ಇಸ್ರೇಲ್​​ನ ನ್ಯೂಕ್ಲಿಯರ್ ಘಟಕದ ಬಳಿ ಸಿರಿಯಾ ಮಿಸೈಲ್ ದಾಳಿ!

masthmagaa.com:

ಇಸ್ರೇಲ್ ಮೇಲೆ ಸಿರಿಯಾ ಮಿಸೈಲ್ ದಾಳಿಗೆ ಯತ್ನಿಸಿದೆ. ಸಿರಿಯಾದಿಂದ ಹಾರಿಸಲಾದ ಮಿಸೈಲ್ ಒಂದು ಇಸ್ರೇಲ್​ನ ರಹಸ್ಯ ನ್ಯೂಕ್ಲಿಯರ್ ಘಟಕ ಇರೋ ಪ್ರದೇಶಕ್ಕೆ ಹತ್ತಿರದಲ್ಲೇ ಹೋಗಿ ಬಿದ್ದಿದೆ. ಇದ್ರಲ್ಲಿ ನಾಲ್ವರು ಯೋಧರು ಕೂಡ ಗಾಯಗೊಂಡಿದ್ದಾರೆ ಅಂತ ಸೇನೆ ಮಾಹಿತಿ ನೀಡಿದೆ.. ಅದ್ರ ಬೆನ್ನಲ್ಲೇ ಮರು ದಾಳಿ ನಡೆಸಿರೋ ಇಸ್ರೇಲ್​​​​​, ಸಿರಿಯಾದ ಮಿಸೈಲ್ ಲಾಂಚರ್ ಮತ್ತು ಏರ್​​ ಡಿಫೆನ್ಸ್ ಸಿಸ್ಟಂ ಮೇಲೆ ದಾಳಿ ನಡೆಸಿದೆ. ಇತ್ತೀಚೆಗೆ ಗಾಜಾ ಪಟ್ಟಿಯಿಂದಲೂ ಇಸ್ರೇಲ್ ಮೇಲೆ ಮಿಸೈಲ್ ದಾಳಿ ನಡೆದಿದ್ದು, ಅದನ್ನು ನಿಯಂತ್ರಿಸೋ ಹಮಾಸ್ ಅನ್ನೋ ಇಸ್ಲಾಮಿಕ್ ಸಂಘಟನೆಗಳ ಕೆಲವೊಂದು ಸ್ಥಳಗಳನ್ನು ಕೂಡ ಇಸ್ರೇಲ್ ಟಾರ್ಗೆಟ್ ಮಾಡಿದೆ. ಇದು ಈ ವರ್ಷ ಇಸ್ರೇಲ್ ಮತ್ತು ಸಿರಿಯಾ ನಡುವೆ ನಡೆದ ದೊಡ್ಡ ಸಂಘರ್ಷಗಳಲ್ಲಿ ಒಂದಾಗಿದೆ. ಅಂದಹಾಗೆ ಇಸ್ರೇಲ್​​ನಲ್ಲಿ ಇರಾನ್ ಸೈನಿಕರಿದ್ದು, ತಕ್ಕಮಟ್ಟಿಗೆ ಹಿಡಿತ ಸಾಧಿಸಿದ್ದಾರೆ. ಈ ಹಿಂದೆ ನತಾಂಜ್​​​ ಪರಮಾಣು ಘಟಕದಲ್ಲಿ ನಡೆದ ದಾಂಧಲೆಗೆ ಇಸ್ರೇಲ್ ಕಾರಣ ಅಂತ ಇರಾನ್ ಆರೋಪಿಸುತ್ತಲೇ ಬಂದಿದೆ. ಅದ್ರ ಬೆನ್ನಲ್ಲೇ ಸಿರಿಯಾದಿಂದ ಇಸ್ರೇಲ್ ಮೇಲೆ ಅದು ಕೂಡ ನ್ಯೂಕ್ಲಿಯರ್ ಘಟಕದ ಹತ್ತಿರವೇ ನಡೆದಿರೋ ಈ ದಾಳಿ ಇರಾನ್​​​ ಪ್ರೇರಿತವಾಗಿರೋ ಸಾಧ್ಯತೆ ಕೂಡ ಇದೆ. ಇನ್ನು ಸಿರಿಯಾದ ಮೇಲೆ ಇಸ್ರೇಲ್ ದಾಳಿ ನಡೆಸೋದು ಇದೇನು ಹೊಸತಲ್ಲ.. 2011ರಲ್ಲಿ ಸಿರಿಯಾದಲ್ಲಿ ನಾಗರಿಕ ಯುದ್ಧ ಶುರುವಾದಾಗಿನಿಂದಲೂ ಇಸ್ರೇಲ್ ಒಂದಲ್ಲಾ ಒಂದು ದಾಳಿ ನಡೆಸುತ್ತಲೇ ಇರುತ್ತೆ. ಕಳೆದ ವರ್ಷ ಕೂಡ ಸಿರಿಯಾದಲ್ಲಿ 50 ಟಾರ್ಗೆಟ್​​ಗಳನ್ನು ಧ್ವಂಸಗೊಳಿಸೋದಾಗಿ ಹೇಳಿತ್ತು.

-masthmagaa.com

Contact Us for Advertisement

Leave a Reply