ಪುಷ್ಪಕ್‌ ಲಾಂಚ್‌ ವೆಹಿಕಲ್‌ ಯಶಸ್ವಿ ಪರೀಕ್ಷೆ ನಡೆಸಿದ ಇಸ್ರೋ!

masthmagaa.com:

ಸ್ಪೇಸ್‌ ವಿಚಾರದಲ್ಲಿ ಇತ್ತೀಚೆಗೆ ಭಾರೀ ಯಶಸ್ಸು ಕಾಣ್ತಿರೋ ಇಸ್ರೋ… ತನ್ನ ಒಂದಲ್ಲಾ ಒಂದು ಪ್ರಾಜೆಕ್ಟ್‌ನಿಂದ ಜಗತ್ತೇ ಹುಬ್ಬೇರಿಸಿ ನೋಡೋ ಹಾಗೆ ಮಾಡ್ತಿದೆ. ಇದೀಗ ದೇಶದ ಮೊದಲ ರೀಯುಸೇಬಲ್‌ ಲಾಂಚ್‌ ವೆಹಿಕಲ್‌ ಅಥ್ವಾ ಮರುಬಳಕೆ ಮಾಡಬಲ್ಲ ಲಾಂಚ್‌ ವೆಹಿಕಲ್‌ನ ಲ್ಯಾಂಡಿಂಗ್‌ ಟೆಸ್ಟ್‌ನ್ನ ಯಶಸ್ವಿಯಾಗಿ ನೆರವೇರಿಸಿದೆ. ಎಸ್‌….ʻಪುಷ್ಪಕ್‌ʼ ಅನ್ನೋ ಲಾಂಚ್‌ ವೆಹಿಕಲ್‌ನ್ನ ಕರ್ನಾಟಕದ ಚಿತ್ರದುರ್ಗದಲ್ಲಿರೋ ಚಳ್ಳಕೆರೆಯ ಏರೋನಾಟಿಕಲ್‌ ಟೆಸ್ಟ್‌ ರೇಂಜ್‌ನಲ್ಲಿ (ATR) ಪರೀಕ್ಷೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಇಸ್ರೋ ಮುಖ್ಯಸ್ಥ ಎಸ್‌. ಸೋಮನಾಥ್‌ ಮತ್ತು ಇತರೆ ಹಿರಿಯ ಅಧಿಕಾರಿಗಳು ಹಾಜರಿದ್ರು. ಈ ಬಗ್ಗೆ ಮಾಹಿತಿ ನೀಡಿರೋ ಇಸ್ರೋ, ʻಇಸ್ರೋ ಪುನಃ ಯಶಸ್ವಿ ಕಾರ್ಯಚರಣೆ ನಡೆಸಿದೆ. ಪುಷ್ಪಕ್‌ ಲಾಂಚ್‌ ವೆಹಿಕಲ್‌ ಆಟೋಮ್ಯಾಟಿಕ್‌ ಆಗಿ ಸಾಫ್ಟ್‌ ಲ್ಯಾಂಡಿಂಗ್‌ ಮಾಡಿದೆ. ಭಾರತೀಯ ವಾಯು ಪಡೆಯ ಚಿನೂಕ್‌ ಹೆಲಿಕಾಪ್ಟರ್‌ ಈ ಲಾಂಚ್‌ ವೆಹಿಕಲ್‌ನ್ನ ಲಿಫ್ಟ್‌ ಮಾಡಿ, ಸುಮಾರು 4.5 ಕಿಮೀ ಎತ್ತರದಿಂದ ಅದನ್ನ ರಿಲೀಸ್‌ ಮಾಡಿದೆ. ಪುಷ್ಪಕ್‌ ಯಾವ್ದೇ ತೊಂದರೆಯಿಲ್ದೇ ನಿಖರವಾಗಿ…ರನ್‌ವೇ ಮೇಲೆ ಸ್ಮೂತ್‌ ಆಗಿ ಲ್ಯಾಂಡ್‌ ಮಾಡಿದೆ. ತನ್ನ ಬ್ರೇಕ್‌ ಪ್ಯಾರಾಚೂಟ್‌, ಲ್ಯಾಂಡಿಂಗ್‌ ಗೇರ್‌ ಬ್ರೇಕ್ಸ್‌ ಮತ್ತು ನೋಸ್‌ ವೀಲ್‌ ಸ್ಟೇರಿಂಗ್‌ ಸಿಸ್ಟಮ್‌ ಬಳಸಿ ಹಾಲ್ಟ್‌ ಆಗಿದೆʼ ಅಂತ ಹೇಳಿದೆ. ಇನ್ನು ಪುಷ್ಪಕ್‌ RLVಯನ್ನ ಆಲ್‌-ರಾಕೆಟ್‌ ಅಂದ್ರೆ ಎಲ್ಲಾ ಉದ್ದೇಶಗಳಿಗೂ ಬಳಸಲಾಗೋ…ಮಲ್ಟಿ ಪರ್ಪಸ್‌ ರಾಕೆಟ್‌ ಆಗಿ ಡಿಸೈನ್‌ ಮಾಡಲಾಗಿದೆ. ಇದ್ರಲ್ಲಿ ಸಾಕಷ್ಟು ಅಡ್ವಾನ್ಸ್ಡ್‌ ಟೆಕ್ನಾಲಜಿಗಳನ್ನ ಬಳಸಲಾಗಿದೆ. ಅಂದ್ಹಾಗೆ ಈಗ ನಡೆಸಲಾದ ಟೆಸ್ಟ್‌, ಪುಷ್ಪಕ್‌ ಲಾಂಚ್‌ ವೆಹಿಕಲ್‌ನ ಮೂರನೇ ಟೆಸ್ಟ್‌ ಆಗಿದೆ. ಕಳೆದ ಟೆಸ್ಟ್‌ಗಳಲ್ಲಿ ಅದ್ರ ಸಾಫ್ಟ್‌ ಲ್ಯಾಂಡಿಂಗ್‌ ಸಾಮರ್ಥ್ಯ ಹೆಚ್ಚು ಮಾಡೋ ಕಡೆ ಗಮನ ಹರಿಸಲಾಗಿತ್ತು. ದಶಕದಿಂದ ಅಭಿವೃದ್ಧಿ ಹಂತದಲ್ಲಿದ್ದ ಈ ಪ್ರಾಜೆಕ್ಟ್‌ನ ಟೆಸ್ಟ್‌ ಕಳೆದ ವರ್ಷ ಏಪ್ರಿಲ್‌ನಲ್ಲೂ ಯಶಸ್ವಿಯಾಗಿತ್ತು. ಆಟೋಮ್ಯಾಟಿಕ್‌ ಸಾಫ್ಟ್‌ ಲ್ಯಾಂಡಿಂಗ್‌ ಮಾಡಿತ್ತು. ನಂತ್ರ ಇದ್ರ ಆರ್ಬಿಟಲ್‌ ರೀ-ಎಂಟ್ರಿ ಸಾಮರ್ಥ್ಯ ಹೆಚ್ಚಿಸೋ ಬಗ್ಗೆ ಕೆಲಸ ಮಾಡಲಾಯ್ತು. ಅಂದ್ಹಾಗೆ ಇದಕ್ಕೆ ರಾಮಾಯಣದಲ್ಲಿ ಬರೋ ಪುಷ್ಪಕ ವಿಮಾನದ ಹೆಸರನ್ನೇ ಇಡಲಾಗಿದೆ. 100 ಕೋಟಿಗೂ ಅಧಿಕ ಬಂಡವಾಳದಲ್ಲಿ ಡೆವೆಲಪ್‌ ಮಾಡಿರೋ ಪುಷ್ಪಕ್‌ ಲಾಂಚ್‌ ವೆಹಿಕಲ್‌, ʻಭಾರತೀಯ ಅಂತರಿಕ್ಷ ಸ್ಟೇಷನ್‌ʼ ಸ್ಥಾಪಿಸೋಕೂ ಸಹಾಯ ಮಾಡಲಿದೆ ಎನ್ನಲಾಗ್ತಿದೆ.

-masthmagaa.com

Contact Us for Advertisement

Leave a Reply