ಇಸ್ರೇಲ್ ಸೇನೆಯ ಗುಂಡಿನ ನಾಲ್ವರು ಪ್ಯಾಲೆಸ್ತೇನಿಯರು ಬಲಿ!

masthmagaa.com:

ಇಸ್ರೇಲ್​​​​ ಸೇನೆಯ ಗುಂಡಿಗೆ ನಾಲ್ವರು ಪ್ಯಾಲೆಸ್ತೇನಿಯರು ಬಲಿಯಾಗಿದ್ದಾರೆ. ಇಸ್ರೇಲ್ ಆಕ್ರಮಿತ ವೆಸ್ಟ್​ಬ್ಯಾಂಕ್​​ನಲ್ಲಿ ರೇಡ್ ಮಾಡಿ, ಓರ್ವ ಗನ್​ಮ್ಯಾನ್​​​ನ್ನು ಅರೆಸ್ಟ್ ಮಾಡಲು ಇಸ್ರೇಲ್ ಸೇನೆ ಯತ್ನಿಸಿದೆ. ಈ ವೇಳೆ ಫೈರಿಂಗ್​ ನಡೆದು ನಾಲ್ವರು ಪ್ರಾಣ ಬಿಟ್ಟಿದ್ದಾರೆ. ಒಬ್ಬರಿಗೆ ಗಂಭೀರ ಗಾಯಗಳಾಗಿವೆ ಅಂತ ಪ್ಯಾಲೆಸ್ತೇನ್ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ವೆಸ್ಟ್​ ಬ್ಯಾಂಕ್​​ನ ಜೆನಿನ್ ನಗರದಲ್ಲಿ ಈ ಘಟನೆ ನಡೆದಿದೆ. ಈ ತಿಂಗಳ ಆರಂಭದಲ್ಲಿ ಇದೇ ನಗರದಲ್ಲಿ ಇಸ್ರೇಲ್ ಯೋಧರ ಗುಂಡಿ ಪ್ಯಾಲೆಸ್ತೇನಿ ಬಲಿಯಾದ ಬಳಿಕ ಟೆನ್ಶನ್ ಜಾಸ್ತಿ ಇದೆ.. ಇದ್ರ ನಡುವೆಯೇ ಈಗ ಇಸ್ರೇಲಿ ಗುಂಡಿಗೆ 4 ಬಲಿಯಾಗಿದೆ.

-masthmagaa.com

Contact Us for Advertisement

Leave a Reply