ಇಸ್ರೇಲ್​-ಪ್ಯಾಲೆಸ್ತೇನ್ ಸಂಘರ್ಷ ಮತ್ತೆ ಶುರು!

masthmagaa.com:

ಇಸ್ರೇಲ್ ಮತ್ತು ಪ್ಯಾಲೆಸ್ತೇನ್ ನಡುವೆ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಪ್ಯಾಲೆಸ್ತೇನ್​​​ನ ವೆಸ್ಟ್​ ಬ್ಯಾಂಕ್​​ನಲ್ಲಿ ನಿನ್ನೆ ಇಸ್ರೇಲ್ ಯೋಧರು ನಡೆಸಿದ ಗುಂಡಿನ ದಾಳಿಗೆ ಓರ್ವ ಪ್ಯಾಲೆಸ್ತೇನ್ ನಾಗರಿಕ ಬಲಿಯಾಗಿದ್ದಾರೆ. ಇಬ್ಬರು ಗಾಯಗೊಂಡಿದ್ದಾರೆ ಅಂತ ಪ್ಯಾಲೆಸ್ತೇನ್ ಮಾಹಿತಿ ನೀಡಿದೆ. ಇದ್ರಿಂದ ಮತ್ತೊಮ್ಮೆ ಕದನ ವಿರಾಮ ಉಲ್ಲಂಘನೆಯಾಗಿದ್ದು, ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಇಸ್ರೇಲ್​, ಪ್ಯಾಲೆಸ್ತೇನ್ ಮತ್ತು ಇಸ್ರೇಲಿಗರ ನಡುವೆ ಗಲಾಟೆ ನಡೀತಾ ಇತ್ತು. ಈ ವೇಳೆ ನಮ್ಮ ಯೋಧರು ಗಲಾಟೆ ನಿಲ್ಲಿಸೋದಕ್ಕೆ ಹೋಗಿದ್ರು. ಆದ್ರೆ ಈ ವೇಳೆ ವ್ಯಕ್ತಿಯೊಬ್ಬ ಯೋಧರ ಕಡೆಗೆ ಅನುಮಾನಾಸ್ಪದ ವಸ್ತು ಎಸೆದಿದ್ದು, ಸ್ಫೋಟ ಸಂಭವಿಸಿತ್ತು. ಹೀಗಾಗಿ ಆತನ ಮೇಲೆ ಇಸ್ರೇಲಿ ಯೋಧರು ಗುಂಡು ಹಾರಿಸಿದ್ರು ಅಂತ ಹೇಳಿದೆ.

-masthmagaa.com

 

Contact Us for Advertisement

Leave a Reply