ಸಿರಿಯಾದಲ್ಲಿ ಇಸ್ರೇಲ್‌ ದಾಳಿಗೆ 38 ಬಲಿ; ಗಾಜಾ ನೆರವಿಗೆ ಜಪಾನ್‌ ದೌಡು!

masthmagaa.com:

ಸಿರಿಯಾದಲ್ಲಿ ಇಸ್ರೇಲ್ ನಡೆಸಿದ ಏರ್‌ಸ್ಟ್ರೈಕ್‌ನಲ್ಲಿ 38 ಜನ ಮೃತಪಟ್ಟಿದ್ದಾರೆ ಅಂತ ಸಿರಿಯಾ ರಕ್ಷಣಾ ಇಲಾಖೆ ಹೇಳಿದೆ. ಉತ್ತರ ಸಿರಿಯಾದ ಅಲೆಪ್ಪೊನಲ್ಲಿ ಈ ದಾಳಿ ನಡೆದಿದ್ದು, ಮೃತಪಟ್ಟವರಲ್ಲಿ 5 ಜನ ಹೆಜ್ಬೊಲ್ಲಾಗಳಿದ್ರು ಅನ್ನೋ ಮಾಹಿತಿ ಸಿಕ್ಕಿದೆ. ಇನ್ನೊಂದೆಡೆ ಅತ್ತ ಗಾಜಾ ಯುದ್ದದಿಂದ ಕಂಗೆಟ್ಟಿರೊ ಪ್ಯಾಲಸ್ತೀನಿಯರ ನೆರವಿಗೆ ಜಪಾನ್‌ ಮುಂದಾಗಿದೆ. ವಿಶ್ವ ಸಂಸ್ಥೆಯ ಪ್ಯಾಲಸ್ತೀನ್‌ ನಿರಾಶ್ರಿತರ ಸಂಸ್ಥೆ ಅಂದ್ರೆ UNRWAಗೆ ಫಂಡ್‌ ನಿಡೋಕೆ ಜಪಾನ್‌ ತಯಾರಿ ನಡೆಸಿದೆ ಅಂತ ವರದಿಯಾಗಿದೆ. ಅಕ್ಟೋಬರ್‌ 7ರ ಹಮಾಸ್‌ ದಾಳಿಯಲ್ಲಿ UNRWA ಸಂಸ್ಥೆಯ 12 ಜನ ಭಾಗಿಯಾಗಿದ್ರು ಅನ್ನೋ ಆರೋಪ ಬಂದ ಮೇಲೆ, ಜಪಾನ್‌ ನೆರವು ನೀಡೋದನ್ನ ನಿಲ್ಲಿಸಿತ್ತು. ಆದ್ರೆ ಈಗ ಗಾಜಾದಲ್ಲಿ ದಾಳಿ ಹೆಚ್ಚಾಗ್ತಿರೊ ಹೊತ್ತಲ್ಲೆ ಮತ್ತೆ ನೆರವು ನೀಡಲು ಜಪಾನ್ ಸಿದ್ದತೆ ನಡೆಸ್ತಿದೆ.

-masthmagaa.com

Contact Us for Advertisement

Leave a Reply