ಉತ್ತರ ಗಾಜಾದಲ್ಲಿ ದಾಳಿ ತೀವ್ರಗೊಳಿಸಿದ ಇಸ್ರೇಲ್‌ ಸೇನಾ ಪಡೆ!

masthmagaa.com:

ಇಸ್ರೇಲ್‌ ಗಾಜಾ ಪಟ್ಟಿಯಲ್ಲಿ ತಮ್ಮ ದಾಳಿಯನ್ನ ತೀವ್ರಗೊಳಿಸಿದೆ. ಉತ್ತರ ಗಾಜಾಪಟ್ಟಿ ಇನ್ಮುಂದೆ ಅಪಯಕಾರಿ ಯುದ್ಧ ವಲಯವಾಗಿ ಬದಲಾಗುತ್ತೆ ಅಂತ ಖುದ್ದು ಇಸ್ರೇಲ್‌ ಭಯಂಕರ ವಾರ್ನಿಂಗ್‌ ಕೊಟ್ಟಿದೆ. ಇಸ್ರೇಲ್‌ ಸೇನಾ ಪಡೆಗಳು ಅಲ್ಲಿನ ನಾಗರಿಕರಿಗೆ ಈ ಕೂಡಲೇ ಜಾಗ ಖಾಲಿಮಾಡಿ ಸೇಫ್‌ ಜಾಗಕ್ಕೆ ಹೋಗಿ ಆದೇಶಿಸಿದೆ. ಇದ್ರ ಜೊತೆಗೆ ಗಾಜಾದ ರಫಾ ನಗರದ ಮೇಲೂ ಆಕ್ರಮಣಕಾರಿ ದಾಳಿ ನಡೆಸೋಕೆ ಇಸ್ರೇಲ್‌ ಪ್ಲಾನ್‌ ಮಾಡಿದೆ. ಇದಕ್ಕೆ ಸಂಬಂಧಪಟ್ಟಂತೆ ಗಾಜಾದ ಖಾನ್‌ ಯೂನಿಸ್‌ ಬಳಿ ಇಸ್ರೇಲ್‌ ಸೇನೆ ಹೊಸ ಟೆಂಟ್‌ಗಳನ್ನ ನಿರ್ಮಿಸ್ತಿದ್ದು ಇದು ಸೆಟಲೈಟ್‌ ಚಿತ್ರದಲ್ಲೂ ಕಾಣಿಸಿಕೊಂಡಿದೆ.

-masthmagaa.com

Contact Us for Advertisement

Leave a Reply