ಮುಸಲೋನಿಯನ್ನ ಹೊಗಳಿದ್ದರು ಈ ಮಹಿಳಾ ಪ್ರಧಾನಿ! ಮೋದಿ ಭೇಟಿ ಮಾಡಿದ ಇವರ ಹಿನ್ನೆಲೆ ಏನು ಗೊತ್ತಾ?

masthmagaa.com:

ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಇದೇ ಮೊದಲ ಬಾರಿಗೆ ಭಾರತಕ್ಕೆ ಬಂದಿದ್ದು ಪ್ರಧಾನಿ ಮೋದಿ ಜೊತೆಗೆ ಮಾತನಾಡಿದ್ದಾರೆ. ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಜಾರ್ಜಿಯಾ ಮೆಲೋನಿಗೆ ಪ್ರಧಾನಿ ಮೋದಿ ಸ್ವಾಗತ ಕೋರಿ ಬರಮಾಡಿಕೊಂಡಿದ್ದಾರೆ. ಬಳಿಕ ಉಭಯ ನಾಯಕರು ಚರ್ಚೆ ನಡೆಸಿದ್ದಾರೆ. ನಂತರ ಮಾತನಾಡಿದ ಮೆಲೋನಿ, ನಾವು ನಮ್ಮ ಈ ಸಂಬಂಧವನ್ನು ಮತ್ತಷ್ಟು ಹೆಚ್ಚಿಸಲು ಬಯಸಿದ್ದೇವಿ. ನಮ್ಮ ಪಾಲುದಾರಿಕೆ ಏನಿದೆ ಅದನ್ನ ಸ್ಟ್ರಾಟಜಿಕ್‌ ಪಾಲುದಾರಿಕೆಯನ್ನಾಗಿ ಪರಿವರ್ತಿಸೋಕೆ ನಾವು ನಿರ್ಧರಿಸಿದ್ದೇವೆ.. ಯಾಕಂದ್ರೆ ನಾವು ಬಹಳ ಗಟ್ಟಿಯಾದ ಸಂಬಂಧ ಹೊಂದಿದ್ದೇವೆ ಅಂತ ಹೇಳಿದ್ದಾರೆ. ಇದೇ ವೇಳೆ ಮೋದಿಯವರನ್ನ ಹಾಡಿ ಹೊಗಳಿರುವ ಮೆಲೋನಿ, ಪಿಎಂ ಮೋದಿಯವರನ್ನ ಪ್ರಪಂಚದಾದ್ಯಂತ ಇರೋ ಎಲ್ಲ ನಾಯಕರು ಇಷ್ಟ ಪಡ್ತಾರೆ. ಮೋದಿ ಜಗತ್ತಿನ ಪ್ರಮುಖ ನಾಯಕ ಅನ್ನೋದು ನಿಜವಾಗಿಯೂ ಸಾಬೀತಾಗಿದೆ ಅಂತ ಹೇಳಿದ್ದಾರೆ. ಬಳಿಕ ಮಾತನಾಡಿದ ಮೋದಿ, ಭಾರತ ಮತ್ತು ಇಟಲಿ ನಡುವೆ ‘ಸ್ಟಾರ್ಟ್ ಅಪ್ ಬ್ರಿಡ್ಜ್’ ಸ್ಥಾಪನೆ ಮಾಡ್ತಿದ್ದೀವಿ. ಇದರ ಜೊತೆಗೆ ಉಭಯ ದೇಶಗಳು ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತಿರುವ ಇನ್ನೂ ಒಂದು ವಲಯವಿದೆ, ಅದೇ ರಕ್ಷಣಾ ಸಹಕಾರ..ಭಾರತ ಹಾಗೂ ಇಟಲಿ ರಕ್ಷಣಾ ಕ್ಷೇತ್ರದಲ್ಲೂ ಉತ್ತಮ ಸಹಕಾರ ಹೊಂದಲಿವೆ. ಇಂಡೋ ಫೆಸಿಫಿಕ್‌ ಭಾಗದಲ್ಲಿ ಇಟಲಿ ಭಾರತ ಎರಡು ಸಹಕಾರ ಹೊಂದಿವೆ. ಎರಡೂ ದೇಶಗಳ ರಕ್ಷಣಾ ಸಂಬಂಧ ವೃದ್ದಿ ಇಬ್ರಿಗೂ ಲಾಭವಾಗುತ್ತೆ ಅಂತ ಮೋದಿ ಹೇಳಿದ್ದಾರೆ. ಅಂದಹಾಗೆ ಭಾರತ ಪ್ರತಿವರ್ಷ ನಡೆಸುವ Raisina Dialogue ಸಭೆಗಾಗಿ ಮೆಲೋನಿಯವರು ಭಾರತಕ್ಕೆ ಆಗಮಿಸಿದ್ದು ಎರಡು ದಿನಗಳು ಇಲ್ಲೇ ಉಳಿಯಲಿದ್ದಾರೆ. ಎರಡನೇ ಮಹಾಯುದ್ದದ ಬಳಿಕ ಇಟಲಿಯಲ್ಲಿ ಮೊದಲ ಬಲಪಂಥೀಯ ಸರ್ಕಾರ ನಡೆಸ್ತಿರೋ ಜಾರ್ಜಿಯಾ ಮೆಲೊನಿ ಇಟಲಿಯ ಇತಿಹಾಸದಲ್ಲೇ ಮೊದಲ ಮಹಿಳಾ ಪ್ರಧಾನಿ ಅಂತ ಕೂಡ ಕರೆಸಿಕೊಂಡಿದ್ದಾರೆ. ಮೆಲೊನಿ ಎಂತಹ ಬಲಪಂಥೀಯ ನಾಯಕಿ ಅಂದ್ರೆ ರಾಷ್ಟ್ರೀಯತೆಯ ವಿಚಾರವಾಗಿ ಒಂದ್ಸಲ ಇಟಲಿಯ ಸರ್ವಾಧಿಕಾರಿ ಮುಸಲೋನಿಯನ್ನೇ ಹೊಗಳಿದ್ರು. ಕಳೆದ ವರ್ಷವಷ್ಟೇ ಚುನಾವಣೆಯಲ್ಲಿ ಗೆದ್ದು ಇಟಲಿಯಲ್ಲಿ ಇತಿಹಾಸ ಸೃಷ್ಟಿ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply