ಸಮಯಕ್ಕೆ ಸರಿಯಾಗಿ ಉತ್ತರ ಕೊಡ್ತೀವಿ: ಇರಾನ್‌ಗೆ ಇಸ್ರೇಲ್‌ ಎಚ್ಚರಿಕೆ!

masthmagaa.com:

ಇಸ್ರೇಲ್‌ ಮೇಲೆ 300ಕ್ಕೂ ಅಧಿಕ ಡ್ರೋನ್‌ ಮತ್ತು ಕ್ಷಿಪಣಿಗಳ ಮಳೆ ಸುರಿಸಿರೋ ಇರಾನ್‌ಗೆ ಇದೀಗ ಇಸ್ರೇಲ್‌ ಕೂಡ ತೀಕ್ಷ್ಣವಾಗಿ ಪ್ರತಿಕ್ರಿಯೆಸಿದೆ. ಸಮಯಕ್ಕೆ ಸರಿಯಾಗಿ ಇರಾನ್‌ ದಾಳಿಗೆ ಉತ್ತರ ಕೊಡ್ತೀವಿ ಅಂತ ಬಿಗ್‌ ವಾರ್ನಿಂಗ್‌ ಕೊಟ್ಟಿದೆ. ಈ ಮೂಲಕ ಮಿಡಲ್‌ಈಸ್ಟ್‌ನಲ್ಲಿ ಇರಾನ್‌ ಹಾಗೂ ಇಸ್ರೇಲ್‌ ನಡುವೆ ಮತ್ತೊಂದು ಸುತ್ತಿನ ಕಾದಾಟ ನಡೆಯೋ ಸೂಚನೆ ದಟ್ಟವಾಗಿದೆ. ಈ ಬಗ್ಗೆ ಇಸ್ರೇಲ್‌ನ ಹಿರಿಯ ಆಡಳಿತ ಅಧಿಕಾರಿಯೊಬ್ರು ಎಚ್ಚರಿಕೆ ನೀಡಿದ್ದಾರೆ. ʻಇರಾನ್‌ನ ಹೆಚ್ಚಿನ ಕ್ಷಿಪಣಿಗಳನ್ನ ಹೊಡೆದುರುಳಿಸಿ…ಇಸ್ರೇಲ್‌ ಯಶಸ್ವಿಯಾಗಿ ತನ್ನನ್ನ ತಾನು ರಕ್ಷಣೆ ಮಾಡ್ಕೊಂಡಿದೆ. ಸೋ ಇರಾನ್‌ ವಿರುದ್ಧ ನಮೀಗಾಗಲೇ ಗೆಲುವು ಸಿಕ್ಕಂತಾಗಿದೆ. ಆದ್ರಿಂದ ಇಸ್ರೇಲ್‌ನ ಮುಂದಿನ ಹೆಜ್ಜೆ ಏನಿರ್ಬಹುದು…ಇಸ್ರೇಲ್‌ ಮುಂದೆ ಏನ್‌ ಮಾಡ್ಬೋದು ಅನ್ನೋ ಬಗ್ಗೆ ಇರಾನ್‌ ಯೋಚಿಸ್ಬೇಕು..ನಾವು ಸರಿಯಾದ ಟೈಮನ್ನ ನೋಡಿ ತಕ್ಕ ಪ್ರತಿಕ್ರಿಯೆ ಕೊಡ್ತೀವಿ’ ಅಂತ ಇಸ್ರೇಲ್‌ ಅಧಿಕಾರಿ ಹೇಳಿದ್ದಾರೆ. ಇದರ ಬೆನ್ನಲ್ಲೇ ಇಸ್ರೇಲ್‌ನ ಪ್ರತಿದಾಳಿ ಹೇಗಿರ್ಬೋದು ಅನ್ನೋದ್ರ ಬಗ್ಗೆ ಮಿಡಲ್‌ಈಸ್ಟ್‌ನಲ್ಲಿ ಆತಂಕ ಹುಟ್ಟಿಕೊಂಡಿದೆ. ಇಸ್ರೇಲ್‌ ಯಾವ್ಯಾವ ರೀತಿಯಲ್ಲಿ ದಾಳಿ ಮಾಡ್ಬೋದು ಅಂತೆಲ್ಲಾ ಊಹಿಸಿಕೊಂಡು…ಕೆಲ ಬೆಳವಣಿಗೆಗಳ ಆಧಾರದ ಮೇಲೆ ವಿಶ್ವದ ಪ್ರಮುಖ ದಿನಪತ್ರಿಕೆಗಳು ಈಗ ಲೇಖನಗಳನ್ನ ಬರೆದು ರಿಪೋರ್ಟ್‌ ಮಾಡಿವೆ. ಅವುಗಳ ಫ್ರಂಟ್‌ ಪೇಜ್‌ನಲ್ಲಿ ಇಸ್ರೇಲ್‌ನ ಪ್ರತಿದಾಳಿ ಕುರಿತಾದ ಸ್ಟೋರಿಯನ್ನೇ ಪ್ರಿಂಟ್‌ ಮಾಡಲಾಗಿದೆ. ಅದರಲ್ಲಿ ಇಸ್ರೇಲ್‌ ಪ್ರತಿದಾಳಿ ಹೇಗಿರುತ್ತೆ, ಹೇಗ್‌ ಮಾಡಲಾಗುತ್ತೆ…ಈಗ್ಲೇ ದಾಳಿ ನಡೆಸ್ಬೋದಾ…ಇದಕ್ಕೆ ಇಸ್ರೇಲ್‌ ಯಾವ್‌ ರೀತಿ ಸಿದ್ಧತೆ ಮಾಡ್ಕೊಳ್ತಿದೆ ಅನ್ನೋದ್ರ ಬಗ್ಗೆ ಫೋಕಸ್‌ ಮಾಡಿ ವರದಿ ಪ್ರಕಟ ಮಾಡಿದೆ. ಈ ಮೂಲಕ ಇಸ್ರೇಲ್‌ ಇರಾನ್ ಮೇಲೆ ಪ್ರತಿದಾಳಿ ನಡೆಸೋದು ಗ್ಯಾರೆಂಟಿ ಅನ್ನೋ ವಾತವರಣ ಸೃಷ್ಟಿಯಾಗ್ತಿದೆ. ಇನ್ನೊಂದು ಕಡೆ ಇಸ್ರೇಲ್ ಮೇಲೆ ವಾಯುದಾಳಿ ನಡೆಸಿದ ಇರಾನ್‌ನ ನಡೆಯನ್ನು ವಿಶ್ವಸಂಸ್ಥೆಯ ಕಾರ್ಯದರ್ಶಿ ಆಂಟೊನಿಯೊ ಗುಟೇರಸ್ ತೀವ್ರವಾಗಿ ಖಂಡಿಸಿದ್ದಾರೆ. ಮಧ್ಯಪ್ರಾಚ್ಯಕ್ಕಾಗಲಿ, ವಿಶ್ವಕ್ಕಾಗಲಿ ಮತ್ತೊಂದು ಯುದ್ಧವನ್ನು ನಿಭಾಯಿಸುವಷ್ಟು ಶಕ್ತಿ ಇಲ್ಲ. ‘ಮಧ್ಯಪ್ರಾಚ್ಯದಲ್ಲಿ ಸೇನಾಪಡೆಗಳ ಮುಖಾಮುಖಿಗಳಿಗೆ ಕಾರಣವಾಗುವ ಯಾವುದೇ ಕ್ರಮವನ್ನು ತಪ್ಪಿಸಲು ಉಭಯ ಪಕ್ಷಗಳು ಗರಿಷ್ಠ ಸಂಯಮವನ್ನು ಕಾಪಾಡಿಕೊಳ್ಳಬೇಕು’ ಅಂತ ಹೇಳಿದ್ದಾರೆ. ಜೊತೆಗೆ ಎರಡೂ ದೇಶಗಳು ಉದ್ವಿಗ್ನತೆ ಕಮ್ಮಿ ಮಾಡಿಕೊಳ್ಳಬೇಕು ಅಂತ ಆಗ್ರಹ ಮಾಡಿದ್ದಾರೆ. ಇನ್ನು ಇರಾನ್‌ ಇಸ್ರೇಲ್‌ ಕದನ ಬೆನ್ನಲ್ಲೇ ವಿಶ್ವದಲ್ಲಿ ತೈಲ ಬೆಲೆ ಏರಿಕೆ ಬಗ್ಗೆಯೂ ಈಗ ಚರ್ಚೆ ಮತ್ತು ಆತಂಕ ಶುರುವಾಗಿದೆ.

ಇನ್ನೊಂದ್ಕಡೆ ದಿನಗಳ ಹಿಂದಷ್ಟೇ ಭಾರತದ ಕಡೆ ಸಾಗಿ ಬರ್ತಿದ್ದ ಇಸ್ರೇಲ್‌ನ ಕಂಟೈನರ್‌ ಹಡಗು MSC Ariesನ್ನ ಇರಾನ್‌ನ ರೆವಲ್ಯೂಷನರಿ ಗಾರ್ಡ್‌ನ ಕಮಾಂಡೋಗಳು ಸೀಜ್‌ ಮಾಡಿದ್ರು. ಈ ಹಡಗಲ್ಲಿ ಒಟ್ಟು 17 ಮಂದಿ ಭಾರತೀಯ ಸಿಬ್ಬಂದಿಯಿದ್ರು. ಸೋ, ಭಾರತದ ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ ಇರಾನ್‌ನ ವಿದೇಶಾಂಗ ಸಚಿವರಿಗೆ ಕಾಲ್‌ ಮಾಡಿ ಭಾರತೀಯ ಸಿಬ್ಬಂದಿ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ರು. ಇದೀಗ ಈ ಬಗ್ಗೆ ಇರಾನ್‌ನ ವಿದೇಶಾಂಗ ಸಚಿವ ಹೊಸೆನ್‌ ಅಮೀರ್‌-ಅಬ್ದೊಲ್ಲಾಹಿಯಾನ್‌ ಪಾಸಿಟಿವ್‌ ಆಗಿ ರಿಯಾಕ್ಟ್‌ ಮಾಡಿದ್ದಾರೆ. ʻಸೀಜ್‌ ಮಾಡಲಾಗಿರೋ ಹಡಗಿನ ಬಗ್ಗೆ ಇರಾನ್‌ ಸರ್ಕಾರ ಮಾಹಿತಿ ಕಲೆಹಾಕ್ತಿದೆ. ಆದಷ್ಟು ಬೇಗ ಹಡಗಿನಲ್ಲಿರೋ ಭಾರತೀಯ ಸಿಬ್ಬಂದಿಯನ್ನ ಮೀಟ್‌ ಮಾಡೋಕೆ ಭಾರತೀಯ ಅಧಿಕಾರಿಗಳಿಗೆ ಅನುಮತಿ ನೀಡ್ತೇವೆʼ ಅಂತೇಳಿದ್ದಾರೆ.

-masthmagaa.com

Contact Us for Advertisement

Leave a Reply