭವಿಷ್ಯವನ್ನ ಬರೆತಿರೋದು ಸ್ಪಷ್ಟವಾಗ್ತಿದೆ. ಮೊನ್ನೆ ತಾನೆ ಯುದ್ಧದ ನಂತ್ರ ಗಾಜಾ ಜನರಿಗೆ ಒಳ್ಳೇ ಭವಿಷ್ಯವನ್ನ ರೂಪಿಸ್ತೀವಿ, ಸದ್ಯ ದಕ್ಷಿಣ ಗಾಜಾಗೆ ಹೋಗಿ ಪ್ರಾಣ ಉಳಿಸಿಕೊಳ್ಳಿ ಅನ್ನೋ ರೀತಿ ಮಾತಾಡಿದ್ದ ಇಸ್ರೇಲ್‌ ಇದೀಗ ಪ್ಯಾಲೆಸ್ತೇನ್‌ ಅಥಾರಿಟಿಗೂ ಗಾಜಾ ದಕ್ಕಲ್ಲ ಅನ್ನೋದನ್ನ ಸ್ಪಷ್ಟಪಡಿಸಿದೆ. NBCಯ ಮೀಟ್‌ ದ ಪ್ರೆಸ್‌, ಕಾರ್ಯಕ್ರಮದಲ್ಲಿ ಮಾತಾಡಿರೋ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು, ಯುದ್ಧ ಮುಗಿದ ಮೇಲೆ ಪ್ಯಾಲೆಸ್ತೇನ್‌ ಅಥಾರಿಟಿ ಗಾಜಾವನ್ನ ಆಳೋ ಹಾಗಿಲ್ಲ. ಗಾಜಾ ನಿಶಸ್ತ್ರೀಕರಣಗೊಳ್ಳಬೇಕು. ಇದುವರೆಗು ಪ್ಯಾಲೆಸ್ತೇನ್‌ ಪಡೆಯಾಗಲಿ, ಪ್ಯಾಲೆಸ್ತೇನ್‌ ಅಥಾರಿಟಿಯಾಗಲಿ ಗಾಜಾನ ಕಂಟ್ರೋಲ್‌ ಮಾಡೋಕಾಗಿರೋದನ್ನ ನಾವು ನೋಡಿಲ್ಲ ಅಂತ ಹೇಳಿದ್ದಾರೆ.

ಇನ್ನು ಇಸ್ರೇಲ್‌, ಹಮಾಸ್‌ ಉಗ್ರರ ಮೇಲಿನ ತನ್ನ ದಾಳಿಯನ್ನ ತೀವ್ರಗೊಳಿಸಿದೆ. ಇದೀಗ ಗಾಜಾದ ದೊಡ್ಡ ಆಸ್ಪತ್ರೆ ಅಲ್‌-ಶಿಫಾನ ಮೇನ್‌ ಗೇಟ್‌ ಬಳಿಯೇ ಇಸ್ರೇಲ್‌ ತನ್ನ ಯುದ್ಧ ಟ್ಯಾಂಕರ್‌ಗಳನ್ನ ತಂದು ನಿಲ್ಲಿಸಿಕೊಂಡಿದೆ. ಈ ಮೂಲಕ ಉತ್ತರ ಗಾಜಾದಲ್ಲಿ ಹಮಾಸ್‌ ಉಗ್ರರ ಬೇಟೆಯನ್ನ ಕಂಟಿನ್ಯೂ ಮಾಡಿದೆ. ಆಸ್ಪತ್ರೆಯಲ್ಲಿ ಇಂಧನ ಕೊರತೆಯಿಂದ ಸಾವನ್ನಪ್ಪಿದ ನವಜಾತ ಶಿಶುಗಳ ಸಂಖ್ಯೆ 7ಕ್ಕೆ ಹಾಗೂ ರೋಗಿಗಳ ಸಾವಿನ ಸಂಖ್ಯೆ 27ಕ್ಕೆ ಏರಿಕೆಯಾಗಿದೆ ಅಂತ ಗಾಜಾ ಆರೋಗ್ಯ ಸಚಿವಾಲಯ ಹೇಳಿದೆ. ಜೊತೆಗೆ ಉತ್ತರ ಗಾಜಾದ ಎಲ್ಲಾ ಆಸ್ಪತ್ರೆಗಳು ತಮ್ಮ ಕಾರ್ಯಾಚರಣೆಗಳನ್ನ ಸ್ಟಾಪ್‌ ಮಾಡಿವೆ ಅಂತ ಅಲ್ಲಿನ ಸರ್ಕಾರ ಹೇಳಿದೆ.

ಇತ್ತ ಜಾಗತಿಕವಾಗಿ ಹಲವು ಕಚೇರಿಗಳಲ್ಲಿರುವ ವಿಶ್ವಸಂಸ್ಥೆಯ ಫ್ಲಾಗ್‌ನ್ನ ಅರ್ಧಕ್ಕೆ ಇಳಿಸಿ ಶೋಕಾಚರಣೆ ಮಾಡಲಾಗಿದೆ. ಇಸ್ರೇಲ್‌ ಹಮಾಸ್‌ ಯುದ್ಧ ಶುರುವಾದಾಗಿನಿಂದ ಇಲ್ಲಿಯವರೆಗೆ ಗಾಜಾ ಪಟ್ಟಿಯಲ್ಲಿ ಸಾವನ್ನಪ್ಪಿರೋ ವಿಶ್ವಸಂಸ್ಥೆ ಸಿಬ್ಬಂದಿಗೆ ಸಂತಾಪ ಸೂಚಿಸುವ ಸಲುವಾಗಿ ಧ್ವಜವನ್ನ ಅರ್ಧಕ್ಕೆ ಇಳಿಸಲಾಗಿದೆ. ಅಂದ್ಹಾಗೆ ಹಮಾಸ್‌- ಇಸ್ರೇಲ್‌ ಯುದ್ಧದಲ್ಲಿ 100ಕ್ಕೂ ಹೆಚ್ಚು ವಿಶ್ವಸಂಸ್ಥೆಯ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ ಅಂತ ವಿಶ್ವಸಂಸ್ಥೆ ಹೇಳಿದೆ. ಈ ಬಗ್ಗೆ ರಿಯಾಕ್ಟ್‌ ಮಾಡಿರೋ ವಿಶ್ವಸಂಸ್ಥೆಯ ಡೈರಕ್ಟರ್‌ ಜನರಲ್‌ Tatiana Valovaya, ವಿಶ್ವಸಂಸ್ಥೆಯ ಇತಿಹಾಸದಲ್ಲೇ ಇದೇ ಮೊದಲ ಸಲ ಅದೂ ಕಡಿಮೆ ಸಮಯದಲ್ಲಿ ಇಷ್ಟೊಂದು ಜನ ಕಾರ್ಯಕರ್ತರ ಮೃತಪಟ್ಟಿದ್ದಾರೆ. ಈ ಕಷ್ಟದ ಟೈಮ್‌ನಲ್ಲಿ ನಾವೆಲ್ಲಾ ಒಂದಾಗಿದ್ದು, ಯುದ್ಧದಲ್ಲಿ ಪ್ರಾಣ ತ್ಯಾಗ ಮಾಡಿದವರಿಗೆ ಗೌರವ ಅರ್ಪಿಸುತ್ತೇವೆ ಅಂತ ಹೇಳಿದ್ದಾರೆ. ಅತ್ತ ಗಾಜಾ ಮೇಲಿನ ಇಸ್ರೇಲ್‌ ಏರ್‌ಸ್ಟ್ರೈಕ್‌ನಲ್ಲಿ ಕನಿಷ್ಠ 60 ಮಸೀದಿಗಳು ನಾಶವಾಗಿವೆ ಅಂತ ವರದಿಯಾಗಿದೆ.

-masthmagaa.com

Contact Us for Advertisement

Leave a Reply