ಇರಾನ್‌ನ ಪ್ರಮುಖ ಏರ್‌ಪೋರ್ಟ್‌ ಬಳಿ ಮಿಸೈಲ್‌ ದಾಳಿ ಮಾಡಿದ ಇಸ್ರೇಲ್!

masthmagaa.com:

ಕಳೆದೊಂದು ವಾರದಿಂದ ಕುದೀತಾ ಇದ್ದ ಪ್ರತೀಕಾರದ ಜ್ವಾಲೆ ಕೊನೆಗೂ ಕಟ್ಟೆ ಒಡೆದಿದೆ. ಇಸ್ರೇಲ್‌ ಇರಾನ್‌ ಮೇಲೆ ಮುಗಿಬಿದ್ದಿದೆ. ವರ್ಷಗಳ ಕಾಲ ತೆರೆಮೆರೆಯಲ್ಲಿ ಪರೋಕ್ಷವಾಗಿ ನಡೀತಾ ಇದ್ದ ಯುದ್ಧ ಈಗ ಬಹಿರಂಗವಾಗಿದೆ. ಇಸ್ರೇಲ್‌-ಇರಾನ್‌ ಈಗ ನೇರ ಸಂಘರ್ಷಕ್ಕೆ ಬಿದ್ದಿವೆ. ಇಸ್ರೇಲ್‌ ಇರಾನ್‌ನ ಹೃದಯಭಾಗಕ್ಕೆ ಗುರಿ ಇಟ್ಟಿದೆ. ಇಸ್‌ಫಹಾನ್‌ ಅನ್ನೋ ನಗರದ ಏರ್‌ಪೋರ್ಟ್‌ ಬಳಿ ಮಿಸೈಲ್‌ ದಾಳಿ ಮಾಡಿದೆ. ಇಸ್‌ಫಹಾನ್‌ ಇರಾನ್‌ಗೆ ತುಂಬಾ ಇಂಪಾರ್ಟೆಂಟ್‌ ಜಾಗ. ಇಲ್ಲಿ ಇರಾನ್‌ನ ನ್ಯೂಕ್ಲಿಯರ್‌ ಸೈಟ್‌ಗಳಿವೆ. ಅಲ್ಲದೇ ನ್ಯೂಕ್ಲಿಯರ್‌ಗೆ ಬೇಕಾದ ಯುರೇನಿಯಂ ಘಟಕ ಕೂಡ ಇದೆ. ಜೊತೆಗೆ ಹತ್ತಿರದಲ್ಲೇ ಇರಾನ್‌ನ ಪ್ರಮುಖ ಏರ್‌ಬೇಸ್‌ ಇದೆ. ಇಲ್ಲಿ 1979ಕ್ಕು ಮುಂಚೆ ಅಮೆರಿಕದಿಂದ ಖರೀದಿಸಿದ್ದ F 14 ಟಾಮ್‌ಕ್ಯಾಟ್‌ ಸೂಪರ್‌ಸಾನಿಕ್‌ ಯುದ್ದವಿಮಾನಗಳಿವೆ. ಈಗ ಇಲ್ಲೇ ಇಸ್ರೇಲ್‌ ದಾಳಿ ಮಾಡಿದೆ. ಕೆಲ ಸ್ಪೋಟ ನಡೆದಿರೋದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಆದ್ರೆ ತಕ್ಷಣವೇ ಇರಾನ್‌ ತನ್ನ ವಾಯುಪ್ರದೇಶವನ್ನ ಬಂದ್‌ ಮಾಡಿ, ಏರ್‌ ಡಿಫೆನ್ಸ್‌ನ ಸಿಸ್ಟಂನ್ನ ಆಕ್ಟಿವ್‌ ಮಾಡಿದೆ. ಜೊತೆಗೆ ಮಿಸೈಲ್‌ ದಾಳಿ ಏನು ಅಗಿಲ್ಲ ಒಂದಿಷ್ಟು ಡ್ರೋನ್‌ಗಳನ್ನ ಹೊಡೆದಿರೋದಾಗಿ ಹೇಳ್ಕೊಂಡಿದೆ. ಜೊತೆಗೆ ನ್ಯೂಕ್ಲಿಯರ್‌ ಫೆಸಿಲಿಟಿಗಳಿಗೆ ಏನು ಆಗಿಲ್ಲ ಸೇಫಾಗಿವೆ ಅಂತ ಹೇಳಿದೆ. ಸ್ಪೋಟದ ತೀವ್ರತೆ ಯಾವಮಟ್ಟದಲ್ಲಿತ್ತು ಅನ್ನೋದನ್ನ ಇರಾನ್‌ ಬಿಟ್ಕೊಡ್ತಿಲ್ಲ. ಏನು ಆಗಿಲ್ಲ, ಎಲ್ಲಾ ನಾರ್ಮಲ್ಲಾಗಿದೆ ಅಂತ ಪ್ರೊಜೆಕ್ಟ್‌ ಮಾಡೋಕೆ ಟ್ರೈ ಮಾಡ್ತಿದೆ. ಏರ್‌ಸ್ಪೇಸ್‌ನ್ನ ಕೂಡ ಓಪನ್‌ ಮಾಡಿದೆ.

ಮತ್ತೊಂದ್‌ ಕಡೆ ದಾಳಿಗೂ ಮುನ್ನ ಇರಾನ್ 24-48 ಗಂಟೆಯೊಳಗೆ ನಾವು ಇಸ್ರೇಲ್‌ ಮೇಲೆ ದಾಳಿ ಮಾಡ್ತೀವಿ ಅಂತ ಅಮೆರಿಕಕ್ಕೆ ಹೇಳಿತಂತೆ… ಈ ವಿಚಾರವನ್ನ ಅಮೆರಿಕ ಕೂಡ ಕನ್‌ಫರ್ಮ್‌ ಮಾಡಿದೆ. ಅತ್ತ ಆಸ್ಟ್ರೇಲಿಯಾ ತನ್ನ ಪ್ರಜೆಗಳಿಗೆ ಇಸ್ರೇಲ್‌ ಮತ್ತು ಪ್ಯಾಲೆಸ್ಟೇನ್‌ ಬಿಟ್ಟು ತೆರೆಳೋಕೆ ಹೇಳಿದೆ.

-masthmagaa.com

Contact Us for Advertisement

Leave a Reply