ಲೆಬೆನಾನ್‌ ಮೇಲೆ ಇಸ್ರೇಲ್‌ ಭೀಕರ ದಾಳಿ: ಒಟ್ಟು 9 ಸಾವು!

masthmagaa.com:

ಇಸ್ರೇಲ್‌ ಇತ್ತ ಲೆಬೆನಾನ್‌ ಮೇಲೆ ಭೀಕರ ದಾಳಿ ನಡೆಸಿದ ಪರಿಣಾಮ 4 ಮಕ್ಕಳು ಸಹಿತ ಒಟ್ಟು 9 ಜನ ಅಸುನೀಗಿದ್ದಾರೆ. ಲೆಬೆನಾನ್‌ನ ಹಿಜ್ಬುಲ್ಲಾ ಪಡೆ ಹಮಾಸ್‌ ಬೆಂಬಲಿಸಿ ಇಸ್ರೇಲ್‌ ಗಡಿಯಲ್ಲಿ ರಾಕೆಟ್‌ ದಾಳಿ ಮಾಡಿ ಒಬ್ಬ ಯೋಧನನ್ನ ಹತ್ಯೆ ಮಾಡಿತ್ತು. ಇದಕ್ಕೆ ಪ್ರತಿಯಾಗಿ ದಕ್ಷಿಣ ಲೆಬೆನಾನ್‌ನಲ್ಲಿ ನಾವು ಈ ಸ್ಪೋಟಕ ದಾಳಿಗಳನ್ನ ನಡೆಸಿದ್ದೇವೆ ಅಂತ ಇಸ್ರೇಲ್‌ ಹೇಳಿದೆ. ಅಂದ್ಹಾಗೆ ಕಳೆದ ನಾಲ್ಕು ತಿಂಗಳಿಂದ ಇಸ್ರೇಲ್‌-ಲೆಬೆನಾನ್‌ ಗಡಿಯಲ್ಲಿ ಹೆಜ್ಬುಲ್ಲಾ-ಇಸ್ರೇಲ್‌ ಸೇನೆ ಮಧ್ಯೆ ಗುಂಡಿನ ಕಾಳಗ ನಡಿತಾನೆ ಇದೆ. ಮತ್ತೊಂದೆಡೆ ಟೆಸ್ಲಾ ದಿಗ್ಗಜ ಎಲಾನ್‌ ಮಸ್ಕ್‌ರ ಸ್ಟಾರ್‌ಲಿಂಕ್‌ ಇಂಟರ್‌ನೆಟ್‌ ಸರ್ವಿಸ್‌ನ ಬಳಕೆಗೆ ಇಸ್ರೇಲ್‌ ಸರ್ಕಾರ ಸಮ್ಮತಿ ನೀಡಿದೆ. ಈ ಬಗ್ಗೆ ಇಸ್ರೇಲ್‌ನ ಕಮ್ಯೂನಿಕೇಶನ್‌ ಮಿನಿಸ್ಟರ್‌, ಸ್ಟಾರ್‌ಲಿಂಕ್‌ ಇಂಟರ್‌ನೆಟ್‌ ಸರ್ವಿಸ್‌ನ್ನ ಗಾಜಾ ಹಾಗೂ ಇಸ್ರೇಲ್‌ನಲ್ಲಿ ಬಳಸಲಾಗುತ್ತೆ ಅಂತ ಘೋಷಿಸಿದ್ದಾರೆ. ಗಾಜಾದ ರಫಾ ನಗರದ ಆಸ್ಪತ್ರೆಗೆ ಈ ಇಂಟರ್‌ನೆಟ್‌ ಸರ್ವಿಸ್‌ ಬಳಕೆಯಾಗಲಿದೆ ಅಂತ ವರದಿಯಾಗಿದೆ. ಅಂದ್ಹಾಗೆ ಈ ಸ್ಟಾರ್‌ ಲಿಂಕ್‌ ನೆಟವರ್ಕ್‌ ಇಸ್ರೇಲ್‌ನ ದಾಳಿಗೆ ಇನ್ನಷ್ಟು ಸಹಕಾರಿಯಾಗಲಿದೆ ಅಂತೇಳಲಾಗ್ತಿದೆ.

-masthmagaa.com

Contact Us for Advertisement

Leave a Reply