ಲೆಬೆನಾನ್‌ ಮೇಲೆ ಇಸ್ರೇಲ್‌ ದಾಳಿ: ಹೆಜ್ಬೊಲ್ಲಾ ಸೇನಾ ನಾಯಕ ಡಮಾರ್!‌

masthmagaa.com:

ದಕ್ಷಿಣ ಲೆಬೆನಾನ್‌ನಲ್ಲಿ ಇಸ್ರೇಲ್‌ ಏರ್‌ಸ್ಟ್ರೈಕ್‌ನಲ್ಲಿ ಹೆಜ್ಬೊಲ್ಲಾದ ಹಿರಿಯ ಕಮಾಂಡರ್‌ ಒಬ್ನನ್ನ ಹೊಡೆದುರಿಳಿಸಲಾಗಿದೆ. ಮೃತಪಟ್ಟಿರೋ ವಿಸ್ಸಾಮ್‌ ಅಲ್-ತಾವಿಲ್‌, ಹೆಜ್ಬೊಲ್ಲಾದ ರಾದ್ವಾನ್‌ ಫೋರ್ಸ್‌ ಅನ್ನೋ ಘಟಕದ ಉಪನಾಯಕನಾಗಿದ್ದ. ಈತ ಹೋಗ್ತಿದ್ದ ಕಾರ್‌ ಮೇಲೆ ದಾಳಿ ನಡೆಸಿ ಈತನನ್ನ ಹೊಡೆದುರಿಳಿಸಲಾಗಿದೆ. ಅಂದ್ಹಾಗೆ ಇದುವರೆಗೆ ಇಸ್ರೇಲ್‌ ದಾಳಿಗೆ 130ಕ್ಕೂ ಹೆಚ್ಚು ಹೆಜ್ಬೊಲ್ಲಾಗಳು ಮೃತ ಪಟ್ಟಿದ್ದಾರೆ ಅಂತ ವರದಿಯಾಗಿದೆ.

-masthmagaa.com

Contact Us for Advertisement

Leave a Reply