ಇಸ್ರೇಲ್‌ನಲ್ಲಿ ಬ್ಯಾನ್‌ ಆಗಲಿದೆ ಕತಾರ್‌ನ ಅಲ್‌ ಜಜೀರಾ ಸುದ್ದಿ ವಾಹಿನಿ!

masthmagaa.com:

ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಕತಾರ್‌ ಮೂಲದ ಅಲ್‌ ಜಜೀರಾ ಇಂಗ್ಲೀಷ್‌ ನ್ಯೂಸ್‌ ಚಾನೆಲ್‌ನ್ನ ಇಸ್ರೇಲ್‌ನಲ್ಲಿ ಬ್ಯಾನ್‌ ಮಾಡೊದಾಗಿ ಘೋಷಿಸಿದ್ದಾರೆ. ಅಲ್ದೇ ಇದು ಭಯೋತ್ಪಾದಕರ ಚಾನೆಲ್‌ ಆಗಿದೆ…ಗಾಜಾ ಯುದ್ದದಲ್ಲಿ ಇಸ್ರೇಲ್‌ ವಿರುದ್ದ ಪ್ರಚೋದನಾತ್ಮಕ ಸುದ್ದಿಗಳನ್ನ ಬಿತ್ತರಿಸ್ತಿದೆ…ಹೀಗಾಗಿ ಕಠಿಣ ಕ್ರಮ ತಗೊಂಡು ಇದನ್ನ ಬ್ಯಾನ್‌ ಮಾಡ್ತೀವಿ ಅಂತೇಳಿದ್ದಾರೆ. ಅಂದಹಾಗೆ ಇಸ್ರೇಲ್‌ನಲ್ಲಿ ಈ ಚಾನೆಲ್‌ ಬ್ಯಾನ್‌ ಬಗ್ಗೆ ಅಲ್ಲಿನ ಪಾರ್ಲಿಮೆಂಟ್‌ನಲ್ಲಿ ನೆತನ್ಯಾಹು ಪ್ರಸ್ತಾಪಿಸಿದ್ರು, ಅದಕ್ಕೆ ಸಂಸದರಿಂದ ಬೆಂಬಲ ಸಿಕ್ಕಿತ್ತು. ಇದರ ಬೆನ್ನಲ್ಲೆ ಹೇಳಿಕೆ ಕೊಟ್ಟಿದ್ದಾರೆ. ವಿಶೇಷ ಅಂದರೆ ಇದು ಕತಾರ್‌ ಸುದ್ದಿ ಮಾಧ್ಯಮ…ಗಾಜಾ ಹಾಗೂ ಇಸ್ರೇಲ್‌ ನಡುವೆ ಕದನ ವಿರಾಮ ಸಂಬಂಧ ಮಾತುಕತೆಗಳನ್ನ ಇದೇ ಕತಾರ್‌ ನೋಡಿಕೊಳ್ತಿದೆ. ಸೋ ಈ ಹೊತ್ತಲ್ಲೆ ಇಸ್ರೇಲ್‌ ಈ ಕ್ರಮಕ್ಕೆ ಮುಂದಾಗಿದೆ. ಹೀಗಾಗಿ ಕತಾರ್‌ನೊಂದಿಗೆ ಇಸ್ರೇಲ್‌ ಸಂಬಂಧ ಹಾಳಾಗೊ ಸಾಧ್ಯತೆ ಇದೆ ಅಂತ ವಿಶ್ಲೇಷಣೆ ಮಾಡಲಾಗ್ತಿದೆ. ಅಂದ್ಹಾಗೆ 2 ವರ್ಷಗಳ ಹಿಂದೆ ವೆಸ್ಟ್‌ ಬ್ಯಾಂಕ್‌ನಲ್ಲಿ ಇಸ್ರೇಲ್‌ ದಾಳಿಗೆ ಅಲ್‌ ಜಜೀರಾ ಪತ್ರಕರ್ತರೊಬ್ರು ಬಲಿಯಾಗಿದ್ರು. ಅವಾಗಿನಿಂದ ಇಸ್ರೇಲ್‌ ಹಾಗೂ ಈ ಚಾನೆಲ್‌ ಮಧ್ಯೆ ಸಂಬಂಧ ಹದಗೆಟ್ಟಿದೆ.

-masthmagaa.com

Contact Us for Advertisement

Leave a Reply