ಡಾಕ್ಟರ್‌ಗಳ ವೇಷ ತೊಟ್ಟ ಇಸ್ರೇಲ್‌ ಸೈನಿಕರು! ಹಮಾಸ್‌ಗಳಿಗೆ ಆಪರೇಶನ್‌!

masthmagaa.com:

ಮತ್ತೊಂದು ಮಜಲು ಪಡೆದಿರೋ ಇಸ್ರೇಲ್‌-ಹಮಾಸ್‌ ಯುದ್ಧದಲ್ಲೀಗ ರೋಚಕ ಘಟನೆ ನಡೆದಿದೆ. ಹಮಾಸ್‌ಗಳ ಮೇಲೆ ಇಸ್ರೇಲ್‌ ಸೈನಿಕರು ಸಿನಿಮೀಯ ರೀತಿಯ ಕಾರ್ಯಚರಣೆ ಮಾಡಿದ್ದಾರೆ. ಆಸ್ಪತ್ರೆಯಲ್ಲಿ ತಲೆಮರಸಿಕೊಂಡಿದ್ದ ಹಮಾಸ್‌ಗಳ ವಿರುದ್ದ ನರ್ಸ್‌ ಹಾಗೂ ಡಾಕ್ಟರ್‌ಗಳ ವೇಷದಲ್ಲಿ ಹೋಗಿ ಆಪರೇಶನ್‌ ಮಾಡಲಾಗಿದೆ. ವೆಸ್ಟ್‌ಬ್ಯಾಂಕ್‌ ಅಂದ್ರೆ ಪಾಲೇಸ್ತೀನ್‌ ಅಥಾರಿಟಿ ಅಡಳಿತ ಮಾಡ್ತಿರೋ ಜೆನಿನ್‌ ಸಿಟಿಯ Ibn Sina ಆಸ್ಪತ್ರೆಯಲ್ಲಿ ಈ ಕಾರ್ಯಾಚರಣೆ ನಡೆದಿದೆ. ಇದರಲ್ಲಿ 3 ಜನ ಹಮಾಸ್‌ಗಳು ಮೃತಪಟ್ಟಿದ್ದಾರೆ. ಇವರೆಲ್ಲಾ ಇಸ್ರೇಲ್‌ನಲ್ಲಿ ಉಗ್ರ ಚಟುವಟಿಕೆಗಳಿಗೆ ಕುಮ್ಮಕ್ಕು ಕೊಡ್ತಿದ್ರು ಅಂತ ಇಸ್ರೇಲ್‌ ಹೇಳಿದೆ. ಜೊತೆಗೆ ನಮ್ಮ ಪಡೆಗಳು ಎಲ್ಲಾ ಕಡೆ ಕೆಲಸ ಮಾಡ್ತವೆ. ಇದನ್ನ ಶತ್ರುಗಳಿಗೆ ತಿಳಿಸಿ. ನಮ್ಮ ದೇಶವನ್ನ ಮತ್ತು ನಮ್ಮ ನಾಗರಿಕರನ್ನ ರಕ್ಷಣೆ ಮಾಡೋಕೆ ಇಸ್ರೇಲ್‌ ಏನ್‌ ಬೇಕಾದ್ರೂ ಮಾಡುತ್ತೆ ಅಂತ ಇಸ್ರೇಲ್‌ ಸರ್ಕಾರ ಹೇಳಿದೆ. ಸಧ್ಯ ಇಸ್ರೇಲ್‌ ನಡೆಸಿರೋ ಕಾರ್ಯಾಚರಣೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಫುಲ್‌ ವೈರಲ್‌ ಆಗ್ತಾ ಇದೆ. ಮಂಗಳವಾರ ಹಮಾಸ್‌ಗಳು ನಿದ್ರೆ ಮಾಡ್ತಿದ್ದಾಗ, ಆ ಟೈಮಲ್ಲಿ ಡಾಕ್ಟರ್‌ ಹಾಗೂ ನರ್ಸ್‌ ವೇಷದಲ್ಲಿ ಹೋಗಿ ಈ ಕಾರ್ಯಾಚರಣೆ ನಡೆಸಲಾಗಿದೆ.

-masthmagaa.com

Contact Us for Advertisement

Leave a Reply